• Home
  • »
  • News
  • »
  • bengaluru-urban
  • »
  • 40 ಪರ್ಸೆಂಟ್ ಕಮಿಷನ್ ಆರೋಪ, ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿ: B.K.Hariprasad ಆಗ್ರಹ

40 ಪರ್ಸೆಂಟ್ ಕಮಿಷನ್ ಆರೋಪ, ಸಚಿವ ಈಶ್ವರಪ್ಪ ರಾಜೀನಾಮೆ ನೀಡಲಿ: B.K.Hariprasad ಆಗ್ರಹ

 ಬಿ.ಕೆ ಹರಿಪ್ರಸಾದ್

ಬಿ.ಕೆ ಹರಿಪ್ರಸಾದ್

ರಾಜ್ಯದಲ್ಲಿ ಪ್ರತಿ ಕಾಮಗಾರಿಗೆ ಸಚಿವರಿಗೆ, ಶಾಸಕರಿಗೆ 40% ಕಮಿಷನ್ ನೀಡಬೇಕೆಂದು ಈಗಾಗಲೇ ಗುತ್ತಿಗೇದಾರರ ಸಂಘ ಗಂಭೀರವಾಗಿ ಆರೋಪಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

  • Share this:

ಬೆಂಗಳೂರು: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (Minister KS Eshwarappa) ವಿರುದ್ಧ ಸ್ವಪಕ್ಷ ಹಾಗೂ ಹಿಂದು ವಾಹಿನಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೆ ಪಾಟೀಲ್ (Santhosh K Patil) ಎಂಬುವವರು "ಸಚಿವರಿಗೆ ಕಾಮಗಾರಿ ಬಿಲ್ ಬಾಕಿ ಬಿಡುಗಡೆಗೆ ಕಮಿಷನ್ (Commission) ನೀಡಬೇಕೆಂದು ಕೇಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪತ್ರ ಬರೆದಿದ್ದಾರೆ. ಆದ್ದರಿಂದ ಈ ಕೂಡಲೇ ಸಚಿವ ಈಶ್ವರಪ್ಪನವರು ರಾಜೀನಾಮೆ ನೀಡಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್  (Leader of Opposition Karnataka Legislative Council BK Hariprasad) ಒತ್ತಾಯಿದ್ದಾರೆ.


ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ಕಾಮಗಾರಿಗೆ ಸಚಿವರಿಗೆ, ಶಾಸಕರಿಗೆ 40% ಕಮಿಷನ್ ನೀಡಬೇಕೆಂದು ಈಗಾಗಲೇ ಗುತ್ತಿಗೇದಾರರ ಸಂಘ ಗಂಭೀರವಾಗಿ ಆರೋಪಿಸಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈಗ ಸ್ವತಃ ಬಿಜೆಪಿ ಕಾರ್ಯಕರ್ತರು, ಹಿಂದೂ ವಾಹಿನಿ ಪ್ರಧಾನ ಕಾರ್ಯದರ್ಶಿಗಳೇ ಸರ್ಕಾರ ಹಾಗೂ ಸಚಿವರ ವಿರುದ್ಧ ಪತ್ರ ಬರೆದಿರುವುದು ವಾಸ್ತವ ತೆರೆದಿಟ್ಟಂತಾಗಿದೆ.


ಸರ್ಕಾರದ ಕಮಿಷನ್ ದಂಧೆ ಹೆಚ್ಚಾಗ್ತಿದೆ


ಪ್ರಧಾನಿ ಮೋದಿ ಅವರು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನ 10% ಸರ್ಕಾರ ಎಂದು ಆರೋಪಿಸಿದ್ದರು. ಈಗ ಅವರದ್ದೇ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಪತ್ರ ಬರೆಯಲಾಗಿದೆ ಇದರ ಬಗ್ಗೆ ಮೌನವಾಹಿಸಿದ್ದಾರೆ. ಸರ್ಕಾರದ ವಿರುದ್ಧ ಕಮಿಷನ್ ಆರೋಪಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.


ಇದನ್ನೂ ಓದಿ:  ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು Flyover: ಇಲ್ಲಿಂದ ಇಲ್ಲಿಯವರೆಗೆ ಟ್ರಾಫಿಕ್ ಕಿರಿಕಿರಿ ಇರಲ್ಲ


ಮಂತ್ರಿ ಮಂಡಲದಲ್ಲಿ ಇರೋದು ಬೇಡ


ಸದನದಲ್ಲಿ ಕಮಿಷನ್ ದಂಧೆ ಬಗ್ಗೆ ಮಾತಾಡಲು ಅವಕಾಶವೇ ಮಾಡಿಕೊಡುತ್ತಿಲ್ಲ. ಸರ್ಕಾರ ಗಂಭೀರವಾಗಿಯೇ ಪರಿಗಣಿಸುತ್ತಿಲ್ಲ. ಈಶ್ವರಪ್ಪ ವಿರುದ್ಧ ಸ್ವಪಕ್ಷದವರಿಂದಲೇ ಆರೋಪ ಕೇಳಿ ಬಂದಿರುವುದರಿಂದ ಮಂತ್ರಿಮಂಡಲದಲ್ಲಿ ಮುಂದುವರೆಯಲು ಅರ್ಹರಲ್ಲ.


ರಾಜೀನಾಮೆ ನೀಡಿ ಆರೋಪ ಮುಕ್ತರಾಗುವವರೆಗೂ ಮಂತ್ರಿ ಮಂಡಲದಲ್ಲಿ ಇರಬಾರದು ಎಂದು ಒತ್ತಾಯಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ತಿಳಿಸಿದ್ರು.


ಇದು 40% ಪರ್ಷೆಂಟ್ ಸರ್ಕಾರ


ಬಿ.ಕೆ.ಹರಿಪ್ರಸಾದ್ ಅವರ ಬಳಿಕ ಮಾಧ್ಯಮಗಳ ಜೊತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Former Minister Priyank Kharge) ಮಾತನಾಡಿದರು. ಈಶ್ವರಪ್ಪ ಈ ಹಿಂದೆ ಗರ್ವನರ್ ಗೆ ಲೆಟರ್ ಬರೆದಿದ್ದರು.  ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಆಗ್ತಿದೆ. ಸಿಎಂ ಹಾಗೂ ಅವರ ಕುಟುಂಬ ನಮಗೆ ಗೊತ್ತಿಲ್ಲದೇ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಈಶ್ವರಪ್ಪ ದೂರು ನೀಡಿದ್ದರು. ಈಗ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇದು 40% ಪರ್ಷೆಂಟ್ ಸರ್ಕಾರ ಆಗಿದೆ  ಎಂದು ಹೇಳಿದರು.


ಕರ್ನಾಟಕದಲ್ಲಿ ಮೇ ಬಿ ಕಾವುಂಗಾ ತುಮ್ ಕೋ ಬಿ ಕಿಲೋವೋಂಗಾ ನಡೆಯುತ್ತಿದೆ. ಇದನ್ನು ತನಿಖೆ ಆಗಬೇಕು ಅಂತ ಹೇಳಿದ್ರು ಇನ್ನೂವರೆಗೂ ಇದರ ಬಗ್ಗೆ ಚರ್ಚೆ ಮಾಡ್ತಿಲ್ಲ. ಸ್ಪೀಕರ್ ಕೂಡ ಸಾರ್ವಜನಿಕ ಉಪಯೋಗುವ ಚರ್ಚೆ ಅಲ್ಲ ಅಂತ ಅರ್ಜೆಂನ್ ಮೆಂಟ್ ತಿರಸ್ಕಾರ ಮಾಡಿದ್ದಾರೆ


ಇದನ್ನೂ ಓದಿ:  Siddaramaiah ಅನ್ನೋದು ಶಕ್ತಿ, BJPಯಿಂದ ನೈತಿಕವಾಗಿ ಕುಗ್ಗಿಸುವ ಪ್ರಯತ್ನ ಆಗ್ತಿದೆ: Congress ನಾಯಕರ ಸುದ್ದಿಗೋಷ್ಠಿ


40% ಸರ್ಕಾರ ಏನು ಆಗ್ತಿಲ್ಲ ಅಂತ ಹೇಳಿದ್ರು , ಇವರು ಚರ್ಚೆಗೆ ಹೆದರುತ್ತಾರೆ.  ಸರ್ಕಾರ ಇದಕ್ಕೆ ಪ್ರೂಪ್ ಕೇಳ್ತಿದೆ. ಆದ್ರೆ ಈ ಆರೋಪಗಳನ್ನು ಮಾಡಿರೋದು ಗುತ್ತಿಗೆದಾರರು. ಬರೀ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅಷ್ಟೇ ಅಲ್ಲ ಇಡೀ ಸರ್ಕಾರವೇ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.

Published by:Mahmadrafik K
First published: