ಬೆಂಗಳೂರು: ಅಪರೂಪದಲ್ಲಿ ಅಪರೂಪದ ವಿದ್ಯಮಾನವೊಂದು ನಮ್ ಬೆಂಗಳೂರಿನಲ್ಲಿ ನಡೆದಿದೆ. ವಿಚಿತ್ರ ಸ್ಥಿತಿಯಲ್ಲಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯೋರ್ವನನ್ನು ಬೆಂಗಳೂರಿನ ಪೊಲೀಸರು (Bengaluru Police) ರಕ್ಷಿಸಿದ್ದಾರೆ. ಅಪರಿಚಿತ ವ್ಯಕ್ತಿಯೋರ್ವ ತೆಂಗಿನ ಮರ (Coconut Tree) ಹತ್ತಿದ್ದ. ಆದ್ರೆ ತೆಂಗಿನ ಮರದ ಮೇಲೆಯೇ ಪ್ರಜ್ಞೆ ತಪ್ಪಿಬಿಟ್ಟಿದ್ದ! ತೆಂಗಿನ ಮರದಿಂದ ಕೆಳಗೆ ಬೀಳೋ ಅಪಾಯಕ್ಕೆ ಸಿಲುಕಿದ್ದ ಈ ಅಪರಿಚಿತ ವ್ಯಕ್ತಿ.
ಬೆಂಗಳೂರಿನ ವಿಜಯಶ್ರೀ ಲೇಔಟ್, ಮೈಲಸಂದ್ರ ಬಳಿಯೇ ಈ ವಿಚಿತ್ರ ಘಟನೆ ನಡೆದಿರೋದು. ಹೀಗೆ ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದ ವ್ಯಕ್ತಿ ಸ್ಥಳೀಯರಿಗೆ ಕಂಡಿದ್ದಾನೆ. ಸ್ಥಳೀಯರು ತಕ್ಷಣ ಬೆಂಗಳೂರು ಪೊಲೀಸರಿಗೆ ವಿಷಯ ರವಾನಿಸಿದ್ದಾರೆ.
ಬರೋಬ್ಬರಿ 30 ನಿಮಿಷ ಕಾರ್ಯಾಚರಣೆ!
ಒಂದು ಕ್ಷಣವೂ ತಡಮಾಡದೇ ಸಿವಿಲ್ ಡಿಫೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿ ಅಪರಿಚಿತ ವ್ಯಕ್ತಿ ತೆಂಗಿನ ಮರದಲ್ಲಿ ಸಿಲುಕಿದ ಸ್ಥಳಕ್ಕೆ ಆಗಮಿಸಿದ್ದಾರೆ. ಬರೋಬ್ಬರಿ ಮೂವತ್ತು ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: Fish Meals In Bengaluru: ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಭರ್ಜರಿ ಮೀನೂಟ! 100 ಕ್ಯಾಂಟೀನ್ ಆರಂಭ
ವ್ಯಕ್ತಿ ಆಸ್ಪತ್ರೆಗೆ ದಾಖಲು
ಅಂತೂ ಇಂತೂ ತೆಂಗಿನ ಮರದಲ್ಲಿ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಸದ್ಯ ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Bannerghatta: 30 ವರ್ಷಗಳಿಂದ ನಿಂತಿದ್ದ ಮೂಗು ಮಾರಮ್ಮ ದೇವಿ ಜಾತ್ರೆ ಮತ್ತೆ ಆರಂಭ!
ಇನ್ನಷ್ಟೇ ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದ ವ್ಯಕ್ತಿಯ ಗುರುತು ಪತ್ತೆಯಾಗಬೇಕಿದೆ. ಒಟ್ಟಾರೆ ಅಪರೂಪದ ಅಪಾಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ ಬೆಂಗಳೂರು ಪೊಲೀಸರ ಕುರಿತು ಶ್ಲಾಘನೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ