Bengaluru: ಬೆಂಗಳೂರು ರೈಲ್ವೇ ನಿಲ್ದಾಣಗಳು ಲಕಲಕ! ಇದರ ಅಂದ ಹೆಚ್ಚಿಸಲಿದೆ ಗಿಡಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ಹೇಳಿಕೇಳಿ ಎಲ್ಲರನ್ನೂ ಕೈಬೀಸಿ ಕರೆಯೋನಗರ. ಯಾವ ದೇಶ, ರಾಜ್ಯದಿಂದ ಬಂದರೂ ಬೆಂಗಳೂರಿಗೆ ಆರಾಮಾಗಿ ಹೊಂದಿಕೊಳ್ತಾರೆ. ಹೀಗಿರೋವಾಗ ಬೆಂಗಳೂರಿನಿಂದ ಸಂಚಾರ ಸಂಪರ್ಕ ಪಡೆಯೋ ರೈಲ್ವೇ ನಿಲ್ದಾಣಕ್ಕೆ ಹೊಸ ಮೆರುಗು ಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

  • Share this:

ಭಾರತದ (India) ಪ್ರಮುಖ ಸಂಚಾರ ಜೀವನಾಡಿ ಎಂದರೆ ರೈಲುಗಳು. (Train) ಅಗ್ಗದ ಪ್ರಯಾಣ ದರ, ಸಂಚಾರ (Travel) ಸಮಯದ ಅನುಕೂಲತೆ, ನಿರಾಯಾಸ, ಆರೋಗ್ಯದ ಹಿತದೃಷ್ಟಿ ಹೀಗೆ ಹಲವು ವಿಚಾರಗಳಲ್ಲಿ ಸಾಮಾನ್ಯಜನರು ಸಂಚಾರಕ್ಕೆ ರೈಲನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕಳೆದ ಐದಾರು ವರ್ಷಗಳ ಬಳಿಕ ರೈಲ್ವೇ ನಿಲ್ದಾಣ (Train Station), ರೈಲು ವ್ಯವಸ್ಥೆ ಕಂಡು ಕೇಳರಿಯದಷ್ಟು ಬದಲಾಗಿದೆ. ಕೆಲವೆಡೆ ರೈಲು ನಿಲ್ದಾಣವೋ ವಿಮಾನ ನಿಲ್ದಾಣವೋ (Airport) ಅಂತಾ ಯೋಚಿಸುವಷ್ಟು ಚೇಂಜ್ ಆಗಿದೆ. ಅದರಂತೆ ಬೆಂಗಳೂರು (Bengaluru) ರೈಲ್ವೇ ನಿಲ್ದಾಣವೂ ಸ್ವಚ್ಛವಾಗಿದ್ದು ಈಗ ಮತ್ತಷ್ಟು ಲಕಲಕಗೊಳ್ಳಲಿದೆ. ಯಸ್, ಬೆಂಗಳೂರು ರೈಲು ನಿಲ್ದಾಣಕ್ಕೆ ಇನ್ನಷ್ಟು ಹೊಸ ಟಚ್ ಕೊಡೋಕೆ ರೈಲ್ವೆ ಇಲಾಖೆ ಮುಂದಾಗಿದೆ.


ಬೆಂಗಳೂರು ಹೇಳಿಕೇಳಿ ಎಲ್ಲರನ್ನೂ ಕೈಬೀಸಿ ಕರೆಯೋನಗರ. ಯಾವ ದೇಶ, ರಾಜ್ಯದಿಂದ ಬಂದರೂ ಬೆಂಗಳೂರಿಗೆ ಆರಾಮಾಗಿ ಹೊಂದಿಕೊಳ್ತಾರೆ. ಹೀಗಿರೋವಾಗ ಬೆಂಗಳೂರಿನಿಂದ ಸಂಚಾರ ಸಂಪರ್ಕ ಪಡೆಯೋ ರೈಲ್ವೇ ನಿಲ್ದಾಣಕ್ಕೆ ಹೊಸ ಮೆರುಗು ಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.


ರೈಲು ನಿಲ್ದಾಣಕ್ಕೆ ಗಿಡಗಳ ಮೆರುಗು


ರೈಲ್ವೆ ಇಲಾಖೆಯಿಂದ ಪರಿಸರ ಸ್ನೇಹಿ ಯೋಜನೆ ಜಾರಿ ಮಾಡಲಾಗ್ತಿದೆ. ಅದರಂತೆ ರೈಲ್ವೆ ಇಲಾಖೆ ಬೆಂಗಳೂರಿನ ರೈಲು ನಿಲ್ದಾಣಗಳ ಅಂದ ಹೆಚ್ಚಿಸಲು ಮುಂದಾಗಿದೆ. ರೈಲು ಹಳಿಗಳ ಪಕ್ಕ ಅಲಂಕಾರಿಕ, ಔಷಧೀಯ ಸಸಿ ನೆಡಲು ತಯಾರಿ ನಡೆಯುತ್ತಿದೆ. ಬೆಂಗಳೂರಿನ 6 ನಿಲ್ದಾಣಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆೆ.


A new look for Bangalore train station planting near tracks
ಬೆಂಗಳೂರು ರೈಲು ನಿಲ್ದಾಣಕ್ಕೆ ಹೊಸ ಲುಕ್


ಇದನ್ನೂ ಓದಿ: ಅಭಿಮನ್ಯು ಸಾರಥ್ಯದಲ್ಲೇ ಅಂಬಾರಿ ಮೆರವಣಿಗೆ, ದಸರಾ ಗಜಪಡೆಗಳ ಪಟ್ಟಿ ಬಿಡುಗಡೆ


ಯಾವ್ಯಾವ ರೈಲ್ವೇ ನಿಲ್ದಾಣಕ್ಕೆ ಹೊಸ ಟಚ್


ಬೈಯ್ಯಪ್ಪನಹಳ್ಳಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ 9100 ಚ.ಮೀ.


ಯಲಹಂಕದಲ್ಲಿ 1,195 ಚ.ಮೀ.


ಹೆಬ್ಬಾಳದಲ್ಲಿ 4,100 ಚ.ಮೀ


ಚನ್ನಸಂದ್ರ 1,500 ಚ.ಮೀ


ಯಶವ೦ತಪುರ 7,505 ಚ.ಮೀ


ಕೆಎಸ್‌ಆರ್ ಬೆಂಗಳೂರು 550 ಚ.ಮೀ.


ಇದನ್ನೂ ಓದಿ: ಅಕ್ಕಿ ಮೇಲಿನ ಜಿಎಸ್​ಟಿ ಉಳಿಸಲು ತಮಿಳುನಾಡಿನಲ್ಲಿ ಹೊಸ ಉಪಾಯ!


ಕಸಕ್ಕೆ ಕಡಿವಾಣ-ಗಿಡ ನೆಡೋಣ


ಮೊದಲ ಹಂತದಲ್ಲಿ ಬೆಂಗಳೂರಿನ ಒಟ್ಟು 6 ರೈಲು ನಿಲ್ದಾಣದ ಸೌಂದರ್ಯ ಹೆಚ್ಚಿಸಲು ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಹಳಿಗಳ ಉದ್ದಕ್ಕೂ ಮತ್ತು ನಿಲ್ದಾಣದ ಖಾಲಿ ಜಾಗದಲ್ಲಿ ಸಸ್ಯಗಳು, ಹೂವಿನ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ. ಹಳಿಗಳ ಪಕ್ಕದ ಖಾಲಿ ಜಾಗದಲ್ಲಿ ಪ್ರಯಾಣಿಕರು ಕಸ ಹಾಕುವುದನ್ನು ನಿಯಂತ್ರಿಸಲು ಈ ಪ್ಲಾನ್ ಮಾಡಲಾಗಿದೆ.


ರೈಲು ನಿಲ್ದಾಣದಲ್ಲಿ ಔಷಧೀಯ ಸಸ್ಯ!


ರೈಲು ನಿಲ್ದಾಣದಲ್ಲಿ ಗಿಡಗಳ ಜೊತೆ ಔಷಧೀಯ ಸಸ್ಯಗಳನ್ನು ಕೂಡ ನೆಡಲಾಗುತ್ತದೆ. ಇದು ರೈಲು ಪ್ರಯಾಣಿಕರಿಗೆ ಆರೋಗ್ಯ ಮತ್ತು ಉತ್ತಮ ಗಾಳಿಗೂ ಸಹಾಯಕಾರಿಯಾಗಲಿದೆ. ರೈಲ್ವೇ ಇಲಾಖೆಯ ಈ ಪರಿಸರ ಸ್ನೇಹಿ ಯೋಜನೆಯಲ್ಲಿ ಭಾಗಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಇದೆ.


ತಿಂಗಳ ಹಿಂದೆ ಬೈಯ್ಯಪ್ಪನಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನ್ನು ಲೋಕಾರ್ಪಣೆಗೊಳಿಸಲಾಗಿತ್ತು. ವಿಮಾನ‌‌ ನಿಲ್ದಾಣ ಮಾದರಿಯಲ್ಲಿ ಕಾಣುತ್ತಿರುವ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ನಿಲ್ದಾಣ ಇದಾಗಿದೆ. ಇದು ಎಸಿ, ಫ್ಲಾಟ್‌ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್‌ ಬೇ, ವಿಶಾಲವಾದ ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.


ಸ್ವಚ್ಛ ಭಾರತ-ಸ್ವಚ್ಛ ರೈಲು ನಿಲ್ದಾಣ


ಸ್ವಚ್ಛ ಭಾರತ ಅನ್ನೋದು ಪ್ರಧಾನಿ ಮೋದಿಯವರ ಪರಿಕಲ್ಪನೆ. ತಾವೇ ಕಸಗುಡಿಸಿ ಸ್ವಚ್ಛತೆಯ ಸಂದೇಶ ಸಾರಿದ್ದರು. ಅದರಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸ್ವಚ್ಛತೆಗೆ ಕರೆ ನೀಡಿದ್ದರು. ಸಣ್ಣ ಪುಟ್ಟ ಸ್ವಚ್ಛ ಕೆಲಸಗಳೇ ಉತ್ತಮ ಪರಿಸರ ನಿರ್ಮಿಸುತ್ತೆ ಎಂದಿದ್ದರು. ಅದರಂತೆ ಈಗ ಕೇಂದ್ರ ರೈಲ್ವೇ ಇಲಾಖೆ ಕೂಡ ರೈಲು ನಿಲ್ದಾಣಗಳಲ್ಲೂ ಅಳವಡಿಸಿಕೊಂಡು ಮಾದರಿಯಾಗ್ತಿದೆ. ಬೆಂಗಳೂರಲ್ಲಿ ಜಾರಿಯಾಗ್ತಿರೋದ ಸಂತಸದ ವಿಚಾರ.

Published by:Thara Kemmara
First published: