Bengaluru Quiz Competition: ವಿದ್ಯಾರ್ಥಿಗಳೇ, ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ!

ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯವು ಹಮ್ಮಿಕೊಂಡಿರುವ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ, ನೋಂದಣಿ ವಿವರಗಳು ಇಲ್ಲಿವೆ. ನೀವೂ ಭಾಗವಹಿಸಿ, ಆಲ್ ದಿ ಬೆಸ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು: ವಿದ್ಯಾರ್ಥಿಗಳೇ, ನಿಮಗೆಂದೇ ಅತ್ಯುತ್ತಮ ಸ್ಪರ್ಧೆಯೊಂದು ಹುಡುಕಿಕೊಂಡು ಬಂದಿದೆ! ನಿಮ್ಮ ಪ್ರತಿಭೆಗೆ ಒಳ್ಳೆಯ ಅವಕಾಶ ಒದಗಿಸುವ ವೇದಿಕೆಯೊಂದು ಸೃಷ್ಟಿಯಾ (Jawaharlal Nehru Planetarium, Bengaluru) ವಿದ್ಯಾರ್ಥಿಗಳಿಗೆ ಎಂದೇ ಅತ್ಯುತ್ತಮ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಅದರಲ್ಲೂ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗಂತೂ ಈ ಸ್ಪರ್ಧೆ (State Level Science Quiz Competition) ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳನ್ನೇ ತೆರೆದಿಡುವುದು ಖಚಿತ. ಹಾಗಾದರೆ ಈ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಎಲ್ಲಿ ನಡೆಯಲಿದೆ? ನೋಂದಾಯಿಸಲು ಕೊನೆಯ ದಿನಾಂಕ ಯಾವುದು? ಯಾರೆಲ್ಲ ಭಾಗವಹಿಸಬಹುದು? ಎಲ್ಲ ವಿವರ ಇಲ್ಲಿದೆ. ಆಲ್ ದಿ ಬೆಸ್ಟ್!

    ಬೆಂಗಳೂರಿನ ಪ್ರಖ್ಯಾತ ಜವಾಹರಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗೆ ಜುಲೈ 3 ರಂದು 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಇಡೀ ಸ್ಪರ್ಧೆಯು ಆನ್​ಲೈನ್ ಮೂಲಕವೇ ನಡೆಯಲಿದೆ. ಶೇಕಡಾ 70ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಆನ್​ಲೈನ್ ಪ್ರಶಂಸಾ ಪತ್ರ ನೀಡಲಾಗುತ್ತದೆ.

    ಕೆಲವು ನಿಯಮಗಳು ಹೀಗಿವೆ

    ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳಾಗಿರಬೇಕು

    ವ್ಯಾಸಂಗ ಮಾಡುತ್ತಿರುವ ಕುರಿತು ದಾಖಲಾತಿ ವಿವರ ಒದಗಿಸಬೇಕು

    ವಿದ್ಯಾರ್ಥಿಗಳು ಕನ್ನಡದಲ್ಲಿ ಓದಲು ಬರೆಯಲು ಅರಿತಿರಬೇಕು

    ಸ್ಪರ್ಧೆಯ ನಿಯಮಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

    ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಇದೆಯೇ?
    ಜವಾಹರಲಾಲ್ ನೆಹರು ತಾರಾಲಯವು ವಿದ್ಯಾರ್ಥಿಗಳಿಗೆ ಎಂದೇ ಹಮ್ಮಿಕೊಂಡಿರುವ ಈ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಬದಲಿಗೆ ವಿದ್ಯಾರ್ಥಿಗಳು ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲದೇ ಉಚಿತವಾಗಿ ಭಾಗವಹಿಸಬಹುದಾಗಿದೆ.

    ಕನ್ನಡದಲ್ಲೇ ಇರುತ್ತೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ
    ಅದರಲ್ಲೂ ಇನ್ನೂ ವಿಶೇಷ ಅಂದರೆ ಜವಾಹರಲಾಲ್ ನೆಹರು ತಾರಾಲಯವು ನಡೆಸಲಿರುವ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಕನ್ನಡದಲ್ಲಿಯೇ ನಡೆಯಲಿದೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಯಾವುದೇ ರೀತಿಯಲ್ಲೂ ಹಿಂಜರಿಕೆ ಪಡದೇ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

    ನೋಂದಾಯಿಸಲು ಕೊನೆ ದಿನ ಎಂದು?
    ವಿಜ್ಞಾನ ರಸಪ್ರಶ್ನೆ ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನಾಂಕ ಜೂನ್ 24. ಅಣಕು ಪರೀಕ್ಷೆಯು ಇದೇ ತಿಂಗಳು ಅಂದರೆ, ಜೂನ್ 26 ರಂದು ನಡೆಯಲಿದೆ. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 400 ಕ್ಕೂ ಹೆಚ್ಚು ಬಹುಮಾನಗಳು ಇರುತ್ತವೆ.

    ಇದನ್ನೂ ಓದಿ: Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ

    ಜವಾಹರಲಾಲ್ ನೆಹರು ತಾರಾಲಯವು ಹಮ್ಮಿಕೊಂಡಿರುವ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ, ವಿವರಗಳನ್ನು ವೀಕ್ಷಿಸಲು ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬಹುದಾಗಿದೆ. ವೆಬ್​ಸೈಟ್​ನ್ನು ನೆರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಸಾಕು.

    ಅಥವಾ ಈಗಲೇ ನೋಂದಣಿ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

    Jawaharlal Nehru Planetarium
    ಜವಾಹರಲಾಲ್ ನೆಹರು ತಾರಾಲಯ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Bidar To Bengaluru: ಬೀದರ್​ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!

    ಬಹುಮಾನದ ಮೊತ್ತ ಎಷ್ಟು ಗೊತ್ತೇ?
    ಬೆಂಗಳೂರಿನ ಪ್ರಖ್ಯಾತ ಜವಾಹರಲಾಲ್ ನೆಹರು ತಾರಾಲಯವು ಆಯೋಜಿಸಿರುವ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 10,000 ರೂ ನೀಡುತ್ತಿದೆ.  ದ್ವಿತೀಯ ಬಹುಮಾನ 7,500 ಹಾಗೂ ತೃತೀಯ 5,000 ರೂ. ನಗದು ಬಹುಮಾನ ನೀಡಲಾಗುತ್ತದೆ. 
    Published by:guruganesh bhat
    First published: