• Home
 • »
 • News
 • »
 • bengaluru-urban
 • »
 • Electric Charging Stations: ಬೆಂಗಳೂರಿನಿಂದ ಊರಿಗೆ ಹೊರಟಿದ್ದೀರಾ? ಈ ಹೆದ್ದಾರಿಗಳಲ್ಲಿದೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಸ್

Electric Charging Stations: ಬೆಂಗಳೂರಿನಿಂದ ಊರಿಗೆ ಹೊರಟಿದ್ದೀರಾ? ಈ ಹೆದ್ದಾರಿಗಳಲ್ಲಿದೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru News: ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,700 ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುವುದರೊಂದಿಗೆ ಭಾರತದಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹತ್ತು ಲಕ್ಷವನ್ನು ತಲುಪಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು: ಎಲೆಕ್ಟ್ರಿಕ್ ‌ವಾಹನಗಳಿಗೆ (Electric Vehicles) ಬೇಡಿಕೆ ಹೆಚ್ಚಿದೆ. ಅಂತೆಯೇ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ದೊಡ್ಡ ದೊಡ್ಡ ಕಂಪೆನಿಗಳು ತೊಡಗಿಸಿಕೊಂಡಿವೆ. ಮಾರುಕಟ್ಟೆಗೆ ದಿನಕ್ಕೊಂದರಂತೆ ವಿವಿಧ ಶೈಲಿಯ ಎಲೆಕ್ಟ್ರಿಕ್ ವಾಹನಗಳು ಲಗ್ಗೆಯಿಡುತ್ತಿದೆ. ಉತ್ತಮ ಗುಣಮಟ್ಟವೂ ಹೊಂದಿರುವುದರಿಂದ ಹಾಗೂ ತೈಲ ಇಂಧನ ಹೊರೆಯೂ ಕಡಿಮೆ‌ ಇರುವುದರಿಂದ ಗ್ರಾಹಕರ ಸಂಖ್ಯೆಯೂ‌ ಹೆಚ್ಚಿದೆ. ಇದೀಗ ಅದಕ್ಕೆ ತಕ್ಕ ಹಾಗೆ ಚಾರ್ಜಿಂಗ್ ಸೆಂಟರ್ ಗಳನ್ನು (Electric Vehicle Charging Stations)  ಹೆಚ್ಚಿಸಲು ಇಂಧನ ಕಂಪೆನಿಗಳು ನಿರ್ಧರಿಸಿವೆ. ಈ ಮೂಲಕ ಪ್ರಯಾಣಿಕರು ದೂರದೂರದ ಓಡಾಟ ಸಮಯದಲ್ಲಿ ಎದುರಿಸಬಹುದಾದ ಸಮಸ್ಯೆಯನ್ನು ನಿವಾರಿಸಲು ಕಂಪೆನಿಗಳು ಮುಂದಾಗಿವೆ.


  ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸೆಂಟರ್
  ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ರಾಜ್ಯದ ಎರಡು ಪ್ರಮುಖ ಹೆದ್ದಾರಿಗಳಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ. ಇದರಿಂದ ಈ ಭಾಗಗಳಲ್ಲಿ ಓಡಾಟ ನಡೆಸುವ ಗ್ರಾಹಕರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.


  ಎಲ್ಲೆಲ್ಲ ಚಾರ್ಜಿಂಗ್ ಸೆಂಟರ್?
  ಬಿಪಿಸಿಎಲ್ ನ‌ ಎರಡನೇ ಹಂತದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕಾರಿಡಾರ್‌ಗಳನ್ನು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಮತ್ತು ಇನ್ನೊಂದು ಬೆಂಗಳೂರು-ಮೈಸೂರು-ಕೊಡಗು ಹೆದ್ದಾರಿಯಲ್ಲಿ ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಚೆನ್ನೈ–ತಿರುಚ್ಚಿ–ಮಧುರೆ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿತ್ತು.


  ಇದನ್ನೂ ಓದಿ: Vande Bharat Express: ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಇಷ್ಟೆಲ್ಲ ಸಖತ್ತಾಗಿದೆ ಈ ಟ್ರೇನ್


  ಗ್ರಾಹಕರಿಗೆ ಲಾಭ
  ಚಾರ್ಜಿಂಗ್ ಸೆಂಟರ್ ಗಳನ್ನು ಹೆದ್ದಾರಿ ಬದಿಯಲ್ಲಿ ನಿರ್ಮಿಸೋದರಿಂದ ಗ್ರಾಹಕರು ಹೆಚ್ಚು ಲಾಭ ಪಡೆಯಲಿದ್ದಾರೆ. ವಾಹನದ ಚಾರ್ಜ್ ಮುಗಿದಲ್ಲಿ ಕೂಡಲೇ ಚಾರ್ಜಿಂಗ್ ಕೇಂದ್ರಗಳಿಗೆ ತೆರಳಿ ತ್ವರಿತವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.


  ಇಡೀ ದೇಶದಲ್ಲಿ ಎಷ್ಟು ಚಾರ್ಜಿಂಗ್ ಸ್ಟೇಷನ್​ಗಳಿವೆ?
  ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 1,700 ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುವುದರೊಂದಿಗೆ ಭಾರತದಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹತ್ತು ಲಕ್ಷವನ್ನು ತಲುಪಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಲೋಕಸಭೆಗೆ ತಿಳಿಸಿದ್ದರು. ಈ ವರ್ಷದ ಮಾರ್ಚ್ 25 ರ ಹೊತ್ತಿಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಪ್ರಕಾರ ಒಟ್ಟು 10,76,420 ಇವಿಗಳು ಮತ್ತು ಒಟ್ಟು 1,742 ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್‌ಗಳು (ಪಿಸಿಎಸ್) ಕಾರ್ಯನಿರ್ವಹಿಸುತ್ತಿವೆ.


  ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


  ಈ 8 ನಗರಗಳಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ  ಕ್ರಿಯಾ ಯೋಜನೆ
  ವಿದ್ಯುತ್ ಸಚಿವಾಲಯವು ದೇಶದಲ್ಲಿ ಇ-ಮೊಬಿಲಿಟಿ ಪರಿವರ್ತನೆಯನ್ನು ವೇಗಗೊಳಿಸಲು ಜನವರಿ 14, 2022 ರಂದು ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯ - ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಬಿಡುಗಡೆ ಮಾಡಿದೆ. 4 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮುಂಬೈ, ದೆಹಲಿ, ಬೆಂಗಳೂರು, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಸೂರತ್ ಮತ್ತು ಪುಣೆ ಈ  8 ನಗರಗಳಿಗೆ BEE ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದರು.

  Published by:ಗುರುಗಣೇಶ ಡಬ್ಗುಳಿ
  First published: