Bannerghatta Zoo: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿ!

ಬನ್ನೇರುಘಟ್ಟ ಜೀಬ್ರಾ

ಬನ್ನೇರುಘಟ್ಟ ಜೀಬ್ರಾ

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ತನ್ನ ಮುದ್ದಾದ ಕಣ್ಣಿನ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಮರಿ ಜೀಬ್ರಾ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೊಸ ಅತಿಥಿ.

  • News18 Kannada
  • 2-MIN READ
  • Last Updated :
  • Anekal, India
  • Share this:

ಬೆಂಗಳೂರು:  ರಾಜ್ಯ ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta National Park) ವನ್ಯಜೀವಿಗಳ ತಾಣವಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ವನ್ಯಜೀವಿಗಳನ್ನು ಕಂಡು ಸಂತಸಗೊಂಡಿದ್ದಾರೆ. ಇದೀಗ ಪಾರ್ಕ್​​ಗೆ (Bannerghatta Zoo) ಹೊಸ ಅತಿಥಿ ಆಗಮನವಾಗಿದೆ. 
ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ತನ್ನ ಮುದ್ದಾದ ಕಣ್ಣಿನ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ಮರಿ ಜೀಬ್ರಾ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹೊಸ ಅತಿಥಿ. ಹೌದು, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾವೇರಿ ಎಂಬ ಜೀಬ್ರಾ ಮುದ್ದಾದ  ಮರಿಗೆ ಜನ್ಮ ನೀಡಿದೆ.


ಇಸ್ರೇಲ್ ಮೂಲದ ದಂಪತಿ!
2014ರಲ್ಲಿ ಇಸ್ರೇಲ್​ನಿಂದ ತರಲಾಗಿದ್ದ ಕಾವೇರಿ ಹಾಗೂ ಭರತ್ ದಂಪತಿಗೆ ಮರಿ ಜನಿಸಿದೆ. ಹತ್ತು ವರ್ಷ ವಯಸ್ಸಿನ ತಾಯಿ ಕಾವೇರಿ ಮತ್ತು ತಂದೆ ಭರತ್ ಜೋಡಿ ಮುದ್ದಾದ ಮರಿ ಜೀಬ್ರಾಗೆ ಜನ್ಮ ನೀಡಿದ್ದು, ಮರಿ ಜೀಬ್ರಾ ಸೇರ್ಪಡೆಯೊಂದಿಗೆ, ಮೃಗಾಲಯದಲ್ಲಿ ಒಟ್ಟು ಜೀಬ್ರಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಜೀಬ್ರಾ ಮರಿಯ ತುಂಟಾಟ
ತಾಯಿ ಮತ್ತು ಮರಿ ಜೀಬ್ರಾ ಎರಡು ಆರೋಗ್ಯಕರವಾಗಿದ್ದು ಪಾರ್ಕ್​ನ ಪಶುವೈದ್ಯಕೀಯ ತಂಡ ಮತ್ತು ಪ್ರಾಣಿಪಾಲಕರು ಹೆಚ್ಚಿನ ಆರೈಕೆಯನ್ನ ಮಾಡುತ್ತಿದ್ದಾರೆ. ಪಾರ್ಕ್ ನಲ್ಲಿ ತಾಯಿ ಜೀಬ್ರಾದೊಂದಿಗೆ ಮುದ್ದಾದ ಜೀಬ್ರಾ ಮರಿಯ ತುಂಟಾಟ ಪ್ರವಾಸಿಗರನ್ನ ಹೆಚ್ಚು ಆಕರ್ಷಣೆ ಮಾಡುವ ಕೇಂದ್ರಬಿಂದುವಾಗಿದೆ.
ತಾಯಿ ಜೀಬ್ರಾಗೆ ಏನೆಲ್ಲ ಆಹಾರ ಕೊಡ್ತಾರೆ?
12 ವರ್ಷದ ಕಾವೇರಿ ಜೀಬ್ರಾಗೆ ಇದು ಐದನೇ ಮರಿಯಾಗಿದ್ದು, ತಾಯಿ ಮಗು ಆರೋಗ್ಯಕರವಾಗಿದೆ. ಬೇಸಿಗೆಯಾದ್ದರಿಂದ ತಾಯಿ ಹಾಗೂ ಮರಿ ಜೀಬ್ರಾವನ್ನು ವಿಶೇಷ ಕಾಳಜಿ ಇಟ್ಟು ನೋಡಿಕೊಳ್ಳಲಾಗುತ್ತಿದೆ. ತಾಯಿ ಕಾವೇರಿ ಮರಿ ಜೀಬ್ರಾಗೆ ಹೆಚ್ಚಿನ ಹಾಲು ಮರಿಗೆ ನೀಡಬೇಕಾಗಿರುವ ಹಿನ್ನೆಲೆ ಪೋಷಕಾಂಶಗಳ ಹಣ್ಣುಹಂಪಲನ್ನ ತಾಯಿ ಜೀಬ್ರಾಗೆ ನೀಡಲಾಗುತ್ತಿದೆ.


ಇದನ್ನೂ ಓದಿ: Bengaluru News: ತೆರಿಗೆ ಸಂಗ್ರಹದಲ್ಲೂ ಬೆಂಗಳೂರು ಬೆಸ್ಟ್!

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರ-ಗಿಡಗಳಿಂದ ಹಸಿರು ಹೊದಿಕೆಯಿಂದ ಕೂಡಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಬೇಸಿಗೆಯ ತಾಪ ಹೆಚ್ಚು ಸಮಸ್ಯೆ ಎದುರಾಗದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ನೋಡಿಕೊಂಡಿದ್ದಾರೆ. ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. ಪಾರ್ಕ್ ನಲ್ಲಿ ಮರಿ ಜೀಬ್ರಾ ಒಂದು ರೀತಿ ಸಂತಸ ಜೊತೆಗೆ ಪ್ರಾಣಿ- ಪಕ್ಷಿ ಪ್ರಿಯರ ಆಕರ್ಷಣಿಯವಾಗಿದೆ.


ಇದನ್ನೂ ಓದಿ: Bengaluru History: ಕರಗ ನಡೆಸುವ ತಿಗಳರ ಇತಿಹಾಸ! ಇವರು ಬೆಂಗಳೂರಿಗೆ ಬಂದಿದ್ದೇಗೆ?


ಒಟ್ಟಾರೆ ವನ್ಯ ಜೀವಿಗಳ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ದಿನೇ ದಿನೇ ತನ್ನ ಖ್ಯಾತಿಯನ್ನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಪ್ರವಾಸಿಗರ ನೆಚ್ಚಿನ ಆಕರ್ಷಣಿಯ ತಾಣವಾಗಿದೆ. ಇದೀಗ ಇದರ ಸೊಬಗನ್ನು ಮರಿ ಜೀಬ್ರಾ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಬಿಡುವು ಸಿಕ್ಕಾಗ ನೀವು ಒಮ್ಮೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಮುದ್ದಾದ ಮರಿ ಜೀಬ್ರಾ ಜೊತೆಗೆ ಪ್ರಾಣಿ- ಪಕ್ಷಿಗಳನ್ನ ನೋಡುತ್ತಾ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.

top videos


    ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್.

    First published: