ರಾಮನಗರ: ರಾತ್ರಿ ಮಲಗಿದ್ರೆ ನಿದ್ರೆ ಬರಲ್ಲ, ಬೆಳಗ್ಗೆ ಆಗುವಷ್ಟರಲ್ಲಿ ಏನಾಗುತ್ತೋ ಏನೋ ಎಂಬ ಗಾಬರಿ, ತಳಮಳ. ಮನೆ ಹೊರಗೆ ಕೊಂಚ ಸದ್ದಾದ್ರೂ ಕಾಡಾನೆಗಳ (Wild Elephants Problem) ದಾಳಿ ಮುಂದುವರೆದಿದೆ. ಇದಕ್ಕೆಲ್ಲ ಕಾರಣ ಕಾಡಾನೆ!
ಕಾಡಾನೆ ಕಾಟಕ್ಕೆ ರಾಮನಗರ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಬೆಳೆ ಕಣ್ಣೆದುರೇ ನಾಶವಾಗ್ತಿದ್ರೂ ಏನೂ ಮಾಡದ ಸ್ಥಿತಿ ತಲುಪಿದ್ದಾರೆ ಇಲ್ಲಿನ ಅನ್ನದಾತರು! ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಪಾಳ್ಯ ಗ್ರಾಮದಲ್ಲಿ ಗೋಪಿನಾಥ್ ಎಂಬುವರ ಬಾಳೆತೋಟಕ್ಕೆ ರಾತ್ರೋ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿದೆ. ಸರಿಸುಮಾರು 80 ಕ್ಕೂ ಹೆಚ್ಚು ಬಾಳೆಗಡ್ಡೆಗಳನ್ನ ತುಳಿದು ನಾಶ ಮಾಡಿದೆ. ಇದರಿಂದಾಗಿ ಸಾವಿರಾರು ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ: Water Otters Video: ಅರ್ಕಾವತಿ ನದಿಯಲ್ಲಿ ಅಪರೂಪದ ಪ್ರಾಣಿಗಳು! ಛಂಗ್ ಅಂತ ಅತ್ತಿತ್ತ ಜಿಗಿದ ನೀರುನಾಯಿಗಳು
ಬಾಳೆತೋಟದ ಮೇಲೆ ದಾಳಿ ಮಾಡಿದ 2 ಕಾಡಾನೆಗಳ ಹಿಂಡು!
ತಡರಾತ್ರಿ ಕಾಂಪೌಂಡ್ ಮುರಿದು ಒಳನುಗ್ಗಿರುವ 2 ಕಾಡಾನೆಗಳ ಹಿಂಡು 200 ಬಾಳೆಗಡ್ಡೆಗಳ ಪೈಕಿ 8ಕ್ಕೂ ಹೆಚ್ಚು ಬಾಳೆಗಡ್ಡೆಗಳನ್ನ ಮುರಿದು ನಾಶಪಡಿಸಿವೆ. ‘ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಮನಹರಿಸಿ ಪರಿಹಾರ ನೀಡಬೇಕೆಂದು ಕೃಷಿಕ ಗೋಪಿನಾಥ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Ramanagara: ಬಾಡೂಟದ ಶಿವರಾತ್ರಿ! ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು ನೈವೇದ್ಯ ಮಾಡಿ ಸವಿದ ಭಕ್ತರು!
ಪಂಪ್ಸೆಟ್ಗೂ ಹಾನಿ
ಕಾಡಾನೆ ಹಿಂಡು ಬಾಳೆ ತೋಟದ ಜೊತೆಗೆ ಪಂಪ್ ಸೆಟ್ಗೆ ಅಳವಡಿಸಿದ್ದ ಎಲೆಕ್ಟ್ರಿಕ್ ವಸ್ತುಗಳನ್ನು ಸಹ ನಾಶಪಡಿಸಿವೆ. ಹಾಗಾಗಿ ಈ ಭಾಗದಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದ್ದು ಸರ್ಕಾರ ಗಮನಹರಿಸಬೇಕೆಂಬ ಕೂಗು ಕೇಳಿಬಂದಿದೆ.
ವರದಿ: ಎ.ಟಿ.ವೆಂಕಟೇಶ್ ಪ್ರಭು, ನ್ಯೂಸ್ 18, ರಾಮನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ