• Home
  • »
  • News
  • »
  • bengaluru-urban
  • »
  • Bengaluru: ಬೆಂಗಳೂರು ಉದ್ಯಾನ ನಗರಿ ಎಂದು ಮತ್ತೆ ಸಾಬೀತಾಯ್ತು ನೋಡಿ!

Bengaluru: ಬೆಂಗಳೂರು ಉದ್ಯಾನ ನಗರಿ ಎಂದು ಮತ್ತೆ ಸಾಬೀತಾಯ್ತು ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru Airport Terminal 2: ಈ ಗಾರ್ಡನ್ ಬೆಂಗಳೂರನ್ನು ಭಾರತದ ಉದ್ಯಾನ ನಗರಿ ಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಬೃಹತ್ ವಿಸ್ತರಣೆಗೆ 13,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ಇದರ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ಹೊಸದಾಗಿ ಟರ್ಮಿನಲ್ 2, (Bengaluru Terminal 2) ಎರಡನೇ ರನ್‌ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಅಲ್ಲದೇ ಈ ಸೌಲಭ್ಯದಿಂದ ಬೆಂಗಳೂರು ಉದ್ಯಾನ ನಗರಿ ಎಂಬುದು ಮತ್ತೆ ಸಾಬೀತಾಗಲಿದೆ. 


    ಈ ಟರ್ಮಿನಲ್ 2 ವನ್ನು 'ಗಾರ್ಡನ್ ಟರ್ಮಿನಲ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಈ ಗಾರ್ಡನ್ ಬೆಂಗಳೂರನ್ನು ಭಾರತದ ಉದ್ಯಾನ ನಗರಿ ಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ.


    ಇವೂ ಇರಲಿದೆ!
    ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದ ಮುಂತಾದವುಗಳನ್ನು ಸಹ ಈ ಉದ್ಯಾನವು ಹೊಂದಿರಲಿದೆ. ಹೀಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2 ಅತ್ಯಂತ ನಿರೀಕ್ಷೆ ಹುಟ್ಟುಹಾಕಿದೆ.


    ₹ 13,000 ಕೋಟಿಯಲ್ಲಿ ನಿರ್ಮಾಣ!
    ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ ₹ 13,000 ಕೋಟಿ. ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುತ್ತದೆ.


    ಅಮೆರಿಕದ ವಾಸ್ತುಶಿಲ್ಪ ಸಂಸ್ಥೆಯಿಂದ ವಿನ್ಯಾಸ!
    ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 25 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ಟರ್ಮಿನಲ್‌ನ ವಿನ್ಯಾಸಕ್ಕಾಗಿ ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಅನ್ನು ಆಯ್ಕೆ ಮಾಡಲಾಗಿದೆ.


    ಇದನ್ನೂ ಓದಿ: Vande Bharat vs Shatabdi: ಮೈಸೂರು-ಬೆಂಗಳೂರು-ಚೆನ್ನೈ ಓಡಾಟಕ್ಕೆ ಈ 2 ರೈಲುಗಳೇ ಬೆಸ್ಟ್!


    ಸ್ವಯಂ ಚೆಕ್-ಇನ್ ಮತ್ತು ಬ್ಯಾಗ್‌ಡ್ರಾಪ್ ಸೌಲಭ್ಯಗಳಂತಹ ಇತರ ಸೌಲಭ್ಯಗಳೊಂದಿಗೆ ಈ ಸೌಲಭ್ಯವು ಸುಂದರವಾದ ಒಳಾಂಗಣ ಉದ್ಯಾನವನ್ನು ಹೊಂದಿದೆ.


    ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
    ನವೆಂಬರ್ 11 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಹೈಸ್ಪೀಡ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ಒಂದೇ ನಿಲುಗಡೆಯನ್ನು ಹೊಂದಿರುತ್ತದೆ.


    ವಂದೇ ಭಾರತ್ ಎಕ್ಸ್​ಪ್ರೆಸ್ ಸಂಚಾರ ವಿವರ ಹೀಗಿದೆ
    ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ವಾರದಲ್ಲಿ ವಾರದಲ್ಲಿ ಒಟ್ಟು 6 ದಿನ ಈ ರೈಲು ಸೇವೆ ಒದಗಿಸಲಿದೆ. ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ- ಈ 6 ದಿನಗಳಂದು ಮಾತ್ರ ವಂದೇ ಭಾರತ್ ಸಂಚರಿಸಲಿದೆ.


    ಇದನ್ನೂ ಓದಿ: Bengaluru To Pune: 50 ಸಾವಿರ ಕೋಟಿಯ ಬೆಂಗಳೂರು-ಪುಣೆ ಸೂಪರ್ ಎಕ್ಸ್​ಪ್ರೆಸ್ ಹೈವೆ; ಈ ಜಿಲ್ಲೆಗಳಿಗೂ ಅನುಕೂಲ


    497 ಕಿಮೀ ಇಷ್ಟು ಕಡಿಮೆ ಸಮಯದ ಪ್ರಯಾಣ!
    ಈ ರೈಲು ಚೆನ್ನೈ ಮತ್ತು ಮೈಸೂರು ನಡುವೆ ಒಟ್ಟು 497 ಕಿಮೀ ದೂರವನ್ನು 6 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಗಂಟೆಗೆ ಸರಾಸರಿ 74 ಕಿಮೀ ವೇಗವಾಗಿ ಸಂಚರಿಸುವ ವಂದೇ ಭಾರತ್ ರೈಲು ಬೆಂಗಳೂರು ಸಿಟಿ ಜಂಕ್ಷನ್​ನಲ್ಲಿ ಮಾತ್ರ ನಿಲ್ಲುತ್ತದೆ.

    Published by:ಗುರುಗಣೇಶ ಡಬ್ಗುಳಿ
    First published: