Parks in Bengaluru: ಇನ್ಮುಂದೆ ಬೆಂಗಳೂರಿನಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ತೆರೆದಿರಲಿವೆಯಂತೆ ಉದ್ಯಾನವನಗಳು

ವ್ಯಸ್ಥ ಕೆಲಸಗಳ ಮಧ್ಯೆ ವಿಶ್ರಾಂತಿ ಪಡೆಯಲು ಪಾರ್ಕ್‍ಗಳು ಉಪಯೋಗಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳ ಬಳಕೆಯನ್ನು ಅತ್ಯುತ್ತಮವಾಗಿಸಲು, ನೆರೆಹೊರೆಯ ಉದ್ಯಾನವನಗಳನ್ನು ಬೆಳಿಗ್ಗೆ 6 ರಿಂದ 8ರ ವರೆಗೆ ತೆರೆದೇ ಇಡುವ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru) ಹೆಸರಿಗೆ ತಕ್ಕಂತೆ, ಬಹಳ ಸಂಖ್ಯೆಯಲ್ಲಿ ಉದ್ಯಾನವನಗಳಿವೆ, ಆದರೆ ಅವುಗಳಲ್ಲಿ ಹೆಚ್ಚಿನ ಪಾರ್ಕ್‍ಗಳು ಬೆಳಿಗ್ಗೆ ಮತ್ತು ಸಂಜೆ ನಿಗದಿತ ವೇಳೆಯಲ್ಲಿ ಮಾತ್ರ ತೆರೆದಿರುತ್ತವೆ. ಆ ಸಮಯದಲ್ಲಿ ವಾಕಿಂಗ್ ಮತ್ತು ವಾಯು ಸೇವನೆಗೆ ಬರುವವರಿಗೆ ಮಾತ್ರವಷ್ಟೇ ಅವು ಉಪಯೋಗವಾಗುತ್ತವೆ. ಆದರೆ, ಸದ್ಯದಲ್ಲೇ ಈ ಪಾರ್ಕ್‍ಗಳ ವೇಳಾಪಟ್ಟಿ ಬದಲಾಗಲಿದೆ. ನೂರಾರು ಕಾರ್ಮಿಕರಿಗೆ (Workers) ಮತ್ತು ಡೆಲಿವರಿ ಕೆಲಸಗಳನ್ನು ಮಾಡುವ ಉದ್ಯೋಗಿಗಳಿಗೆ, ತಮ್ಮ ವ್ಯಸ್ಥ ಕೆಲಸಗಳ ಮಧ್ಯೆ ವಿಶ್ರಾಂತಿ ಪಡೆಯಲು ಪಾರ್ಕ್‍ಗಳು (Park) ಉಪಯೋಗಕ್ಕೆ ಸಿಗುತ್ತಿಲ್ಲ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳ ಬಳಕೆಯನ್ನು ಅತ್ಯುತ್ತಮವಾಗಿಸಲು, ನೆರೆಹೊರೆಯ ಉದ್ಯಾನವನಗಳನ್ನು ಬೆಳಿಗ್ಗೆ 6 ರಿಂದ 8ರ ವರೆಗೆ ತೆರೆದೇ ಇಡುವ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿಳಿಸಿದೆ.

ಹೊಸ ಆದೇಶವನ್ನು ಹೊರಡಿಸಲು ಮುಂದಾದ ಬಿಬಿಎಂಪಿ ಆಯುಕ್ತರು 
“ ಎಲ್ಲಾ ವರ್ಗದ ಜನರು ಕುಳಿತುಕೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಪಾರ್ಕ್‍ಗಳು ತೆರೆದಿರಬೇಕು. ನಾನು ಶೀಘ್ರದಲ್ಲೇ ಆದೇಶವನ್ನು ಹೊರಡಿಸುತ್ತೇನೆ” ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ಕಾರಣಗಳಿಂದಾಗಿ, ಸರೋವರಗಳು ಇರುವ ಪ್ರದೇಶದಲ್ಲಿ ಇರುವ ಉದ್ಯಾನಗಳ ಪ್ರವೇಶಕ್ಕೆ ನಿರ್ಬಂಧ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಉದ್ಯಾನವನಗಳು, ದಿನದಲ್ಲಿ ಒಂದು ಸೀಮಿತ ಅವಧಿಯವರೆಗೆ ಮಾತ್ರ ತೆರೆದಿರುತ್ತವೆ. ವಸತಿ ಪ್ರದೇಶಗಳಲ್ಲಿ ಅವುಗಳನ್ನು, ಬೆಳಿಗ್ಗೆ 6 ರಿಂದ 11 ಅಥವಾ 12 ಮತ್ತು ಸಂಜೆ 4-5 ಗಂಟೆಯಿಂದ 7-8 ಗಂಟೆಯ ವರೆಗೆ ತೆರೆಯಲಾಗುತ್ತದೆ.

ಡೆಲಿವರಿ ಕೆಲಸ ಮಾಡುವವರಿಗೆ ವಿಶ್ರಾಂತಿಸಲು ಸರಿಯಾದ ಸ್ಥಳವಿಲ್ಲ  
ಶನಿವಾರ ಮಧ್ಯಾಹ್ನ , ಫುಡ್ ಡೆಲಿವರಿ ಪಾಟ್ನರ್ ಮಾಧುರಿ ಎಂಬವರು, ಕೆಲಸದ ನಡುವೆ ಕೊಂಚ ವಿಶ್ರಾಂತಿ ಪಡೆಯಲೆಂದು ಜಯನಗರದಲ್ಲಿ ಉದ್ಯಾನವನಕ್ಕಾಗಿ ಹುಡುಕಾಡಿದರು. ಎಲ್ಲಾ ಪಾರ್ಕ್‍ಗಳು ಮುಚ್ಚಿವೆ ಎಂಬುದನ್ನು ಅರ್ಥ ಮಾಡಿಕೊಂಡ ಅವರು, ರಾತ್ರಿ ಮನೆ ತಲುಪುವವರೆಗೂ ನಿರಂತರವಾಗಿ ಕೆಲಸವನ್ನು ಮುಂದುವರೆಸಿದರು. “ನಾವು ಬೆಳಗ್ಗೆ ಬೇಗನೆ ಕೆಲಸ ಆರಂಭಿಸುತ್ತೇವೆ, ಮತ್ತು 11 ಗಂಟೆಯ ಹೊತ್ತಿಗೆ ಸುಸ್ತಾಗಿಬಿಡುತ್ತದೆ. ಪಾರ್ಕ್‍ನಲ್ಲಿ ಒಂದು 15 ನಿಮಿಷ ವಿಶ್ರಾಂತಿ ಪಡೆದರೆ ತ್ರಾಣ ಬರುತ್ತದೆ ಮತ್ತು ಕೆಲಸಕ್ಕೆ ಮರಳಬಹುದು” ಎಂದು ಹೇಳುತ್ತಾರೆ ಮಾಧುರಿ.

ಇದನ್ನೂ ಓದಿ:  Bank Employee Murder: ಕಳ್ಳ ಎಂದು ಭಾವಿಸಿ ಬ್ಯಾಂಕ್ ನೌಕರನಿಗೆ ಹೊಡೆದ ಸೆಕ್ಯೂರಿಟಿ ಗಾರ್ಡ್, ಸತ್ತೇ ಹೋದ ಅಮಾಯಕ!

ಬೆಂಗಳೂರು ನಗರದಲ್ಲಿ , ಈ ರೀತಿ ವಿಶ್ರಾಂತಿಗೆ ಮತ್ತು ಕುಳಿತು ಊಟ ಮಾಡಲು ಜಾಗವಿಲ್ಲದ ಸಾವಿರಾರು ಮಾಧುರಿಗಳು ಇದ್ದಾರೆ. ಜೆಪಿ ನಗರ, ಜಯನಗರ, ಕೋರಮಂಗಲ, ರಾಜಾಜಿನಗರ, ಬಿಟಿಎಂ ಲೇಔಟ್ ಮತ್ತು ಬಸವೇಶ್ವರ ನಗರದಂತಹ ಸ್ಥಳಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣ ಸಿಗುತ್ತದೆ.

ಮೀಸಲು ವಿಶ್ರಾಂತಿ ಕೋಣೆಗಳನ್ನು ಸ್ಥಾಪಿಸಬೇಕೆಂದು ಮನವಿ
ಪಾರ್ಕ್‍ಗಳನ್ನು ಗಲೀಜು ಮಾಡುತ್ತಾರೆ ಎಂಬ ಕಾರಣ ನೀಡಿ, ಕಾರ್ಮಿಕ ವರ್ಗದ ಜನರನ್ನು , ಬಿಬಿಎಂಪಿಯು ಪಾರ್ಕ್‍ಗಳಿಂದ ದೂರ ಇಟ್ಟಿರುವುದು ಅಮಾನವೀಯವಾಗಿದೆ ಎಂದು ಯುನೈಟೆಡ್ ಫುಡ್ ಡೆಲಿವರಿ ಪಾಟ್ನರ್ಸ್ ಯೂನಿಯನ್‍ನ ಅಧ್ಯಕ್ಷ ವಿನಯ್ ಸಾರಥಿ ಹೇಳಿದ್ದಾರೆ. “ ರಾಜ್ಯದೆಲ್ಲೆಡೆ ಮೀಸಲು ವಿಶ್ರಾಂತಿ ಕೋಣೆಗಳನ್ನು ಸ್ಥಾಪಿಸಬೇಕೆಂದು ನಾವು ಫುಡ್ ಡೆಲಿವರಿ ಕಂಪನಿಗಳಿಗೆ ಬೇಡಿಕೆ ಇಡುತ್ತಿದ್ದೇವೆ, ಆದರೆ ಅವರಿಗೆ ಪಾರ್ಕ್‍ಗಳಿಗೆ ಕೂಡ ಪ್ರವೇಶ ನೀಡಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Gaganachukki Barachukki Waterfalls: ನೋಡಲು 2 ಕಣ್ಣು ಸಾಲೋದಿಲ್ಲ! ಗಗನಚುಕ್ಕಿ ಭರಚುಕ್ಕಿ ಜಲಪಾತದ ವೈಭವ ಇದು!

ಪಾರ್ಕ್‍ಗಳ ಖಾಸಾಗಿಕರಣವೇ , ನಿಯಂತ್ರಣವು ನಿವಾಸಿಗಳ ಕೈಗೆ ಹೋಗಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಕಾರ್ಮಿಕ ವರ್ಗದ ಮಹಿಳೆಯರ ಹಕ್ಕುಗಳಿಗಾಗಿ ದುಡಿಯುತ್ತಿರುವ ಮಧು ಭೂಷಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ ಈ ಸ್ಥಳಗಳು, ಪಬ್ಲಿಕ್ -ಪ್ರೈವೆಟ್ ಪಾಟ್ನರ್‍ಶಿಪ್ ಮಾದರಿಯಲ್ಲಿ ಖಾಸಗೀಕರಣಗೊಂಡಿರುವುದರಿಂದ, ನಿವಾಸಿಗಳು ತಾವೇ ಈ ಸ್ಥಳಗಳ ಮಾಲೀಕರು ಎಂದು ಭಾವಿಸಿದ್ದಾರೆ” ಎಂದು ಹೇಳುತ್ತಾರೆ ಮಧು ಭೂಷಣ್.
ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಪೂರ್ವಾಹ್ನದ ವೇಳೆಯಲ್ಲಿ ಈ ಪಾರ್ಕ್‍ಗಳ ಹೊರಗೆ ಕುಳಿತುಕೊಳ್ಳುತ್ತಾರೆ. ಪಾರ್ಕ್‍ನ ಒಳಗೆ ಪ್ರವೇಶ ಇಲ್ಲದೇ ಇರುವುದರಿಂದ, ತಮ್ಮ ದಿನದ ಮೊದಲನೇ ಹಂತದ ಕೆಲಸವನ್ನು ಮುಗಿಸುವ ಸಾವಿರಾರು ಪೌರ ಕಾರ್ಮಿಕರು, ಪಾರ್ಕ್‍ನ ಹೊರಗೆ ಕುಳಿತು ತಿಂಡಿ ತಿನ್ನಬೇಕಾಗುತ್ತದೆ.
Published by:Ashwini Prabhu
First published: