• Home
  • »
  • News
  • »
  • bengaluru-urban
  • »
  • Bengaluru Deepavali: ಝಗಮಗಿಸುತ್ತಿದೆ ಬೆಂಗಳೂರು! ಇದು ದೀಪಾವಳಿ ಹಬ್ಬದ ಸಂಭ್ರಮ!

Bengaluru Deepavali: ಝಗಮಗಿಸುತ್ತಿದೆ ಬೆಂಗಳೂರು! ಇದು ದೀಪಾವಳಿ ಹಬ್ಬದ ಸಂಭ್ರಮ!

ಸಾಂದರ್ಭಿಕ ಚಿತ್ರ

"ಸಾಂದರ್ಭಿಕ ಚಿತ್ರ"

ಹಣತೆ, ಹೂವು, ಲೈಟ್​ಗಳು ಹೀಗೆ ಯಾವೆಲ್ಲ ರೀತಿಯ ವಸ್ತುಗಳು ಬೇಕೋ ಅವೆಲ್ಲ ಇಲ್ಲಿ ಲಭ್ಯವಿದೆ. ನೋಡ್ತಾ ಇದ್ರೆ ಈ ಮಾರುಕಟ್ಟೆಯನ್ನು ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಝಗಮಗಿಸುವ ದೀಪಾಲಂಕಾರ, ಕಣ್ಣು ಹಾಯಿಸಿದಷ್ಟು ಹೂವಿನ ಅಂಗಡಿಗಳು, ಎಲ್ಲೆಲ್ಲೂ ಜನವೋ ಜನ. ಅದೇ ಜಯನಗರ 4th ಬ್ಲಾಕ್. ಜಯನಗರ 4th ಬ್ಲಾಕ್​ನಲ್ಲಿ (Bengaluru Jayanagar 4th Block) ನೀವು ಕಾಣ್ತಾ ಇರೋ ಹಾಗೆ ಎಷ್ಟೆಲ್ಲಾ  ಅಂಗಡಿಗಳು ಬಂದಿದೆ (Bengaluru Deepavali) ನೋಡಿ. ಜನರಂತೂ ಮುಗಿಲೆದ್ದು ಮಾರುಕಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ಹಣತೆ, ಹೂವು, ಲೈಟ್​ಗಳು ಹೀಗೆ ಯಾವೆಲ್ಲ ರೀತಿಯ ವಸ್ತುಗಳು ಬೇಕೋ ಅವೆಲ್ಲ ಇಲ್ಲಿ ಲಭ್ಯವಿದೆ. ನೋಡ್ತಾ ಇದ್ರೆ ಈ ಮಾರುಕಟ್ಟೆಯನ್ನು ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ.


    ಅತಿ ಕಮ್ಮಿ ಬೆಲೆಯಲ್ಲಿ ಎಲ್ಲಾ ವಸ್ತುಗಳು ಈ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹಬ್ಬಕ್ಕೆ ಅಂತಾನೇ ಒಂದಷ್ಟು ಮೀಸಲಿರುವಂತಹ ಅಂಗಡಿಗಳು ವಿಜೃಂಭಿಸುತ್ತಿದ್ದವು.  ಉಳಿದ ಸಮಯದಲ್ಲಿಯೇ ಈ ಮಾರಕಟ್ಟೆಯಲ್ಲಿ ಜನವೋ ಜನ. ಇನ್ನು ಹಬ್ಬದ ಸಮಯದಲ್ಲಿ ಕೇಳಬೇಕಾ? ಪ್ರತಿಯೊಂದು ಅಂಗಡಿಗಳಲ್ಲು ಜನರ ಗುಂಪೇ ಸೇರಿರುತ್ತದೆ.


    ಇದನ್ನೂ ಓದಿ: ಅಬ್ಬಬ್ಬಾ, ಈ ಮಹಿಳೆಯ ಕಣ್ಣಲ್ಲಿತ್ತಂತೆ 23 ಕಾಂಟ್ಯಾಕ್ಟ್‌ ಲೆನ್ಸ್! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ


    ದೀಪಾವಳಿಯ ಪ್ರಯುಕ್ತ ಜಯನಗರದಲ್ಲಿ ಅದೆಷ್ಟೋ ದೂರ ದೂರದ ಊರುಗಳಿಂದ ವ್ಯಾಪಾರಿಗಳು ಆಗಮಿಸಿ ಹಬ್ಬಕ್ಕೆ ಸೀಮಿತವಾದ ಅಂಗಡಿಗಳನ್ನು ಹಾಕಿದ್ದಾರೆ.


    ಇಲ್ಲಿ ದೀಪಗಳು, ಆಕಾಶ ದೀಪಗಳು, ನಾನಾ ರೀತಿಯ ಗೊಂಬೆಗಳು, ಹುಡುಗಿಯರಿಗಾಗಿ ಆಭರಣಗಳ ಅಂಗಡಿಗಳು ಮೇಳೈಸುತ್ತಿದ್ದವು.


    ವರದಿ: ಹರ್ಷಿತಾ ಹೆಬ್ಬಾರ್

    Published by:ಗುರುಗಣೇಶ ಡಬ್ಗುಳಿ
    First published: