• Home
 • »
 • News
 • »
 • bengaluru-urban
 • »
 • Bengaluru: ಆಹಾ! ಓಹೋ! ಇದು ಬೆಂಗಳೂರಿನ ಮಾಯಾಲೋಕ!

Bengaluru: ಆಹಾ! ಓಹೋ! ಇದು ಬೆಂಗಳೂರಿನ ಮಾಯಾಲೋಕ!

ಇಲ್ಲಿ ನೋಡಿ ಗೊಂಬೆಗಳ ಲೋಕ!

"ಇಲ್ಲಿ ನೋಡಿ ಗೊಂಬೆಗಳ ಲೋಕ!"

ಗಾಂಧಿ ಬಜಾರ್ ತುಂಬಾ ಬಣ್ಣ ಬಣ್ಣದ ಗೊಂಬೆಗಳು. ಕಣ್ಣಿಗೆ ಎಷ್ಟು ನೋಡಿದ್ರೂ ಸಾಲೋದಿಲ್ಲ ಅನ್ನೋ ಫೀಲ್, ಇಲ್ಲಿದೆ ನೋಡಿ ಬೆಂಗಳೂರಿನ ವಿಶೇಷ ಗೊಂಬೆಗಳ ಲೋಕ!

 • Share this:

  ಬೆಂಗಳೂರು: ಮಾರುಕಟ್ಟೆಯ ತುಂಬ ಬಣ್ಣ ಬಣ್ಣದ ಗೊಂಬೆಗಳು. ಎತ್ತ ನೋಡಿದರೂ ಭರದಿಂದ ಸಾಗಿದ ವ್ಯಾಪಾರ. ಮರ ಮತ್ತು ಪಿಂಗಾಣಿ ಮಣ್ಣುಗಳಿಂದ ಮಾಡಿದ ಸುಂದರ ಗೊಂಬೆಗಳು.  ಬೆಂಗಳೂರಿನ (Bengaluru News) ಗಾಂಧಿ ಬಜಾರ್ (Gandhi Bazaar) ತುಂಬಾ ಬಣ್ಣ ಬಣ್ಣದ ಗೊಂಬೆಗಳು. ಮೈಸೂರು ದಸರಾ ಒಂದೆಡೆಯಾದ್ರೆ ಮನೆ ಮನೆಯಲ್ಲೂ ಸಾಂಪ್ರದಾಯಿಕ ಬೊಂಬೆಗಳನ್ನಿಡೋದು  ಇನ್ನೊಂದು ಸಂಭ್ರಮ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಂಗಳೂರಿನಲ್ಲಿ ಗೊಂಬೆಗಳ (Dasara Doll Market In Bengaluru)  ವ್ಯಾಪಾರ ಬಹಳ ಜೋರಾಗೆ ನಡಿತಿದೆ. ಇಲ್ಲಿದೆ ನೋಡಿ ಬೆಂಗಳೂರು ಗೊಂಬೆಗಳ ಲೋಕ.


  ಸರಾ ಹಬ್ಬವು ಗೊಂಬೆಗಳ ಹಬ್ಬ ಎಂದೇ ಕರೆಸಿಕೊಳ್ಳುತ್ತದೆ. ಭಕ್ತರು ತಮ್ಮ ಮನೆಯಲ್ಲಿ ಅಲಂಕರಿಸಿದ ಗೊಂಬೆಗಳನ್ನು ಪ್ರದರ್ಶನಕ್ಕಿಡುತ್ತಾರೆ. ಪಟ್ಟದ ಗೊಂಬೆ ಅತಿ ಪ್ರಮುಖವಾದ ಗೊಂಬೆ ಇದನ್ನು ಸಾಮಾನ್ಯವಾಗಿ ಮರದಿಂದ ಮಾಡಲಾಗುತ್ತದೆ.


  ಇದನ್ನೂ ಓದಿ: Annamma Temple: ಮೆಜೆಸ್ಟಿಕ್​ನಲ್ಲೊಂದೇ ಅಲ್ಲ, ಶ್ರೀನಗರದಲ್ಲೂ ಇರುವಳು ಅಣ್ಣಮ್ಮ ತಾಯಿ!


  ಯಾವುದಾದರು ದೇವರ ರೂಪದಲ್ಲಿ ಈ ಗೊಂಬೆಗಳನ್ನು ಇಡಲಾಗುತ್ತದೆ. ಪಟ್ಟದ ಗೊಂಬೆಗಳಿಗೆ ಉಳಿದ ಗೊಂಬೆಗಳಿಗಿಂತ ಹೆಚ್ಚಿನ ಮರ್ಯಾದೆ, ಅಲಂಕಾರ ಮತ್ತು ಪ್ರಾಮುಖ್ಯತೆ ಸಿಗುತ್ತದೆ.


  ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


  ಗೊಂಬೆಗಳ ಶೃಂಗಾರಕ್ಕೂ ಅದರದೇ ಆದ ಪದ್ದತಿ ಇದೆ. ಹೆಣ್ಣು ಬೊಂಬೆಗಳಿಗೆ ಉಡಿಸುವ ಸೀರೆ, ತೊಡಿಸುವ ಆಭರಣಗಳು ನೋಡಲು ಬಹಳ ಸುಂದರವಾಗಿರುತ್ತದೆ. ನವರಾತ್ರಿ ದೇವಿಯ ಹಬ್ಬವಾಗಿರುವುದರಿಂದ ಈ ಹಬ್ಬದಲ್ಲಿ ಮಹಿಳೆಯರೇ ಹೆಚ್ಚು ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ.


  ವರದಿ: ಸುಮಾ ಕಂಚೀಪಾಲ್

  Published by:ಗುರುಗಣೇಶ ಡಬ್ಗುಳಿ
  First published: