ಬೆಂಗಳೂರು: ಬಡವರಿಗೆ ಆಸ್ಪತ್ರೆಯ (Hospital) ಓಡಾಟ ಎಂದರೆ ದೊಡ್ಡ ತಲೆನೋವು. ಅದರಲ್ಲೂ ಆರೋಗ್ಯ ಸಮಸ್ಯೆ (Health Problem) ಸ್ವಲ್ಪ ಗಂಭೀರವಾಗಿದ್ದರೆ ಬಿಲ್ ಖರ್ಚು (bill) ಸಹ ಸಮಸ್ಯೆ ಆಗುತ್ತದೆ. ಕೆಲವೊಂದು ಕಡೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ, ಜೊತೆಗೆ ಇನ್ನೂ ಕೆಲವೆಡೆ ಕಡಿಮೆ ಬೆಲೆಯಲ್ಲಿ (Price) ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ. ಸದ್ಯ ಬೆಂಗಳೂರಿನಲ್ಲಿ ಸಹ ಹೊಸ ಐಸಿಯು (ICU) ಉದ್ಘಾಟನೆ ಆಗಿದ್ದು, ಎಲ್ಲಿ, ಏನೆಲ್ಲಾ ಸೌಲಭ್ಯ ಇದೆ ಎಂಬುದು ಇಲ್ಲಿದೆ.
42 ಹಾಸಿಗೆ ಸೌಲಭ್ಯವುಳ್ಳ ಐಸಿಯು ಉದ್ಘಾಟನೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನೂತನವಾಗಿ 43 ಹಾಸಿಗೆಗಳ ವೈದ್ಯಕೀಯ ಐಸಿಯು ನಿರ್ಮಾಣ ಮಾಡಲಾಗಿದ್ದು, ಮೊನ್ನೆ ಬುಧವಾರ ಈ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಇನ್ನು ಇದರಲ್ಲಿ ಸಲ ಬಡವರಿಗೆ ಎಂದು ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಈ ಐಸಿಯುವಿನಲ್ಲಿ ಕಡು ಬಡವರಿಗಾಗಿ 32 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಉಳಿದ ಹತ್ತು ಐಸಿಯು ವಿಐಪಿಗಳಾಗಿ ಮೀಸಲಿಡಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಇದರಿಂದ ಚಿಕಿತ್ಸೆಗೆ ಪರದಾಡುವ ಅನೇಕ ಜನರಿಗೆ ಸಹಾಯವಾಗುತ್ತದೆ, ಅತಿಯಾದ ಖರ್ಚಿಲ್ಲದೇ ಬಡವರೂ ಸಹ ಆರೋಗ್ಯದ ಬಗ್ಗೆ ಕಾಳಜಿ ಮಾಡಬಹುದು.
ಇನ್ನು ಈ ನೂತನ ಐಸಿಯು ಸಿಫಾನಿ ಮತ್ತು ಡಾಗಾ ಕಟ್ಟಡದಲ್ಲಿ ನಿರ್ಮಿಸಲಾಗಿದ್ದು, ದಿವಂಗತ ಎಚ್.ರಾಮಯ್ಯರೆಡ್ಡಿ ಕುಟುಂಬಸ್ಥರಾದ ಜಯಮ್ಮ ಹಾಗೂ ಮಕ್ಕಳು ಇದಕ್ಕೆ ಧನ ಸಹಾಯ ಮಾಡಿದ್ದಾರೆ. ರೈತ ಕುಟುಂಬದಿಂದ ಬಂದಂತಹ ಲೇಟ್ ಎಚ್.ರಾಮಯ್ಯ ಅವರ ಜ್ಞಾಪಕಾರ್ಥವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನೂತನ ಐಸಿಯು ನಿರ್ಮಿಸಲಾಗಿದೆ.
ಇತರ ಸರ್ಕಾರಿ ಆಸ್ಪತ್ರೆಗೆ ಮಾದರಿ ಇದು
ವಿಶ್ವದರ್ಜೆಯಲ್ಲಿ ಮಟ್ಟದಲ್ಲಿ ನಿರ್ಮಿಸಲಾಗಿರುವ ಐಸಿಯು ಘಟಕವನ್ನು ಆಧುನಿಕ ತಂತ್ರಜ್ಞಾನಗಳಿಂದ ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ಮೆಡಿಕಲ್ ಐಸಿಯು ಘಟಕ ನಿಜಕ್ಕೂ ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ. ಐಸಿಯುಗೆ ಸಂಬಂಧಿಸಿದಂತೆ ಎಲ್ಲಾ ಸೌಲಭ್ಯಗಳು ಇಲ್ಲಿ ಸಿಗಲಿದ್ದು, ದಾನಿಗಳ ಸಹಾಯದಿಂದ ಅಭಿವೃದ್ಧಿಗೊಂಡಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆಧುನಿಕ ತಂತ್ರಜ್ಞಾನಗಳ ಮೂಲಕ ವಿಶ್ವ ಪ್ರಖ್ಯಾತಿ ಪಡೆದಿರುವ ಸರ್ಕಾರಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ವೈ-ಫೈ, ಚಾರ್ಜರ್, ಕುರುಕಲು ತಿಂಡಿ - ಈ ಬಸ್ ಸ್ಟ್ಯಾಂಡ್ನಲ್ಲಿ ಇನ್ನೂ ಏನೇನೋ ಇದೆ, ನೀವೂ ನೋಡಿ!
ಇನ್ನು ಈ ಐಸಿಯು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಲೋಕೇಶ್, ನಿಕಟಪೂರ್ವ ನಿರ್ದೇಶಕ ಡಾ.ಸಿ.ರಾಮಚಂದ್ರ, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಉದ್ಯಮಿ ಎಚ್.ಆರ್.ರಾಜಶೇಖರ್, ವೈದ್ಯಕೀಯ ಅಧೀಕ್ಷಕ ಡಾ.ವಿ.ಬಿ.ಗೌಡ, ನಿವಾಸಿ ವೈದ್ಯಾಧಿಕಾರಿ ಪ್ರಭಾ ಶೇಷಾಚಾರ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ