• Home
  • »
  • News
  • »
  • bengaluru-urban
  • »
  • Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು

Bengaluru News: ಬೆಂಗಳೂರು ಪೊಲೀಸರ ವೆಬ್ ವಿಳಾಸ ಬದಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಕುರಿತು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು ನಾಗರಿಕರೇ ಗಮನಿಸಿ, ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ, ಬೆಂಗಳೂರು ಪೊಲೀಸರ ವಿಳಾಸ ಬದಲಾಗಲಿದೆ. ಅರೇ!, ಇದೇನಿದು ಬೆಂಗಳೂರು ಪೊಲೀಸರ (Bengaluru Police) ಅಡ್ರೆಸ್ ಬದಲಾಗೋದು ಹೇಗೆ ಅಂತ ಅಂದ್ಕೊಂಡ್ರಾ? ಹೌದು, ಬೆಂಗಳೂರು ಪೊಲೀಸರ ವೆಬ್ ವಿಳಾಸ (Bengaluru Police Website) ಅಂದ್ರೆ ವೆಬ್​ಸೈಟ್ ವಿಳಾಸ ಬದಲಾಗಿದೆ. ಬೆಂಗಳೂರು ನಗರ ಪೊಲೀಸ್ ಇಲಾಖೆಯ ವೆಬ್​ಸೈಟ್ ವಿಳಾಸವನ್ನು ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆ ಮಾಡಲಾಗುತ್ತದೆ. ಈ ಕುರಿತು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.


    ಈ ಮುನ್ನ ಬೆಂಗಳೂರು ನಗರ ಪೊಲೀಸರ ಅಧಿಕೃತ ಜಾಲತಾಣದ ವಿಳಾಸ www.bcp.gov.in ಆಗಿತ್ತು . ಆದರೆ ಇನ್ಮುಂದೆ ಈ ವಿಳಾಸ ಬದಲಾಗಲಿದೆ. ಇನ್ನು ಕೆಲದ ದಿನಗಳಲ್ಲೇ ಬೆಂಗಳೂರು ನಗರ ಪೊಲೀಸರ ವೆಬ್ ಜಾಲತಾಣದ ವಿಳಾಸ www.bcp.karnataka.gov.in ಎಂದು ಬದಲಾಗಲಿದೆ. ವೆಬ್​ಸೈಟ್​ಗೆ ಸಂಬಂಧಿಸಿದ ಸುರಕ್ಷತೆಗೆ ಸಂಬಂಧಿಸಿ ಈ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.


    ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿರುವ ಮಲೆನಾಡಿನ ಜನರಿಗೆ ಬಂಪರ್ ಸುದ್ದಿ


    ಬೆಂಗಳೂರಿನಲ್ಲಿ ಮನೆ ಕಟ್ಟಲು 5 ಲಕ್ಷ ಸಹಾಯಧನ
    ಬೆಂಗಳೂರು ನಾಗರಿಕರಿಗೆ ಶುಭಸುದ್ದಿಯೊಂದು ಪ್ರಕಟಗೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಸುದ್ದಿಯೊಂದನ್ಜು ಪ್ರಕಟಿಸಿದೆ. ಬೆಂಗಳೂರಿನ ನಾಗರಿಕರಿಗೆ ಎಂದೇ ಎರಡು ಯೋಜನೆಗಳಿಗೆ ಅರ್ಜಿಯನ್ನು ನಾಗರಿಕರಿಂದ ಆಹ್ವಾನ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಮ್ಮದೇ ಸ್ವಂತ ಜಾಗ ಇದ್ದರೆ ನೀವು 5 ಲಕ್ಷ ಸಹಾಯಧನ (BBMP Housing Subsidy) ಪಡೆದುಕೊಳ್ಳಬಹುದಾಗಿದೆ. ಬಿಬಿಎಂಪಿಯ (BBMP) ಈ 5 ಲಕ್ಷ ಸಹಾಯಧನವನ್ನು ನೀವೂ ಪಡೆದುಕೊಳ್ಳಬಹುದು. ಅಕ್ಟೋಬರ್ 31ರ ಒಳಗೆ ಈ ಯೋಜನೆಗೆ ನೀವು ಅರ್ಜಿ ಹಾಕಬಹುದಾಗಿದೆ.


    ಬೆಂಗಳೂರು ನಗರದಲ್ಲಿ ಸ್ವಂತ ನಿವೇಶನ ಹೊಂದಿರುವ ಈ ಸಹಾಯಧನ ಪಡೆಯಲು ಆಸಕ್ತರು ಅರ್ಜಿ ಹಾಕುವ ವಿಧಾನ ಇಲ್ಲಿದೆ.


    ಹೇಗೆ ಅರ್ಜಿ ಸಲ್ಲಿಸುವುದು?
    ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿಯೂ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನಿಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರದಲ್ಲಿ ರೂ.30 ಶುಲ್ಕ ಪಾವತಿಸಿಯೂ ನೀವು ಅರ್ಜಿ ಸಲ್ಲಿಸಬಹುದಾಗಿದೆ.


    ಇದನ್ನೂ ಓದಿ: Hubballi News: ವಿಮಾನಕ್ಕಿಂತ ಬಸ್ ಟಿಕೆಟ್ ದರವೇ ಹೆಚ್ಚು! ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟವರಿಗೆ ಶಾಕ್


    ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
    ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ಅಥವಾ ಯಾವುದೇ ಗೊಂದಲ ನಿವಾರಣೆಗಾಗಿ ಈ ದೂರವಾಣಿ ಸಂಖ್ಯೆಯನ್ನು ನೀವು ಸಂಪರ್ಕಿಸಬಹುದಾಗಿದೆ. ಬಿಬಿಎಂಪಿ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತೆ ಶೈಲಜಾ : 9480685854

    Published by:ಗುರುಗಣೇಶ ಡಬ್ಗುಳಿ
    First published: