ಬೆಂಗಳೂರು (ಆ.07): ಸೈಕೋ ಪಾಥ್ಗಳ ಬಗ್ಗೆ ನೀವೂ ಕೇಳಿರ್ತಿರಿ. ವಿಚಿತ್ರವಾಗಿ ವರ್ತಿಸೋದು, ಇತರರಿಗೆ ಕಾಡೋದು, ಕಿರುಕುಳ (Torture) ನೀಡೋದು ಹೀಗೆ ಸೈಕೋಪಾಥ್ಗಳು (Psychopath) ಒಂದಲ್ಲ ಒಂದು ರೀತಿ ಆಡ್ತಾನೇ ಇರ್ತಾರೆ. ಬೆಂಗಳೂರಿನಲ್ಲಿ (Bengaluru) ಹಲವು ಸೈಕೋಪಾಥ್ಗಳ ಕೇಸ್ಗಳ ಬಗ್ಗೆಯೂ ತಿಳಿದಿರ್ತೀರಿ. ನಾವೇ ನೋಡಿದಂತೆ ಸಿಲಿಕಾನ್ ಸಿಟಿಯಲ್ಲಿ ಟೆರೇಸ್ ಮೇಲೆ ಹತ್ತಿ, ಪಿಜಿ, ಮನೆಗೆ (Home) ನುಗ್ಗಿ ಟಾರ್ಚರ್ ಕೊಟ್ಟ ಸೈಕೋ ಪಾಥ್ಗಳ ಬಂಧನದ (Arrest) ಬಗ್ಗೆ ನೋಡಿದ್ದೇವೆ. ನಾವೇ ಏನಾದ್ರು ವಿಚಿತ್ರವಾಗಿ ವರ್ತಿಸ್ತಾ ಇದ್ರೆ ಯಾಕೋ ಒಂದು ರೀತಿ ಸೈಕೋ ಥರಾ ಆಡ್ತೀಯಾ ಅನ್ನೋರು ಇದ್ದಾರೆ. ಇದೀಗ ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋ ಪಾಥ್ನ್ನು ಬಂಧಿಸಲಾಗಿದೆ.
ಗೋವು ಅಂದ್ರೆ ತಾಯಿ ಸಮಾನ ಅಂತಾರೆ. ಅಂತಹುದರಲ್ಲಿ ಬೆಂಗಳೂರಲ್ಲಿ ಹಸುಗಳ ಜೊತೆ ಒಬ್ಬ ವಿಕೃತಿ ಮೆರೆದಿದ್ದಾನೆ. ಮದ್ದೂರು ಮೂಲದ ಮಂಜುನಾಥ್(34) ಎಂಬಾತನ ಈ ಸೈಕೋಪಾಥ್. ಈ ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಮೇಯೋಕೆ ಬಿಡುತ್ತಿದ್ದ ಹಸುಗಳೇ ಟಾರ್ಗೆಟ್
ಮೇಯೋಕೆ ಬಿಡುತ್ತಿದ್ದ ಹಸುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಮಂಜುನಾಥ್, ಅದರ ಮೇಲೆ ವಿಕೃತಿ ಮೆರೆಯುತ್ತಿದ್ದ. ಹಸು ಮಾಲೀಕ ಇಲ್ಲದ ವೇಳೆ ಹಸುಗಳನ್ನು ಪೊದೆಗೆ ಎಳೆದೊಯ್ತಿದ್ದ.
ಹಸುವಿಗೆ ಕಚ್ಚಿ ಹಿಂಸೆ
ಯಾರೂ ಇಲ್ಲದನ್ನು ನೋಡಿ ಆರೋಪಿ ಮಂಜುನಾಥ್, ಹಸುವನ್ನು ಅಜ್ಞಾತಸ್ಥಳಕ್ಕೆ ಎಳೆಯೊಯ್ಯುತ್ತಿದ್ದ. ನಂತರ ಹಸುವಿನ ಕೆಚ್ಚಲನ್ನ ಬಾಯಲ್ಲಿ ಕಚ್ಚುತ್ತಿದ್ದ. ಹಲವು ಬಾರಿ ದನದ ಬಾಲವನ್ನ ಕಟ್ ಮಾಡಿ ಹಿಂಸೆ ನೀಡುತ್ತಿದ್ದ ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ: ರಾತ್ರಿ 2ರವರೆಗೂ ಯುವಕ, ಯುವತಿಯರ ಲೇಟ್ ನೈಟ್ ಪಾರ್ಟಿ; ಇಲ್ಲಿ ಜೋಡಿಗಳಿಗೆ ಮಾತ್ರ ಎಂಟ್ರಿ
ಹಸು ಮಾಲೀಕ ಶಶಿಕುಮಾರ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು. ಅದರನ್ವಯ ಚಂದ್ರಾಲೇಔಟ್ ಪೊಲೀಸರು ಆರೋಪಿ ಮಂಜುನಾಥ್ನ್ನು ಬಂಧಿಸಿದ್ದಾರೆ.
ನಾಯಂಡಹಳ್ಳಿ ಬಳಿ ಮಾಲೀಕ ಶಶಿಕುಮಾರ್ ಹಸುಗಳನ್ನ ಸಾಕಿದ್ದರು. ಬೆಳಗ್ಗಿನ ವೇಳೆ ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಹಸುಗಳನ್ನ ಮೇಯಲು ಕಟ್ಟಿ ಬಳಿಕ ಮನೆಗೆ ತೆರಳುತ್ತಿದ್ದರು. ಇದೇ ಸಮಯ ನೋಡುತ್ತಿದ್ದ ಮಂಜುನಾಥ್, ಹಸುಗಳಿಗೆ ಟಾರ್ಚರ್ ನೀಡುತ್ತಿದ್ದ. ಈಗ ಅರೆಸ್ಟ್ ಆಗಿದ್ದಾನೆ.
ಬೆಂಗಳೂರಿನಲ್ಲಿ ಕಳ್ಳತನಕ್ಕೆ ಬಂದವನ ಕೊಲೆ!
ಬೆಂಗಳೂರಿನಲ್ಲಿ ಕಳ್ಳತನ ಮಾಡಲು ಬಂದ ವ್ಯಕ್ತಿಯನ್ನೇ ಬರ್ಬರ ಕೊಲೆ ಮಾಡಲಾಗಿದೆ. ಅಮರನಾಥ್ ಮಹಾತೋ ಎಂಬಾತನೇ ಕೊಲೆಯಾದ ವ್ಯಕ್ತಿ. ಬೆಂಗಳೂರಿನ ಬಾಗಲೂರು ಬಳಿಯ ದ್ವಾರಕನಗರದಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ಮತ್ತು ಸಿಬ್ಬಂದಿ ಕಾದು ಕುಳಿತು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ವಕ್ಫ್ ಬೋರ್ಡ್ ಅರ್ಜಿ ವಜಾ; ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಆದೇಶ
ಇಲ್ಲಿನ ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಹಲವು ಬಾರಿ ಅಮರನಾಥ್ ಕಳ್ಳತನ ನಡೆಸಿದ್ದ. ಈ ಹಿನ್ನೆಲೆ ಇವತ್ತು ಯಾರು ಬರ್ತಾರೆ ನೋಡುವ ಎಂದು ಮಾಲೀಕ ಕರುಣಾಕರನ್ ಅಂಡ್ ಟೀಮ್ ರಾತ್ರಿಯಿಡೀ ಕಾದು ಕುಳಿತಿತ್ತು. ಈ ವೇಳೆ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅಮರನಾಥ್ ಮಹಾತೋ ಕಳ್ಳತನಕ್ಕೆ ಬಂದಿದ್ದ.
ಕಾದು ಕುಳಿತು ಕಳ್ಳನ ಮೇಲೆ ಅಟ್ಯಾಕ್
ಮೊದಲೇ ಕಾದು ಕುಳಿತಿದ್ದ ಮಾಲೀಕ ಕರುಣಾಕರ್ ಟೀಂ ಮೃತ ಅಮರನಾಥ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅಮರನಾಥ್ ಕಬ್ಬಿಣ ಕದಿಯುವಾಗ ಹಿಡಿದಿದ್ದಾರೆ. ನಂತರ ಸಿಬ್ಬಂದಿ ಮತ್ತು ಮಾಲೀಕ ಎಲ್ಲಾ ಸೇರಿ ಅಮರನಾಥ್ಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ.
ಕಳ್ಳ ಸಾವು, ಮಾಲೀಕ ಎಸ್ಕೇಪ್
ಬಳಿಕ ಹೊಡೆದು ತಮಗೆ ಗೊತ್ತಿಲ್ಲದಂತೆ ಆರೋಪಿಗಳು ರಸ್ತೆ ಬದಿಯಲ್ಲಿ ಹಾಕಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ಬೆಳಗ್ಗೆ ಮತ್ತೆ ತಾವೇ ಅದನ್ನು ನೋಡಿದಂತೆ ಬಿಂಬಿಸಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆಗ ಆಸ್ಪತ್ರೆಯಲ್ಲಿ ಅಮರನಾಥ ಸಾವನ್ನಪ್ಪಿದ್ದಾನೆ ಎಂದು ಪತ್ತೆಯಾಗಿದೆ. ಈ ಸಂಬಂಧ ಸದ್ಯ ಕೆಲ ಆರೋಪಿಗಳನ್ನು ಬಾಗಲೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ