• Home
  • »
  • News
  • »
  • bengaluru-urban
  • »
  • Annamma Temple: ಮೆಜೆಸ್ಟಿಕ್​ನಲ್ಲೊಂದೇ ಅಲ್ಲ, ಶ್ರೀನಗರದಲ್ಲೂ ಇರುವಳು ಅಣ್ಣಮ್ಮ ತಾಯಿ!

Annamma Temple: ಮೆಜೆಸ್ಟಿಕ್​ನಲ್ಲೊಂದೇ ಅಲ್ಲ, ಶ್ರೀನಗರದಲ್ಲೂ ಇರುವಳು ಅಣ್ಣಮ್ಮ ತಾಯಿ!

ಇಲ್ಲಿ ದರ್ಶನ ಪಡೆಯಿರಿ

"ಇಲ್ಲಿ ದರ್ಶನ ಪಡೆಯಿರಿ"

ನವಶಕ್ತಿ ಅಣ್ಣಮ್ಮ ದೇವಿಯ ಪವಾಡ ಅಂತಿಂಥದ್ದಲ್ಲ. ಒಮ್ಮೆ ಒಬ್ಬರಿಗೆ ಧ್ವನಿಪೆಟ್ಟಿಗೆ ಸಮಸ್ಯೆಯಾಗಿ ಮಾತು ನಿಂತು ಹೋಗಿತ್ತಂತೆ. ಆಗ ಅಣ್ಣಮ್ಮ ತಾಯಿಯ ಪವಾಡವೇ ವ್ಯಕ್ತಿಗೆ ಮಾತು ತರಿಸಿತಂತೆ!

  • Share this:

    ಬೆಂಗಳೂರು: ಇಡೀ ರಾಜ್ಯದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ದೇವಸ್ಥಾನಗಳಲ್ಲಿ ನವರಾತ್ರಿಯ ದಿನ ದಿನವೂ (Navaratri 2022) ವಿಶೇಷ ಅಲಂಕಾರ ಮಾಡಿ ದೇವಿಯನ್ನು ಆರಾಧಿಸಲಾಗುತ್ತಿದೆ. ಅದ್ರಲ್ಲೂ ಬೆಂಗಳೂರಲ್ಲಿ (Bengaluru Temples)  ನವರಾತ್ರಿ ಅಂದ ತಕ್ಷಣ ನಗರದೇವತೆ ಅಣ್ಣಮ್ಮ ತಾಯಿನೇ ನೆನಪಾಗ್ತಾಳೆ. ಆದ್ರೆ ಮೆಜೆಸ್ಟಿಕ್​ನಲ್ಲಿರುವ ಅಣ್ಣಮ್ಮ ದೇವಸ್ಥಾನದಷ್ಟೇ ಪ್ರಾಮುಖ್ಯತೆ ಹೊಂದಿರುವ ಮತ್ತೊಂದು ಅಣ್ಣಮ್ಮ ದೇಗುಲ ನಮ್ಮ ಬೆಂಗಳೂರಿನಲ್ಲಿದೆ. ಅರೇ! ಮತ್ತೊಂದು ಅಣ್ಣಮ್ಮ ದೇವಸ್ಥಾನ ಅಂತಾನಾ ಕನ್ಫೂಸ್​ ಆಗ್ಬೇಡಿ. ಶ್ರೀ ಪ್ರಸನ್ನ ನವಶಕ್ತಿ ಅಣ್ಣಮ್ಮ ದೇಗುಲ (Annamma Temple) ಶ್ರೀಕ್ಷೇತ್ರ ಶ್ರೀನಗರ (Bengaluru Srinagar)  ಬಳಿ ಇದೆ.


    ಶ್ರೀನಗರ ಬಸ್ ಸ್ಟ್ಯಾಂಡ್​ನಿಂದ ಕೂಗಳತೆ ದೂರದಲ್ಲಿ ಈ ದೇಗುಲವಿದೆ. ಬರೋಬ್ಬರಿ 50ಕ್ಕೂ ಹೆಚ್ಚು ವರ್ಷಗಳಿಂದ ನವಶಕ್ತಿ ಅಣ್ಣಮ್ಮ ಇಲ್ಲಿ ನೆಲಿಸಿದ್ದಾಳಂತೆ. ಈ ದೇವಿ ಬಳಿ ಬಂದು ಶ್ರದ್ಧೆಯಿಂದ ನಮಿಸಿ, ಭಕ್ತಿಯಿಂದ ಬೇಡಿಕೊಂಡರೇ ಕೇಳಿದ್ದನ್ನೆಲ್ಲ ಕರುಣಿಸುತ್ತಾಳೆ ಅಂತಾರೆ ಇಲ್ಲಿನ ಭಕ್ತಾದಿಗಳು.


    ದೇವಿಯೇ ಕಾಪಾಡು


    ಇದನ್ನೂ ಓದಿ: Success Story: ಕಾಲೇಜ್​ಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ! ಇಡೀ ಊರಿಗೇ ಬಂತು ಭಾಗ್ಯ!


    ನವಶಕ್ತಿ ಅಣ್ಣಮ್ಮ ದೇವಿಯ ಪವಾಡ ಅಂತಿಂಥದ್ದಲ್ಲ. ಒಮ್ಮೆ ಒಬ್ಬರಿಗೆ ಧ್ವನಿಪೆಟ್ಟಿಗೆ ಸಮಸ್ಯೆಯಾಗಿ ಮಾತು ನಿಂತು ಹೋಗಿತ್ತಂತೆ. ವೈದ್ಯರು ಮತ್ತೆ ಮಾತನಾಡಲು ಬಹಳ ಸಮಯ ಬೇಕು ಎಂದಿದ್ದರಂತೆ. ಆ ವ್ಯಕ್ತಿ ಈ ದೇವಸ್ಥಾನಕ್ಕೆ ಬಂದು ತಾಯಿ ಮುಂದೆ ಮಂಡಿಯೂರಿ ಬೇಡಿಕೊಂಡಿದ್ದರಂತೆ. ಮಾರನೇ ದಿನವೇ ಆ ವ್ಯಕ್ತಿ ಮುಂಚಿನಂತೆ ಮಾತನಾಡಲು ಶುರು ಮಾಡಿದ್ದರು ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.




    ಇದನ್ನೂ ಓದಿ: ಕನ್ನಡ ತಾಯಿಗೆ ಕೈಮುಗಿಯಲು ಇಲ್ಲಿ ಬನ್ನಿ! ಏಕೈಕ ಕನ್ನಡಮ್ಮನ ದೇಗುಲ ಇದು


    Annamma Temple Srinagar ಅಣ್ಣಮ್ಮ ದೇವಿ ದರ್ಶನ ಪಡೆಯಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೀವೂ ಕೂಡ ಶ್ರೀ ಪ್ರಸನ್ನ ನವಶಕ್ತಿ ಅಣ್ಣಮ್ಮ ದೇವಿಯ ದರ್ಶನ ಮಾಡಿ ಕಷ್ಟ ಕಾರುಣ್ಯಗಳನ್ನು ನಿವಾರಿಸಿಕೊಳ್ಳಬಹುದು. ಆ ದೇವಿಗೆ ಉಘೇ ಎನ್ನಬಹುದು.


    ವರದಿ: ವಾಸುದೇವ. ಎಂ.

    Published by:ಗುರುಗಣೇಶ ಡಬ್ಗುಳಿ
    First published: