• Home
 • »
 • News
 • »
 • bengaluru-urban
 • »
 • Bengaluru: ಬೆಂಗಳೂರಲ್ಲಿ ಮನೆ ಕಟ್ಟೋಕೆ 5 ಲಕ್ಷ ಸಹಾಯಧನ!

Bengaluru: ಬೆಂಗಳೂರಲ್ಲಿ ಮನೆ ಕಟ್ಟೋಕೆ 5 ಲಕ್ಷ ಸಹಾಯಧನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

BBMP Housing Subsidy: ಬೆಂಗಳೂರು ನಗರದಲ್ಲಿ ಸ್ವಂತ ನಿವೇಶನ ಹೊಂದಿರುವ ಈ ಸಹಾಯಧನ ಪಡೆಯಲು ಆಸಕ್ತರು ಅರ್ಜಿ ಹಾಕುವ ವಿಧಾನ ಇಲ್ಲಿದೆ.

 • News18 Kannada
 • Last Updated :
 • Bangalore [Bangalore], India
 • Share this:

  ಬೆಂಗಳೂರು ನಾಗರಿಕರಿಗೆ ಶುಭಸುದ್ದಿಯೊಂದು ಪ್ರಕಟಗೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಿಶೇಷ ಸುದ್ದಿಯೊಂದನ್ಜು ಪ್ರಕಟಿಸಿದೆ. ಬೆಂಗಳೂರಿನ ನಾಗರಿಕರಿಗೆ (Bengaluru News) ಎಂದೇ ಎರಡು ಯೋಜನೆಗಳಿಗೆ ಅರ್ಜಿಯನ್ನು ನಾಗರಿಕರಿಂದ ಆಹ್ವಾನ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ (BBMP) ನಿಮ್ಮದೇ ಸ್ವಂತ ಜಾಗ ಇದ್ದರೆ ನೀವು 5 ಲಕ್ಷ ಸಹಾಯಧನ (BBMP Housing Subsidy) ಪಡೆದುಕೊಳ್ಳಬಹುದಾಗಿದೆ. ಬಿಬಿಎಂಪಿಯ (BBMP) ಈ 5 ಲಕ್ಷ ಸಹಾಯಧನವನ್ನು ನೀವೂ ಪಡೆದುಕೊಳ್ಳಬಹುದು. ಅಕ್ಟೋಬರ್ 31ರ ಒಳಗೆ ಈ ಯೋಜನೆಗೆ ನೀವು ಅರ್ಜಿ ಹಾಕಬಹುದಾಗಿದೆ.


  ಬೆಂಗಳೂರು ನಗರದಲ್ಲಿ ಸ್ವಂತ ನಿವೇಶನ ಹೊಂದಿರುವ ಈ ಸಹಾಯಧನ ಪಡೆಯಲು ಆಸಕ್ತರು ಅರ್ಜಿ ಹಾಕುವ ವಿಧಾನ ಇಲ್ಲಿದೆ.


  ಹೇಗೆ ಅರ್ಜಿ ಸಲ್ಲಿಸುವುದು?
  ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿಯೂ ಈ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.  ವೆಬ್​ಸೈಟ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಅಥವಾ ನಿಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರದಲ್ಲಿ ರೂ.30 ಶುಲ್ಕ ಪಾವತಿಸಿಯೂ ನೀವು ಅರ್ಜಿ ಸಲ್ಲಿಸಬಹುದಾಗಿದೆ.


  ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
  ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ಅಥವಾ ಯಾವುದೇ ಗೊಂದಲ ನಿವಾರಣೆಗಾಗಿ ಈ ದೂರವಾಣಿ ಸಂಖ್ಯೆಯನ್ನು ನೀವು ಸಂಪರ್ಕಿಸಬಹುದಾಗಿದೆ. ಬಿಬಿಎಂಪಿ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತೆ ಶೈಲಜಾ : 9480685854


  ಬೆಂಗಳೂರು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶುಭಸುದ್ದಿ
  2022-23 ನೇ ಸಾಲಿನ SSLC ಪರೀಕ್ಷೆ ಕೆಲವೇ ತಿಂಗಳಿದ್ದು ಪರೀಕ್ಷೆ ತಯಾರಿಗಳು ಭರದಿಂದ ಸಾಗಿದೆ. ಶಾಲೆಗಳಲ್ಲಂತೂ ಉತ್ತಮ ಅಂಕ ಪಡೆಯುವುದಕ್ಕಾಗಿ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿದೆ. ದಸರಾ ನಂತರ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಪಠ್ಯದಲ್ಲಿ ಹೆಚ್ಚು ತೊಡಗುವಂತೆ ಪ್ರೇರೇಪಿಸಲಾಗುತ್ತಿದೆ.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಈ ಮಧ್ಯೆ ಹಲವಾರು ವಿದ್ಯಾರ್ಥಿಗಳು ಹೆಚ್ಚಿನ ತರಬೇತಿಗಾಗಿ ಖಾಸಗಿಯಾಗಿ ಕೋಚಿಂಗ್ ಅಥವಾ ಟ್ಯೂಶನ್ ಕ್ಲಾಸ್​ಗಳಿಗೆ  (SSCL Coaching) ತೆರಳಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಬಡವರ್ಗದ ಮಕ್ಕಳಿಗಾಗಿ ಇದ್ಯಾವುದೂ ಸಾಧ್ಯವಾಗದು. ಹಾಗಾಗಿ ಬೆಂಗಳೂರು ನಗರ (Bengaluru News) ವ್ಯಾಪ್ತಿಯ ಮಕ್ಕಳಿಗಾಗಿ ಉಚಿತ ಹೆಚ್ಚುವರಿ ಕ್ಲಾಸ್ ನೀಡಲು (SSLC Free Coaching In Bengaluru) ಸರಕಾರೇತರ ಸಂಸ್ಥೆಯೊಂದು ಸಿದ್ಧವಾಗಿದೆ. 'ಜ್ಞಾನಯಜ್ಞ' ಹೆಸರಿನಡಿ ಕಬೀರ್ ಟ್ರಸ್ಟ್ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.


  100 ದಿನಗಳ‌ ಕೋಚಿಂಗ್
  'ಜ್ಞಾನಯಜ್ಞ' ಯೋಜನೆಯಡಿ ಕಬೀರ್ ಟ್ರಸ್ಟ್ ವತಿಯಿಂದ 100 ದಿನಗಳ ಉಚಿತ SSLC ಕೋಚಿಂಗ್ ಇದಾಗಿರುತ್ತದೆ.


  ಇದನ್ನೂ ಓದಿ: Bus Fair Hike: ಈ ಊರುಗಳಿಗೆ ಬಸ್ ಟಿಕೆಟ್ ದರ ಹೆಚ್ಚಳ


  ತರಬೇತಿ ಎಲ್ಲಿ?
  ಈ ತರಬೇತಿಯು ಬೆಂಗಳೂರಿನ ಜೆಸಿ ನಗರ ಸಮೀಪದ ಮೋತಿ ನಗರದಲ್ಲಿರುವ ಕಬೀರ್ ಆಶ್ರಮದಲ್ಲಿ ಸಾಯಂಕಾಲ 6.30 ಗಂಟೆಗೆ ಆರಂಭವಾಗಲಿದೆ.


  ಈ ದಿನಾಂಕದಂದು ಆರಂಭ
  ಅಕ್ಟೋಬರ್‌ 30 ರಿಂದ ಉಚಿತ ಕೋಚಿಂಗ್ ತರಬೇತಿ ಆರಂಭವಾಗಿ ನೂರು ದಿನಗಳ ಕಾಲ ನಡೆಯಲಿದೆ.


  ಅರ್ಜಿ ಸಲ್ಲಿಸಿ
  ಆಸಕ್ತ ವಿದ್ಯಾರ್ಥಿಗಳು ಐಟೆಕ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ‌್ಸ್, ಕಬೀರ್ ಆಶ್ರಮ ಇಲ್ಲಿಂದ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ನಡುವೆ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.


  ಹೆಚ್ಚಿನ ಮಾಹಿತಿಗಾಗಿ
  ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಕಬೀರ್ ಟ್ರಸ್ಟ್ ನ ಮೊಬೈಲ್ ಸಂಖ್ಯೆ 9845193425 ಸಂಪರ್ಕಿಸಬಹುದಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು