Bengaluru: ವಿಶ್ವದ 6 ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು, ಈ ಊರೇ ಬೆಸ್ಟ್ ಎಂದ ವಲಸಿಗರು!

ಬೆಂಗಳೂರು ನಗರವು ಹೊರಗಡೆಯಿಂದ ಬರುವ ವಲಸಿಗರಿಗೆ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ ನೋಡಿ. ಇದು ಹಣದಿಂದ ಕೂಡಿದ ನಗರವಾಗಿದೆ ಮತ್ತು ಇಲ್ಲಿ ಬರುವ ಮತ್ತು ಇರುವ ಜನರಿಗೆ ಜೀವನ ನಡೆಸಲು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಕಲಿಯುವ ಹಸಿವು ಇರುವುದಂತೂ ನಿಜ ಎಂದು ಬ್ಲೂಮ್‍ಬರ್ಗ್ ವರದಿ ತಿಳಿಸಿದೆ.

ಬೆಂಗಳೂರು ನಗರ

ಬೆಂಗಳೂರು ನಗರ

  • Share this:
ಬೆಂಗಳೂರು (Bengaluru) ನಗರದ ತಂಪಾದ ವಾತಾವರಣ, ಕೆಲಸ ಮಾಡಲು ಅನೇಕ ಐಟಿ ಕಂಪನಿಗಳು, ಉತ್ತಮ ಜೀವನಶೈಲಿ (Lifestyle), ವಾರಾಂತ್ಯದಲ್ಲಿ ಬೋರ್ ಆಗದೆ ಸುತ್ತಾಡಲು ದೊಡ್ಡ ದೊಡ್ಡ ಮಾಲ್ ಗಳು ಹೀಗೆ ಎಲ್ಲಾ ರೀತಿಯಲ್ಲೂ ಬೆಂಗಳೂರು ಒಂದು ಉತ್ತಮ ಮಹಾನಗರ. ದಿನನಿತ್ಯ ಲಕ್ಷಾಂತರ ಜನರು ಬೆಂಗಳೂರು ನಗರಕ್ಕೆ ಬೇರೆ ಬೇರೆ ರಾಜ್ಯಗಳಿಂದ (State) ಬರುತ್ತಾರೆ. ಅದರಲ್ಲಿ ಬಹುತೇಕರು ಇಲ್ಲಿಯೇ ಜೀವನ ನಡೆಸಲು ಬರುವವರಾಗಿದ್ದರೆ, ಇನ್ನೂ ಕೆಲವರು ತಮ್ಮ ಆಫೀಸಿನ ಕೆಲಸದ (Office work) ನಿಮಿತ್ತ ಬಂದು ತಮ್ಮ ಕೆಲಸವನ್ನು ಮುಗಿಸಿಕೊಂಡು ಹೋಗುವವರಾಗಿರುತ್ತಾರೆ. ಇನ್ನೂ ಕೆಲವರು ಸುಮ್ಮನೆ ಬೆಂಗಳೂರು ನಗರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುತ್ತಾರೆ.

ವಲಸಿಗರಿಗೆ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಬೆಂಗಳೂರೂ ಒಂದು 
ಈಗ ಬೆಂಗಳೂರು ನಗರವು ಹೊರಗಡೆಯಿಂದ ಬರುವ ವಲಸಿಗರಿಗೆ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ ನೋಡಿ. ಇದು ಹಣದಿಂದ ಕೂಡಿದ ನಗರವಾಗಿದೆ ಮತ್ತು ಇಲ್ಲಿ ಬರುವ ಮತ್ತು ಇರುವ ಜನರಿಗೆ ಜೀವನ ನಡೆಸಲು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಕಲಿಯುವ ಹಸಿವು ಇರುವುದಂತೂ ನಿಜ ಎಂದು ಬ್ಲೂಮ್‍ಬರ್ಗ್ ವರದಿ ತಿಳಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬಂಡ ಬಿವ್ಯಕ್ತಿ ಏನು ಹೇಳಿದ್ದಾರೆ ನೋಡಿ 
ಬ್ಲೂಮ್‍ಬರ್ಗ್ ನೊಂದಿಗೆ, ಸ್ಯಾನ್ ಫ್ರಾನ್ಸಿಸ್ಕೋದ ಜೀವನವನ್ನು ತ್ಯಜಿಸಿ ಬೆಂಗಳೂರು ನಗರದಲ್ಲಿನ ಇಂದಿರಾನಗರಕ್ಕೆ ಬಂದು ತನ್ನದೇ ಆದ ಗೇಮಿಂಗ್ ಸ್ಟುಡಿಯೋವನ್ನು ಶುರು ಮಾಡಿದ 49 ವರ್ಷದ ವ್ಯಕ್ತಿಯೊಬ್ಬರು ಮಾತನಾಡಿ ತನ್ನ ಕುಟುಂಬವನ್ನು ಬಿಟ್ಟು, ಬೆಂಗಳೂರು ನಗರದಲ್ಲಿ ನಡೆದ ಗೇಮಿಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಇಬ್ಬರು ಸಹ-ಸಂಸ್ಥಾಪಕರೊಂದಿಗೆ ಲೀಲಾ ಗೇಮ್ಸ್ ಪ್ರೈವೇಟ್ ಅನ್ನು ಪ್ರಾರಂಭಿಸಿದ್ದು ಅದಕ್ಕೆ ಆರ್ಥಿಕವಾಗಿ ಸೆಕೊಯಾ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: YouTube: ಯೂಟ್ಯೂಬ್​ ಜಾಹೀರಾತು ನೋಡ್ತೀರಾ? ಇಲ್ನೋಡಿ ತಂದೆ-ಮಗ ಮೋಸ ಹೋದ ಕಥೆ!

"ಬೆಂಗಳೂರಿನಲ್ಲಿ ನೆಲೆಸುವ ಮೊದಲು ನಾವು ಫಿನ್ಲ್ಯಾಂಡ್, ಲ್ಯಾಟಿನ್ ಅಮೆರಿಕ ಮತ್ತು ಕೆನಡಾವನ್ನು ಪರಿಗಣಿಸಿದ್ದೇವೆ" ಎಂದು ಅವರು ಬ್ಲೂಮ್‍ಬರ್ಗ್ ಗೆ ತಿಳಿಸಿದರು. ತಮ್ಮ ಸ್ಥಳದಲ್ಲಿ ರಾಜಕೀಯ, ಅಪರಾಧ ಮತ್ತು ಶಿಕ್ಷಣದ ನಿರಾಶಾದಾಯಕ ಸ್ಥಿತಿಯಿಂದ ಜನರು ಹೆಚ್ಚು ಅಸಮಾಧಾನಗೊಂಡಿದ್ದು, ಹಾಗಾಗಿ ಅವರು ಯುನೈಟೆಡ್ ಸ್ಟೇಟ್ಸ್ ನಿಂದ ಬೆಂಗಳೂರು ನಗರಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ. ಅವರು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಹೆಂಡತಿ ಮತ್ತು ಮಕ್ಕಳ ಬಳಿ ಹೋಗಿ ಭೇಟಿ ಮಾಡಿ ಬರುತ್ತಾರೆ. ರಸ್ತೆಗಳು ಮತ್ತು ಕಟ್ಟಡಗಳು ಸೇರಿದಂತೆ ಬೆಂಗಳೂರಿನ ಅನೇಕ ವಿಷಯಗಳು 'ಅಪೂರ್ಣ' ಎಂದು ತೋರಿದರೂ, ಅವರು ಉಪಯುಕ್ತವಾದದ್ದನ್ನು ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳುತ್ತಾರೆ.

Bmrcl gift to watching Flower show people Bengaluru
ಮೆಟ್ರೋ ಗುಡ್​ನ್ಯೂಸ್​


ಭಾರತದ ಸ್ಟಾರ್ಟ್ ಅಪ್ ರಾಜಧಾನಿ
ಭಾರತದ ಸ್ಟಾರ್ಟ್ ಅಪ್ ರಾಜಧಾನಿ ಎಂದೂ ಕರೆಯಲ್ಪಡುವ ಬೆಂಗಳೂರಿನಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದು, ಒಂದು ಅಂದಾಜಿನ ಪ್ರಕಾರ ಲಂಡನ್ ಅಥವಾ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದರೆ ಬಂಡವಾಳವು ವೇಗವಾಗಿ ಹರಿಯುತ್ತಿದೆ, ಇದು 2016 ರಲ್ಲಿ 1.3 ಬಿಲಿಯನ್ ಡಾಲರ್ ನಿಂದ 2020 ರಲ್ಲಿ 7.2 ಬಿಲಿಯನ್ ಡಾಲರ್ ಗೆ ಏರಿದೆ ಎಂದು ವರದಿಯೊಂದು ತಿಳಿಸಿದೆ. ವೇಗವಾಗಿ ಬೆಳೆಯುತ್ತಿರುವ ಟೆಕ್ ಹಬ್ ಗಳಲ್ಲಿ ಒಂದಾಗಿರುವ ಈ ನಗರವು ಸಾವಿರಾರು ಯಶಸ್ವಿ ನವೋದ್ಯಮಗಳು ಮತ್ತು ಐಟಿ ಕಂಪನಿಗಳಿಗೆ ನೆಲೆಯಾಗಿದೆ, ಹೆಚ್ಚು ಹೆಚ್ಚು ವಲಸಿಗರನ್ನು ಆಕರ್ಷಿಸುತ್ತಿದೆ. ಇದರೊಂದಿಗೆ, ಬೆಳೆಯುತ್ತಿರುವ ವಲಸಿಗರಿಗಾಗಿ ಅಂತರರಾಷ್ಟ್ರೀಯ ಶಾಲೆಗಳು, ಬಾರ್ ಗಳು ಮತ್ತು ಬಿಸ್ಟ್ರೋಗಳಲ್ಲಿ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ:  Viral News: ಈ ಪ್ರದೇಶಗಳಲ್ಲಿ ವರ್ಷವಿಡೀ ಮಳೆ ಬೀಳುತ್ತದೆಯಂತೆ, ಸೂರ್ಯನ ಕಿರಣ ಸಹ ಕಣ್ಣಿಗೆ ಬೀಳಲ್ವಂತೆ!

ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನಶೈಲಿಯೊಂದಿಗೆ ರೋಮಾಂಚಕ ಅಂತರರಾಷ್ಟ್ರೀಯ ಸಮುದಾಯವನ್ನು ನಿರ್ಮಿಸುವ ಮೂಲಕ ಬೆಂಗಳೂರು ಜಾಗತಿಕ ನಗರವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ಲೂಮ್‍ಬರ್ಗ್ ಹೇಳಿದೆ. ಕೌಲಾಲಂಪುರ, ಲಿಸ್ಬನ್, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊವನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ.
Published by:Ashwini Prabhu
First published: