Bengaluru Lake: ಬೆಂಗಳೂರಿನಲ್ಲಿ ಒಂದೇ ಒಂದು ಕೆರೆ ನೀರು ಶುದ್ಧೀಕರಣ ಬಳಿಕ ಬಳಕೆಗೆ ಯೋಗ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನೂ ಈ ಪರೀಕ್ಷೆಯಲ್ಲಿ 851 ಮಾದರಿ ನೀರು ಡಿ ವರ್ಗದಲ್ಲಿ (ವನ್ಯಜೀವಿಗಳ ಪ್ರಸರಣ, ಮೀನುಗಾರಿಕೆ) ಬಂದಿವೆ. 279 ಇ (ನೀರಾವರಿ, ಕೈಗಾರಿಕಾ ಕೂಲಿಂಗ್, ನಿಯಂತ್ರಿತ ತ್ಯಾಜ್ಯ ವಿಲೇವಾರಿ)ಯಲ್ಲಿ ಬಂದಿವೆ.

  • Share this:

ಸರ್ಕಾರ ಹಲವು ಯೋಜನೆಗಳನ್ನು ತಂದರೂ ರಾಜಧಾನಿ ಬೆಂಗಳೂರಿನಲ್ಲಿಯ ಕೆರೆಗಳ (Bengaluru Lakes) ಪುನಶ್ಚೇತನ ಮಾತ್ರ ಸಾಧ್ಯವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕೆರೆಗಳ ವಿಸ್ತಾರ ಕಡಿಮೆ ಆಗುತ್ತಿದೆ. ಕೆಲ ಕರೆಗಳು ಇಲ್ಲಿ ಇದ್ದವು ಎಂಬುದರ ಕುರುಹು ಸಹ ಸಿಗುತ್ತಿಲ್ಲ.  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಏಪ್ರಿಲ್ 2021 ರಿಂದ ಮಾರ್ಚ್ 2022 ರವರೆಗೆ ಬೆಂಗಳೂರಿನಲ್ಲಿರುವ ಕೆರೆಗಳಲ್ಲಿನ ನೀರಿನ ಗುಣಮಟ್ಟದ (Lake Water Quality) ಪರೀಕ್ಷೆಯನ್ನು ಮಾಡಿದೆ. ಕೆರೆಗಳ ನೀರಿನ ಮಟ್ಟದ ಆಧಾರದ ಮೇಲೆ ವರ್ಗೀಕರಣ ಮಾಡಲಾಗಿದೆ. ಈ ಅಧ್ಯಯನದಲ್ಲಿ ಬೆಂಗಳೂರಿನ ಒಂದು ಕೆರೆಯ ನೀರು ಹೊರತುಪಡಿಸಿ, ಉಳಿದೆಲ್ಲ ಕೆರೆಗಳ ನೀರು ಮರು ಬಳಕೆಗೆ ಯೋಗ್ಯವಾಗಿಲ್ಲ. ಈ ಮಾರ್ಚ್ ನಲ್ಲಿ ನೀರಿನ ಗುಣಮಟ್ಟದ ಸುಧಾರಣೆಯಲ್ಲಿ ಅಲ್ಲಸಂದ್ರದ ಕೆರೆ (Allasandra Lake) ಮಾತ್ರ ಸಿ ಕೆಟಗರಿಯಲ್ಲಿ (ಸಾಂಪ್ರದಾಯಿಕ ಶುದ್ಧೀಕರಣದ ನಂತರ ಬಳಕೆಗೆ ಯೋಗ್ಯವಾದ ನೀರು) ಬಂದಿದೆ.  


ಇನ್ನೂ ಈ ಪರೀಕ್ಷೆಯಲ್ಲಿ 851 ಮಾದರಿ ನೀರು ಡಿ ವರ್ಗದಲ್ಲಿ (ವನ್ಯಜೀವಿಗಳ ಪ್ರಸರಣ, ಮೀನುಗಾರಿಕೆ) ಬಂದಿವೆ. 279 ಇ (ನೀರಾವರಿ, ಕೈಗಾರಿಕಾ ಕೂಲಿಂಗ್, ನಿಯಂತ್ರಿತ ತ್ಯಾಜ್ಯ ವಿಲೇವಾರಿ)ಯಲ್ಲಿ ಬಂದಿವೆ. ಇನ್ನು ಮೊದಲ ಎರಡು ವಿಭಾಗದಲ್ಲಿ ಬೆಂಗಳೂರಿನ ಯಾವ ಕೆರೆಗಳು ಬಂದಿಲ್ಲ. ( ಎ ವರ್ಗ: ಯಾವುದೇ ಸಂಸ್ಕರಣೆ ಇಲ್ಲದೇ ಕುಡಿಯಲು ಯೋಗ್ಯವಾದ ನೀರು, ಬಿ ವರ್ಗ: ಸ್ನಾನ ಮಾಡಲು ಯೋಗ್ಯವಾದ ನೀರು).


ಸಂಯೋಜಿತ ವಿಧಾನದ ಕೊರತೆ


ಕರೆಗಳ ಪುನರುಜ್ವೀವನಕ್ಕೆ ಸಂಬಂಧಿಸಿದ ಯೋಜನೆಗಳು ಯಶಸ್ವಿಯಾಗಿ ಜಾರಿ ಬಂದಿಲ್ಲ. ಬಜೆಟ್ ನಲ್ಲಿಯ ಯೋಜನೆಗಳು ಸಹ ಫಲಕಾರಿಯಾಗಿಲ್ಲ. ಈ ಕಾರಣಗಳಿಂದ ಕೆರೆಗಳ ನಿರ್ವಹಣೆ ಸರಿ ವಿಧಾನಗಳಿಂದ ನಡೆದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರದ ಇಂಧನ ಮತ್ತು ವೆಟ್ಲ್ಯಾಂಡ್ ಸಂಶೋಧನಾ ಗುಂಪಿನ ಸಂಯೋಜಕ ಟಿ.ವಿ.ರಾಮಚಂದ್ರ ಹೇಳುತ್ತಾರೆ.


ಸಂಸ್ಕರಣೆಗೆ ಒಳಪಡದ ನೀರು, ಕೈಗಾರಿಕಾ ತ್ಯಾಜ್ಯ ನೇರವಾಗಿ ಕೆರೆಗೆ ಸೇರುತ್ತಿದೆ. ಘನವಾದ ತ್ಯಾಜ್ಯ ಕೆರೆಯ ಆಳದಲ್ಲಿ ಶೇಖರಣೆಗೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕರೆಯ ನಿರ್ವಹಣೆಯಲ್ಲಿ ಸ್ಥಳೀಯ ನಿವಾಸಿಗಳು ಸ್ವಪ್ರೇರಣೆಯಿಂದ ಭಾಗಿಯಾಗುತ್ತಿದ್ದಾರೆ. ಆದ್ದರಿಂದ ಜಕ್ಕೂರು ಕೆರೆ ಜೀರ್ಣೋದ್ದಾರ ಆಗ್ತಿದೆ ಎಂದು ರಾಮಚಂದ್ರ ಹೇಳುತ್ತಾರೆ.


ಇದನ್ನೂ ಓದಿ:  Mandya Politics: ಸುಮಲತಾ ಮಾತ್ರವಲ್ಲ ಇವರೆಲ್ಲರನ್ನ ಸೆಳೆಯಲು ಕಮಲ ಕಸರತ್ತು; JDS ಭದ್ರಕೋಟೆ ಕೆಡವಲು ತಂತ್ರಗಾರಿಕೆ


ಮೂರು ವಿಭಾಗಗಳಾಗಿ 40 ಕೆರೆಗಳ ವಿಂಗಡನೆ


ಪ್ರೊ. ರಾಮಚಂದ್ರ ಅವರ ತಂಡ WQI ಅಡಿ 40 ಕೆರೆಗಳನ್ನು ಮೂರು ಭಾಗಗಳಲ್ಲಿ ಅಂದ್ರೆ ಕೋರಮಂಗಲ ಮತ್ತು ಚಲ್ಲಘಟ್ಟ, ವೃಷಭಾವತಿ ಹಾಗೂ ಹೆಬ್ಬಾಳ ವರ್ಗಿಕರಿಸಿತ್ತು. ಉತ್ತಮ ನೀರಿನ ಗುಣಮಟ್ಟ (10%); ಕಳಪೆ ನೀರಿನ ಗುಣಮಟ್ಟ (37%) ಮತ್ತು ಅತ್ಯಂತ ಕಳಪೆ ನೀರಿನ ಗುಣಮಟ್ಟ (53%) ಹಾಗೂ ಮರುಸ್ಥಾಪನೆಯಾದ ಬಹುತೇಕ ಕೆರೆಗಳು ಕಲುಷಿತಗೊಂಡಿವೆ. ಇದು ಅಸಮರ್ಪಕ ನಿರ್ಮಲೀಕರಣ ಮತ್ತು ಪುನಃಸ್ಥಾಪಿಸಲಾದ ಕೆರೆಗಳ ಕಳಪೆ ನಿರ್ವಹಣೆಯನ್ನು ಸೂಚಿಸುತ್ತದೆ.


ಆಹಾರ ಮತ್ತು ನೀರಿನ ಮೇಲೆ ಪರಿಣಾಮ


ಈ ನೈಮರ್ಲ್ಯದಿಂದಾಗಿ ಜಲಚರ ಜೀವಿಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಆಹಾರ ಸರಪಳಿ ಮೂಲಕ ಜೀವನಶೈಲಿಯ ಮೇಲೆ ಪರಿಣಾಮ ಬೀರಲಿದೆ. ಇದರ ಜೊತೆಗೆ ಘನತ್ಯಾಜ್ಯ ಕೆರೆಯ ಆಳದಲ್ಲಿ ಸಂಗ್ರಹ ಆಗುತ್ತಿರುವ ಪರಿಣಾಮ ಅಂತರ್ಜಲ ಸಹ ಕಲುಷಿತಗೊಳ್ಳುತ್ತಿದೆ. ಬೆಂಗಳೂರಿನ ಬಹುತೇಕ ಬೋರ್ ವೆಲ್ ಗಳಲ್ಲಿ ಲವಣಾಂಶಯುಕ್ತ (ನೈಟ್ರೇಟ್) ನೀರು ಸಿಗುತ್ತಿರೋದು ಇದೇ ಕಾರಣ.


ಬೆಂಗಳೂರಿನ ವರ್ತೂರು ಕೆರೆಯ ಪ್ರದೇಶಗಳಲ್ಲಿ ಬೆಳೆಯುವ ತರಕಾರಿ ಸೇವನೆ ಸಹ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರೊ ರಾಮಚಂದ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.


KSPCB ಪಾತ್ರ ಏನು? ಸಾರ್ವಜನಿಕರಿಂದ ಪ್ರಶ್ನೆ


ಕೆಎಸ್‌ಪಿಸಿಬಿ ಪಾತ್ರದ ಬಗ್ಗೆ ನಾಗರಿಕರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಫ್ರೆಂಡ್ಸ್ ಆಫ್ ಲೇಕ್ಸ್‌ನ ವಿ.ರಾಮಪ್ರಸಾದ್, ಮಂಡಳಿಯ ಜವಾಬ್ದಾರಿಯು ನೀರಿನ ಗುಣಮಟ್ಟವನ್ನು ಸೂಚಿಸುವುದು ಅಥವಾ ಪ್ರಕಟಿಸುವುದು ಮಾತ್ರವಲ್ಲ, ಪ್ರಾಥಮಿಕವಾಗಿ ಕಳಪೆ ಗುಣಮಟ್ಟದ ನೀರಿನ ಪರಿಣಾಮವಾಗಿ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳುತ್ತಿದ್ದಾರೆ.


ಕೆರೆಗೆ ಸೇರುವ ಮಾಲಿನ್ಯಕಾರರನ್ನು ಗುರುತಿಸುವುದು ಮತ್ತು ಕಾನೂನುಬದ್ಧವಾಗಿ ಕಾನೂನು ಕ್ರಮ ಜರುಗಿಸುವುದು KSPCB ಯ ಪ್ರಾಥಮಿಕ ಮೂಲಭೂತ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ನೀರಿನ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಗೊಂಡ ವರದಿಗಳನ್ನು ಸಹ ಪ್ರಕಟಿಸಬೇಕು ಎಂದು ವಿ.ರಾಮಪ್ರಸಾದ್ ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Summer Camp: ಕಾಡಿನಲ್ಲೊಂದು ವಿಶೇಷ ಬೇಸಿಗೆ ಶಿಬಿರ; ಕೋಟೆ-ಬೆಟ್ಟ ಏರಿ, ಕಾಡು ಹಣ್ಣು ತಿಂದು ಪುಟಾಣಿಗಳ ಸಂಭ್ರಮ


ನದಿ ನೀರಿನ ಗುಣಮಟ್ಟ ಸಹ ಇಳಿಕೆ


ರಾಜ್ಯದಲ್ಲಿನ ನದಿಗಳಿಂದ ವಿವಿಧ ಭಾಗಗಳಿಂದ ನೀರಿನ ಗುಣಮಟ್ಟದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಬಹುತೇಕ ಸ್ಯಾಂಪಲ್ ಸಿ ವರ್ಗದಲ್ಲಿ ಬಿದ್ದಿವೆ. 753 ಮಾದರಿಗಳು ಸಿ ವರ್ಗದಲ್ಲಿದ್ದರೆ, 190 ಬಿ ವರ್ಗದಲ್ಲಿ ಸೇರಿವೆ. ಯಾವುದೂ ಎ ಅಡಿಯಲ್ಲಿ ಬರಲಿಲ್ಲ, ಮತ್ತು 128 ಮತ್ತು 18 ಕ್ರಮವಾಗಿ ಡಿ ಮತ್ತು ಇ ಅಡಿಯಲ್ಲಿವೆ.

top videos
    First published: