Bengaluru Flood: ಬೆಂಗಳೂರಿನ ಹಲವೆಡೆ ತುಂಬಿದ ನೀರು, ಮತ್ತೆ ವೈರಲ್ ಆಯ್ತು ಹಳೇ ವಿಡಿಯೋ!

ಬೆಂಗಳೂರಿನ ಪ್ರವಾಹಕ್ಕೆ ಒಳಗಾದ ಪ್ರದೇಶದಲ್ಲಿ ಸಿಲುಕಿದ ಜನರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ. ಕೋಟಿ ಕೋಟಿ ಕಾರಿರುವ ಶ್ರೀಮಂತರು ಸಹ ಟ್ರ್ಯಾಕ್ಟರ್ ಏರಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ಕುಟುಂಬ ಮತ್ತು ಅವರ ಮನೆಯ ನಾಯಿಯನ್ನು ಕೂಡಾ ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗಿದ್ದು ಈ ವಿಡಿಯೋವನ್ನು ಗೌರವ್ ಮುಂಜಾಲ್ ಹಂಚಿಕೊಂಡಿದ್ದಾರೆ.‌

ಬೆಂಗಳೂರು ಪ್ರವಾಹ

ಬೆಂಗಳೂರು ಪ್ರವಾಹ

  • Share this:
ಧಾರಾಕಾರ ಮಳೆಯಿಂದಾಗಿ (Heavy Rain) ಬೆಂಗಳೂರು (Bengaluru) ನಗರದ ಹಲವು ಭಾಗಗಳಲ್ಲಿ ಅಕ್ಷರಶಃ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಿಲಿಕಾನ್ ಸಿಟಿಯ ಹಲವಾರು ರಸ್ತೆಗಳು, ಏರಿಯಾಗಳು ಜಲಾವೃತವಾಗಿದೆ. ಭಾರಿ ಮಳೆಯ ಆರ್ಭಟದಿಂದಾಗಿ ಬೆಳಂದೂರು, ಸರ್ಜಾಪುರ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹಕ್ಕೆ (Flood) ಒಳಗಾದ ಪ್ರದೇಶದಲ್ಲಿ ಸಿಲುಕಿದ ಜನರನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗುತ್ತಿದೆ. ಕೋಟಿ ಕೋಟಿ ಕಾರಿರುವ ಶ್ರೀಮಂತರು ಸಹ ಟ್ರ್ಯಾಕ್ಟರ್ (Tractor) ಏರಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ಕುಟುಂಬ ಮತ್ತು ಅವರ ಮನೆಯ ನಾಯಿಯನ್ನು ಕೂಡಾ ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗಿದ್ದು ಈ ವಿಡಿಯೋವನ್ನು ಗೌರವ್ ಮುಂಜಾಲ್ (Gaurav Munjal) ಹಂಚಿಕೊಂಡಿದ್ದಾರೆ.‌

ಕಚೇರಿ ತಲುಪಲು ಟ್ರ್ಯಾಕ್ಟರ್ ಏರಿದ ಐಟಿ ಉದ್ಯೋಗಿಗಳು
ಸೋಮವಾರ ಸುರಿದ ಭಾರಿ ಮಳೆಗೆ ಬೆಂಗಳೂರಿನ ಹಲವಾರು ಐಟಿ ಉದ್ಯೋಗಿಗಳು ಕೆಲಸಕ್ಕೆ ಟ್ರಾಕ್ಟರ್‌ ಮೂಲಕವೇ ಹೋಗಿದ್ದಾರೆ. "ನಾವು ನಮ್ಮ ಕಚೇರಿಗೆ ಹಲವಾರು ದಿನಗಳ ಕಾಲ ರಜೆಯನ್ನು ಹಾಕಲು ಸಾಧ್ಯವಿಲ್ಲ. ನಾವು ತುಂಬಾ ದಿನಗಳ ಕಾಲ ರಜೆ ಹಾಕುವುದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ನಾವು ನಮ್ಮನ್ನು ಆಫೀಸ್‌ಗೆ ಕರೆದೊಯ್ಯುವ ಟ್ರ್ಯಾಕ್ಟರ್‌ಗಳನ್ನು ಕಾಯುತ್ತಿದ್ದೇವೆ," ಎಂದು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ತಿಳಿಸಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಕುಟುಂಬವನ್ನು ಸ್ಥಳಾಂತರಿಸುವ ವಿಡಿಯೋ ಟ್ವೀಟ್ ಮಾಡಿದ ಅನಾಕಾಡೆಮಿ ಸಿಇಒ
ಈ ನಡುವೆ ಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ ತಮ್ಮ ಕುಟುಂಬವನ್ನು ಟ್ರ್ಯಾಕ್ಟರ್ ಮೂಲಕ ಸ್ಥಳಾಂತರ ಮಾಡುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಗೌರವ್ ಮುಂಜಾಲ್ ಅವರು ತಮ್ಮ ನಿವಾಸದ ಸುತ್ತಮುತ್ತ ನೀರು ತುಂಬಿರುವುದರಿಂದ, ಸುರಕ್ಷಿತ ಸ್ಥಳಕ್ಕೆ ತಲುಪಲು ಟ್ರ್ಯಾಕ್ಟರ್‌ ಮೊರೆ ಹೋಗಿದ್ದಾರೆ. ಅವರ ಕುಟುಂಬ ಮತ್ತು ಸಾಕುಪ್ರಾಣಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಹೆಚ್ಚಿನ ಕಾಳಜಿ ವಹಿಸಲು ಮತ್ತು ಯಾವುದೇ ಸಹಾಯದ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕ ಮಾಡುವಂತೆಯೂ ಗೌರವ್ ಮುಂಜಾಲ್‌ ತಿಳಿಸಿದ್ದಾರೆ.



ಇದನ್ನೂ ಓದಿ:   Bengaluru: ಬಿಲ್ಡರ್​ಗಳ ಸ್ವಾರ್ಥಕ್ಕೆ ಬಲಿಯಾಯ್ತಾ ಬೆಂಗಳೂರು? ಕಾಲ ಮಿಂಚಿಲ್ಲ, ಎಚ್ಚೆತ್ತುಕೊಂಡರೆ ಎಲ್ಲವೂ ಸರಿಯಾಗುತ್ತೆ!

ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಗೌರವ್ ಮುಂಜಾಲ್‌, "ಕುಟುಂಬ ಮತ್ತು ನನ್ನ ಸಾಕುಪ್ರಾಣಿ ಆಲ್ಬಸ್ ಅನ್ನು ಈಗ ನೀರಿನಿಂದ ಆವರಿಸಿರುವ ನಮ್ಮ ಏರಿಯಾದಿಂದ ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಸ್ಥಿತಿ ಕೆಟ್ಟದಾಗಿದೆ. ದಯವಿಟ್ಟು ಕಾಳಜಿ ವಹಿಸಿ. ನಿಮಗೆ ಯಾವುದೇ ಸಹಾಯ ಬೇಕಾದರೆ ನನಗೆ ತಿಳಿಸಿ, ನನ್ನ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ," ಎಂದು ತಿಳಿಸಿದ್ದಾರೆ ಟ್ವೀಟ್‌ ಮಾಡಿದ್ದಾರೆ.

ಗೌರವ್ ಮುಂಜಾಲ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರು “ಇದು ಕ್ರೇಜಿಯಾಗಿದೆ, ಟೇಕ್ ಕೇರ್ ಭಾಯ್" ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು "ಮುಂಜಾಲ್ ಸರ್ ನಿಮ್ಮ ಸ್ಥಿತಿಯೇ ಹೀಗಿದ್ದರೆ ಸಾಮಾನ್ಯ ಜನರಿ ಕಥೆ ಏನು ಏನಾಗುತ್ತದೆ, ದಯವಿಟ್ಟು ನಿಮ್ಮ ಮುಖ್ಯ ಕೇಂದ್ರ ಕಚೇರಿಯನ್ನು ಜೈಪುರಕ್ಕೆ ಸ್ಥಳಾಂತರಿಸಿ," ಎಂದಿದ್ದಾರೆ. ಮತ್ತೋರ್ವ ನೆಟ್ಟಿಗರು "ಸರ್ವಶಕ್ತ ಟ್ರಾಕ್ಟರ್‌ಗಳು ಬೆಂಗಳೂರಿನಂತಹ ಮಹಾನಗರವನ್ನು ಸ್ವಾಧೀನಪಡಿಸಿಕೊಂಡಿವೆ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು ಫುಲ್‌ ಟ್ರ್ಯಾಕ್ಟರ್‌ ಸದ್ದು
ಬೆಂಗಳೂರು ಜಲಾವೃತವಾಗಿರುವುದರಿಂದ ಹಲವು ಪ್ರದೇಶಗಳಲ್ಲಿ ದುಬಾರಿ ಕಾರುಗಳು ಸೇರಿ ಎಲ್ಲಾ ವಾಹನಗಳು ಮುಳುಗಡೆಯಾಗಿವೆ. ಹೀಗಾಗಿ ಸುರಕ್ಷಿತವಾಗಿ ಕಚೇರಿಗೆ, ಶಾಲಾ-ಕಾಲೇಜಿಗೆ ತಲುಪಲು ಟ್ರ್ಯಾಕ್ಟರ್‌ ಗಳ ಮೊರೆ ಹೋಗಲಾಗಿದೆ. "ರಸ್ತೆಗಳೆಲ್ಲವೂ ನೀರಿನಲ್ಲಿ ಮುಳುಗಿರುವುದರಿಂದ ನಾನು ಟ್ರ್ಯಾಕ್ಟರ್‌ನಲ್ಲಿ ಬಂದಿದ್ದೇನೆ, ನಮ್ಮ ವಾಹನಗಳು ಸಹ ನೀರಿನಲ್ಲಿ ಮುಳುಗಿವೆ. ನನಗೆ ಪರೀಕ್ಷೆ ಇರುವುದರಿಂದ, ನಾನು ಶಾಲೆಗೆ ಹೋಗಬೇಕಾಗಿದೆ" ಎಂದು ವಿದ್ಯಾರ್ಥಿನಿ ತಿಳಿಸಿದಳು.

ಇದನ್ನೂ ಓದಿ:   Karnataka Weather Report: ಕೊಂಚ ಇಳಿಕೆಯಾದ ವರುಣನ ಅಬ್ಬರ; ಎಲ್ಲಿ ನೋಡಿದ್ರೂ ಜಲರಾಶಿ

" ಬಿಟ್ಟು ಬಿಡದೇ ಮಳೆ ಬರುತ್ತಿರುವುದರಿಂದ ನೀರಿನ ಮಟ್ಟ ಇಳಿಯುತ್ತಿಲ್ಲ. ನಾನು ಕಚೇರಿಗೆ ಹೋಗಬೇಕು, ಮಕ್ಕಳಿಗೆ ಶಾಲೆಗಳಿವೆ. ಈ ಸಮಯದಲ್ಲಿ ಟ್ರ್ಯಾಕ್ಟರ್‌ ಅಗತ್ಯವಾಗಿದೆ" ಎಂದು ಉದ್ಯೋಗಿಗಳು ಹೇಳಿದ್ದಾರೆ.
Published by:Ashwini Prabhu
First published: