Bengaluru Pothole: ಅಯ್ಯಯ್ಯೋ ಬೆಂಗಳೂರಿನ ಗುಂಡಿಗಳಿಗೆ 5 ಸ್ಟಾರ್ ಕೊಡ್ತಂತೆ ಗೂಗಲ್!

ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವ ಬೆಳ್ಳಂದೂರು ಗುಂಡಿ ಗೂಗಲ್‍ನಲ್ಲಿ 5 ಸ್ಟಾರ್ ಗಿಟ್ಟಿಸಿಕೊಂಡಿದೆ. ಬಳಕೆದಾರರು ಗುಂಡಿಗೆ 5 ಸ್ಟಾರ್ ಕೊಟ್ಟಿದ್ದಾರೆ. ನಾವು ಈ ರೀತಿ ಗುಂಡಿಯನ್ನೂ ನೋಡೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ರಸ್ತೆ ಗುಂಡಿಗಳಿಗೇನು (Pothole) ಕಮ್ಮಿ ಇಲ್ಲ. ಬೆಂಗಳೂರಲ್ಲಿ ಮಳೆ  (Rain) ಬಂದ್ರಂತೂ ಮುಗಿತು, ರಸ್ತೆ ಯಾವುದು ಗುಂಡಿ ಯಾವುದು ಅನ್ನೋದೇ ಕಾಣೋದಿಲ್ಲ. ಈ ರಸ್ತೆ ಗುಂಡಿಗಳಿಂದ ಅದೆಷ್ಟೋ ಅಪಘಾತಗಳು ಸಂಭವಿಸಿದೆ. ಅದೆಷ್ಟೋ ಜನರ ಜೀವವನ್ನೇ ಬಲಿ ಪಡೆದಿವೆ ಈ ರಸ್ತೆ ಗುಂಡಿಗಳು. ಇನ್ನು ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅನೇಕ ಬಾರಿ ಹೈಕೋರ್ಟ್ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಆಗ ಬಿಬಿಎಂಪಿ ಮುಚ್ಚೋ ನಾಟಕ ಆಡುತ್ತೆ. ಅದು ಒಂದೇ ವಾರಕ್ಕೆ ಕಿತ್ತೋಗುತ್ತೆ. ರಸ್ತೆ ಗುಂಡಿಗೆ ಅದೆಷ್ಟೋ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ್ರೆ, ಇನ್ನೂ ಕೆಲವರು ಕೈಕಾಲು ಮುರಿದುಕೊಳ್ತಿದ್ದಾರೆ. ರಸ್ತೆ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಈಗ ಗೂಗಲ್‍ನಲ್ಲೂ (Google) ಬೆಂಗಳೂರಿನ ಮರ್ಯಾದೆ ಹೋಗಿದೆ. ಗೂಗಲ್ ಬೆಂಗಳೂರಿನ ಗುಂಡಿಗೆ 5 ಸ್ಟಾರ್ (5 Star) ಕೊಟ್ಟಿದೆಯಂತೆ.

  ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಗುಂಡಿ

  ಸರ್ಕಾರ ಎಷ್ಟೇ ಗುಂಡಿಗಳನ್ನು ಮುಚ್ಚೋ ಕೆಲಸ ಮಾಡಿದ್ರೂ ಪ್ರಯೋಜ ಆಗುತ್ತಿಲ್ಲ. ಕಳಪೆ ಕಾಮಗಾರಿಯಿಂದ ಮತ್ತೆ ಮತ್ತೆ ಗುಂಡಿ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಬೆಂಗಳೂರಿನ ಮರ್ಯಾದೆ ಮತ್ತೆ ಹಾಳಾಗಿದೆ. ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಗುಂಡಿಯೊಂದು ಕಾಣಿಸಿಕೊಂಡಿದೆ. ಐತಿಹಾಸಿಕ ಪಟ್ಟಿಗೆ ಸೇರಿರೋದು ಬೆಂಗಳೂರಿನ ಬೆಳ್ಳಂದೂರು ಗುಂಡಿ.

  ಬೆಂಗಳೂರಿನ ಗುಂಡಿಗೆ 5 ಸ್ಟಾರ್ 

  ಬೆಂಗಳೂರಿನ ಐತಿಹಾಸಿಕ ಪಟ್ಟಿಗಳಲ್ಲಿ ಕಾಣಿಸಿಕೊಂಡಿರುವ ಬೆಳ್ಳಂದೂರು ಗುಂಡಿ ಗೂಗಲ್‍ನಲ್ಲಿ 5 ಸ್ಟಾರ್ ಗಿಟ್ಟಿಸಿಕೊಂಡಿದೆ. ಬಳಕೆದಾರರು ಗುಂಡಿಗೆ 5 ಸ್ಟಾರ್ ಕೊಟ್ಟಿದ್ದಾರೆ. ನಾವು ಈ ರೀತಿ ಗುಂಡಿಯನ್ನೂ ನೋಡೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

  ನಿಮೊ ತಾಯ್ ಎಂಬುವವರಿಂದ ಮಾಹಿತಿ

  ನಿಮೊ ತಾಯ್ ಎಂಬ ಟ್ವಿಟ್ಟರ್ ಬಳಕೆದಾರರು ಬೆಂಗಳೂರಿನ ಗುಂಡಿಗೆ ಗೂಗಲ್‍ನಲ್ಲಿ 5 ಸ್ಟಾರ್ ಸಿಕ್ಕ ಮಾಹಿತಿ ಬಗ್ಗೆ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಗುಂಡಿ ಗೂಗಲ್‍ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಬರೆದುಕೊಂಡಿದ್ದಾರೆ.

  ಮತ್ತೊಂದು ಟ್ವೀಟ್ ನಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗೂಗಲ್‍ನಿಂದ ಗುಂಡಿ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಆದ್ರೆ ಸ್ವಲ್ಪ ಹೊತ್ತಿಗೆ ಮತ್ತೊಂದು ಗುಂಡಿ ಹುಟ್ಟಿಕೊಂಡಿದೆ.

  ಇದನ್ನೂ ಓದಿ: Karnataka Weather Report: ಮತ್ತೆ ರಾಜ್ಯದಲ್ಲಿ ಮಳೆ ಸಾಧ್ಯತೆ; ನದಿ ತೀರದ ಗ್ರಾಮಗಳಿಗೆ ಪ್ರವಾಹದ ಆತಂಕ

  ಗುಂಡಿಗಳಿಗೆ ಭೇಟಿ ನೀಡಲೇಬೇಕು

  ಗೂಗಲ್ ನಲ್ಲಿ 5 ಸ್ಟಾರ್ ಪಡೆದ ಗುಂಡಿಗಳಿಗೆ ಜನ ಕಾಮೆಂಟ್ ಹಾಕಿದ್ದಾರೆ. ಈ ರೀತಿಯ ರಸ್ತೆ ಗುಂಡಿಗಳನ್ನು ನಾವು ಹಿಂದೆ ಎಂದೂ ಕಂಡಿಲ್ಲ. ಮುಂದೆ ಕಾಣುತ್ತೀವೋ ಇಲ್ಲ ಗೊತ್ತಿಲ್ಲ. ಅದಕ್ಕೆ ಅಲ್ಲಿಗೆ ಭೇಟಿ ನೀಡಬೇಕು. ಖಂಡಿತವಾಗಿಯೂ ಭೇಟಿ ಕೊಡಲೇಬೇಕಾದ ಅತ್ಯುತ್ತಮ ಗುಂಡಿ ಎಂದು ಬಳಕೆದಾರರು ಹೇಳಿದ್ದಾರೆ.

  ಇದನ್ನೂ ಓದಿ: Basavaraj Bommai: ಪೇಸಿಎಂ ಪೋಸ್ಟರ್ ಅಂಟಿಸಿ ಸಿಎಂ ಬೊಮ್ಮಾಯಿಗೆ ಅಪಮಾನ; ಸಿಸಿಬಿಗೆ ಪ್ರಕರಣ ವರ್ಗಾವಣೆ ಮಾಡಿ ಆದೇಶ

  ರಸ್ತೆ ಗುಂಡಿಗಳಿಂದ ಪ್ರಾಣಕ್ಕೇ ಸಂಚಕಾರ
  ರಸ್ತೆ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಂಭೀರ ಗಾಯಮಾಡಿಕೊಂಡ ಘಟನೆ ನಡೆದಿದೆ. ಅದೆಷ್ಟೋ ಮಂದಿ ರಸ್ತೆ ಗುಂಡಿಗಳಲ್ಲಿ ಬಿದ್ದು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 2021-22ನೇ ಸಾಲಿನಲ್ಲಿ ಬರೋಬ್ಬರಿ 13 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.
  Published by:Savitha Savitha
  First published: