Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ

ವಿಶೇಷವಾಗಿ ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸು ಮುಗ್ಗಟ್ಟು ಇರುವವರು ವಿಶೇಷ ಈ ಕಾರ್ಯಾಗಾರದ ಲಾಭ ಪಡೆಯಬಹುದಾಗಿದೆ. ಹೇಗೆ ನೋಂದಣಿ ಮಾಡುವುದು? ಯಾರನ್ನು ಸಂಪರ್ಕಿಸುವುದು? ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಆರ್ಥಿಕ ಸಮಸ್ಯೆಯಿಂದ ಹೃದಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ಪರಿಚಯಸ್ಥರು, ಸಂಬಂಧಿಕರಲ್ಲಿ ಯಾರಾದರೂ ಹೃದಯ ಸಮಸ್ಯೆಗೆ ಚಿಕಿತ್ಸೆಗಾಗಿ (Heart Problem Treatment) ಪರದಾಡುತ್ತಿದ್ದಾರಾ? ಹಾಗಿದ್ದರೆ ನಿಮ್ಮ ಸಮಸ್ಯೆಗೆ ಪರಿಹಾರವೊಂದು ಇಲ್ಲಿದೆ. ಹೌದು, ಬೆಂಗಳೂರಿನ ಜಯದೇವ ಆಸ್ಪತ್ರೆ  (Bengaluru Jayadeva Hospital) ಇಂತವರಿಗೆಂದೇ ವಿಶೇಷ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.  ಆಂಜಿಯೋಪ್ಲ್ಯಾಸ್ಟಿ ಕಾರ್ಯಾಗಾರದ ಜೊತೆಗೆ 150 ಬಡರೋಗಿಗಳಿಗೆ ಉಚಿತ ಸ್ಟಂಟ್ ( Free Medicated Stents) ಸಹ ಅಳವಡಿಸಲು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮುಂದಾಗಿದೆ.

    ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಎಲ್ಲ ವರ್ಗದ ಜನರ ಕೈಗೆಟುವಂತಿರುವುದಿಲ್ಲ. ಇದನ್ನು ಗಮನಿಸಿ ವಿಶೇಷವಾಗಿ ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸು ಮುಗ್ಗಟ್ಟು ಇರುವವರು ವಿಶೇಷ ಈ ಕಾರ್ಯಾಗಾರದ ಲಾಭ ಪಡೆಯಬಹುದಾಗಿದೆ.

    ಈ ದಾಖಲಾತಿ ಕಡ್ಡಾಯವಾಗಿ ತನ್ನಿ
    ರೋಗಿಗಳು ದಾಖಲಾತಿ ಹೊಂದುವ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಹೊಂದಿರಲೇಬೇಕು ಎಂದು ಸೂಚಿಸಲಾಗಿದೆ.

    ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ
    ಒಟ್ಟು 150 ರೋಗಿಗಳಿಗೆ ಆಂಜಿಯೋಪ್ಲ್ಯಾಸ್ಟಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಶ್ರೀ ಜಯದೇವ ಹ್ರದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜೂನ್ 24ರಿಂದ 26 ರವರೆಗೆ ಕಾರ್ಯಾಗಾರ ನಡೆಯಲಿದೆ.

    ನೋಂದಾಯಿಸಿಕೊಳ್ಳಲು ಕೊನೆ ದಿನ ಯಾವತ್ತು?
    ಅಂದಹಾಗೆ ರೋಗಿಗಳು ಈ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಜೂನ್ 20 ಆಗಿದೆ. ಈ ದಿನಾಂಕದ ಒಳಗೆ ಅಗತ್ಯವುಳ್ಳ ಬಡ ಹೃದಯ ರೋಗಿಗಳು ನೋಂದಣಿ ಮಾಡಿಕೊಂಡು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. 

    Mallya Hospital: ಬೆಂಗಳೂರಿನ ಮಲ್ಯ ಆಸ್ಪತ್ರೆ ಸ್ಥಳದಲ್ಲಿ ಈಗ ಬೇರೆ ಆಸ್ಪತ್ರೆ ಇದೆ, ಚಿಕಿತ್ಸೆಗೆ ಹೋಗುವ ಮುನ್ನ ತಿಳಿದಿರಿ

    ವಿವಿಧ ಸಂಸ್ಥೆಗಳ ಸಹಯೋಗ
    ಬೆಂಗಳೂರಿನ ಶ್ರೀ ಜಯದೇವ ಹ್ರದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಮೆಡ್ಟ್ರಾನಿಕ್ಸ್, ಅಮೆರಿಕಾ ಮತ್ತು ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ವಿಸ್ಕಿನ್ ಸನ್, ಅಮೆರಿಕಾ ಇವರುಗಳ ಸಹಯೋಗದಲ್ಲಿ ಈ ವಿಶೇಷ ಕಾರ್ಯಾಗಾರ ಹಮ್ಮಿಕೊಂಡಿದೆ.

    ಯಾರನ್ನು ಸಂಪರ್ಕಿಸಬೇಕು?
    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9480827888 ಅಥವಾ 080-22977433 ಅಥವಾ 08022997432

    ವಿಳಾಸ: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು - 560069

    ಬೆಂಗಳೂರಿನ ಶ್ರೀ ಜಯದೇವ ಹ್ರದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ತೆರಳುವ ಮಾರ್ಗ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

    Jayadeva Hospital Bengaluru
    ಬೆಂಗಳೂರಿನ ಶ್ರೀ ಜಯದೇವ ಹ್ರದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

    Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕೇ? ನಿಮಗೊಂದು ಶುಭ ಸುದ್ದಿಯಿದೆ!

    ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಈ ಸೌಲಭ್ಯ
    ಪ್ರತಿ ರೋಗಿಗಳಿಗೂ ಉನ್ನತ ಗುಣಮಟ್ಟದ ಮೆಡಿಕೇಟೆಡ್ ಸ್ಟಂಟ್ಸ್ ಅಳವಡಿಸಲಾಗುವುದು. ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ಇನ್ನೇಕೆ ತಡ? ಈಗಲೇ ಆರ್ಥಿಕ ಮುಗ್ಗಟ್ಟು ಇರುವ ಅಥವಾ ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಬೆಂಗಳೂರಿನ ಶ್ರೀ ಜಯದೇವ ಹ್ರದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಯೋಜಿಸಿರುವ ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಿ. ಇದೇ ಜೂನ್ 20ನೇ ತಾರೀಖಿನ ಒಳಗೆ ಅಗತ್ಯ ದಾಖಲೆಗಳ ಸಮೇತ ನೋಂದಣಿ ಮಾಡಿಕೊಳ್ಳಿ. 
    Published by:guruganesh bhat
    First published: