Bengaluru Ganesh Utsava: ನಿಮ್ಮ ಗಣೇಶ ಹಬ್ಬ ಹೇಗಾಯ್ತು? ಇಲ್ಲಿದೆ ನೋಡಿ ಸಂಭ್ರಮ ಸಡಗರದ ಝಲಕ್

ಪ್ರಥಮ ಪೂಜಿತನ ಚೌತಿ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಜನರು ದೇಗುಲ, ಮನೆಗಳಲ್ಲಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ ಸಂತೃಪ್ತರಾದರು. 

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಬೆಂಗಳೂರು: ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ. ವಿಘ್ನ ವಿನಾಯಕನ ಪೂಜಿಸುತ್ತಾ ಇಷ್ಟಾರ್ಥಗಳ ಬೇಡಿಕೆಗೆ ಪ್ರಾರ್ಥನೆ. ದೇಗುಲ,ಮನೆ ಮನೆಗಳಲ್ಲೂ ಏಕದಂತನಿಗೆ ಪೂಜೆ ಸಲ್ಲಿಕೆ. ಕೊರೊನಾ ಬಳಿಕ (Covid 19) ಈ ಬಾರಿ ನಿರಾತಂಕವಾಗಿ ಗಣೇಶೋತ್ಸವ (Ganesh Chaturthi)ಆಚರಿಸ್ತಿರೋ ಹಿನ್ನೆಲೆ ಸಂಭ್ರಮ ಇಮ್ಮಡಿಯಾಗಿದೆ. ಸಾರ್ವಜನಿಕ ಗಣೇಶೋತ್ಸವ ಸಂಭ್ರಮದ ಹಿನ್ನೆಲೆ ಬೆಂಗಳೂರಿನ (Bengaluru Ganeshotsav) ಹಲವೆಡೆ ಅನ್ನದಾನ, ಇನ್ನು ರಕ್ತದಾನದ ಮೂಲಕವೂ ಮಾದರಿ ಸೇವೆಗಳು ನಡೆದವು. ಮಕ್ಕಳು, ಮಹಿಳೆಯರು, ಕಿರಿಯ ಹಿರಿಯರು ಎಲ್ಲರೂ ಸೇರಿ ವಿಘ್ನೇಶ್ವರನಿಗೆ (Ganapathi) ಪೂಜೆ ಸಲ್ಲಿಸಿ ಸಂತೃಪ್ತರಾದರು.

    Ganesh Chaturthi: ವಾವ್! ಗಣೇಶನ ಜೊತೆ ನಮ್ಮ ಅಪ್ಪು ಪ್ರತ್ಯಕ್ಷ!

    ಪ್ರಥಮ ಪೂಜಿತನಿಗೆ ನಿರಾತಂಕದ ಪೂಜೆ
    ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಆತಂಕದಿಂದ ಗಣೇಶೋತ್ಸವ ಸಂಭ್ರಮ ಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅಂತಹ ಆತಂಕ ಇಲ್ದೇ ಇರೋದು ಪ್ರಥಮ ಪೂಜಿತನಿಗೆ ನಿರಾತಂಕ ಪೂಜೆ ಸಲ್ಲಿಸಲು ಅವಕಾಶ ಒದಗಿ ಬಂದಿದೆ.
    Published by:guruganesh bhat
    First published: