ಬೆಂಗಳೂರು: ರಸ್ತೆ ತುಂಬ ಜನ, ಜನರ ಮಧ್ಯೆ ಮೈಕ್ ಹಿಡಿದು ನಿಂತಿರೋ ಯುವಕ ಯುವತಿಯರು. ಮುಖಕ್ಕೆ ಸುಂದರವಾಗಿ ಬಣ್ಣ ಹಚ್ಚಿಕೊಳ್ಳುತ್ತಿರುವ ಪುಟಾಣಿ ಮಕ್ಕಳು. ಎಲ್ಲರೂ ಸೇರಿ ಮಾಡಿದ್ರು ಬೆಂಗಳೂರಿನ ರಸ್ತೆಗಳಲ್ಲಿ (Bengaluru Beedi Habba) ಗರ್ದಿ ಗಮ್ಮತ್ತಿನ ಜೊತೆ ಜಾಗೃತಿ!
ಭಾನುವಾರ ಅಂದರೆ ಹೀಗೆ ಏನಾದರೂ ವಿಭಿನ್ನವಾಗಿ ಕಳೆಯಬೇಕು ಅನಿಸೋದು ಸಹಜ. ಬೆಂಗಳೂರಿನಲ್ಲಿ ಈಗ ಹೀಗೆ ವಿಶಿಷ್ಟ ಕೆಲಸವೊಂದನ್ನು ಮಾಡಲು ಹೊರಟ ಈ ಯುವ ಗುಂಪಿನದ್ದೇ ಸುದ್ದಿ!
ಸಾರಕ್ಕಿ ಜಂಕ್ಷನ್ನಲ್ಲಿ ಗಮನ ಸೆಳೆದ ಬೀದಿ ಹಬ್ಬ!
ಹೌದು, ಬೆಂಗಳೂರಿನ ಬನಶಂಕರಿ ಬಳಿಯ ಸಾರಕ್ಕಿ ಜಂಕ್ಷನ್ನಲ್ಲಿ ಇಂಥದ್ದೊಂದು ಬೀದಿ ಹಬ್ಬ ಆಚರಣೆ ಮಾಡಲಾಯಿತು. ಈ ಬೀದಿ ಹಬ್ಬವನ್ನು ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್, ಸ್ಮಿತಂನಿಂದ ಈ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: Ramanagara: ಬಾಡೂಟದ ಶಿವರಾತ್ರಿ! ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು ನೈವೇದ್ಯ ಮಾಡಿ ಸವಿದ ಭಕ್ತರು!
ಬೀದಿ ಹಬ್ಬದ ಹಿಂದಿದೆ ವಿಶಿಷ್ಟ ಕಾರಣ!
ಹೀಗೆ ಬೀದಿಹಬ್ಬ ಅನ್ನೋ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡೋಕೆ ಮೂಲ ಕಾರಣ ಏನು ಅಂದ್ರೆ ಪರಿಸರ ರಕ್ಷಣೆ, ಸ್ವಚ್ಛ ಬೆಂಗಳೂರು, ಟ್ರಾಫಿಕ್ ನಿಯಮಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು. ಭಾನುವಾರವನ್ನು ಬೇಕಾಬಿಟ್ಟಿ ಕಳೆದು ವೇಸ್ಟ್ ಮಾಡದೇ ವಿಶಿಷ್ಟ ರೀತಿಯಲ್ಲಿ ಜನಜಾಗೃತಿ ಮೂಡಿಸಲು ಮೀಸಲಿಟ್ಟ ತಂಡದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಯಿತು.
ಇದನ್ನೂ ಓದಿ: Karnataka Budget 2023: ಹೆದ್ದಾರಿ ಅಭಿವೃದ್ಧಿಗೆ ಸಾವಿರಾರು ಕೋಟಿ! ರಾಜ್ಯದ ಈ ಊರುಗಳಿಗೆ ಹೊಸ ಹೈವೇ
ಈ ಜಾಗೃತಿ ಕಾರ್ಯಕ್ರಮಕ್ಕೆ ನೆರೆದ ಜನ ಸಖತ್ ಸರ್ಪೋಟ್ ಕೊಟ್ರು. ವಯಸ್ಸಿನ ಅಂತರ ಮರೆತು ಹಾಡಿ, ಕುಣಿದು ಕುಪ್ಪಳಿಸಿದ ಎಂಜಾಯ್ ಮಾಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ