ಬೆಂಗಳೂರು ಗ್ರಾಮಾಂತರ: ನೀರು ಕುಡಿಯುತ್ತಿರೋ ಮರಿಯಾನೆ, (Elephant) ಹಸಿರು ಸೊಪ್ಪು ತಿನ್ನುತ್ತಿರೋ ಆನೆಮರಿ, ಈ ಮುದ್ಮುದ್ದು ಮರಿಯನ್ನು (Oscar Award Elephant) ಕಂಡು ಯಾರಿಗೆ ಆದ್ರೂ ತೋಳ್ತುಂಬಾ ಅಪ್ಪಿಕೊಳ್ಬೇಕು ಅಂತನಿಸೋದು ಪಕ್ಕಾ! ಆದ್ರೆ ಆಸ್ಕರ್ ಗೆದ್ದ ಈ ಆನೆ ಮರಿ (The Elephant Whisperer) ದಂಪತಿಯ ಮಡಿಲು ಸೇರಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಆ ಭಾವುಕ ಕಥೆ!
ಸರಿಸುಮಾರು 6 ವರ್ಷಗಳ ಹಿಂದೆ ಹೋಗೋಣ.. ಹೊಸೂರು ಸಮೀಪದ ತೊಳ್ವಪೇಟಾ ಎಂಬ ಗ್ರಾಮದ ಬಳಿ ರಾತ್ರಿ ವೇಳೆ ವಿದ್ಯುತ್ ಸ್ಪರ್ಶಿಸಿ ಹೆಣ್ಣಾನೆ ಸಾವನ್ನಪ್ಪಿತ್ತು. ಉಳಿದ ಕಾಡಾನೆಗಳು ಕಾಡಿನತ್ತ ಮರಳಿದ್ದವು. ಮರಿ ಆನೆ ತಾಯಿ ಬಳಿ ರೋಧಿಸುತ್ತಿತ್ತು. ಅಂದು ಅನಾಥವಾಗಿದ್ದ ಆನೆ ಮರಿ ಕಥೆ ಇಂದು ಆಸ್ಕರ್ ಪ್ರಶಸ್ತಿ ಪಡೆದು ವಿಶ್ವವಿಖ್ಯಾತಿ ಗಳಿಸಿದೆ.
ದಿಕ್ಕು ತಪ್ಪದೇ ಓಡಿದ್ದ ಮರಿಯಾನೆ, ಗ್ರಾಮಸ್ಥರ ಆರೈಕೆ
2017ರ ಜೂನ್ ತಿಂಗಳಲ್ಲಿ ಹೊಸೂರು ಬಳಿ ಆಹಾರ ಅರಿಸಿ ಕಾಡಾನೆಗಳ ಹಿಂಡು ಬಂದಿತ್ತು. ಸಮೀಪದ ತೊಳ್ವಪೇಟಾ ಎಂಬ ಗ್ರಾಮದ ಬಳಿ ರಾತ್ರಿ ವೇಳೆ ವಿದ್ಯುತ್ ಸ್ಪರ್ಶಿಸಿ ಕಾಡಾನೆಗಳ ಹಿಂಡಿನಲ್ಲಿದ್ದ ಹೆಣ್ಣಾನೆ ಸಾವನ್ನಪ್ಪಿತ್ತು. ಬಹಳ ಹೊತ್ತು ಸತ್ತ ಕಾಡಾನೆಗಳ ಬಳಿಯಿದ್ದ ಕಾಡಾನೆಗಳ ಹಿಂಡು ಮುಂಜಾನೆ ಅಲ್ಲಿಂದ ಕಾಡಿಗೆ ತೆರಳಿದ್ದವು. ಆದ್ರೆ ತಾಯಿಯ ಬಳಿ ರೋಧಿಸುತ್ತಿದ್ದ ಮರಿ ಆನೆ ದಿಕ್ಕು ತೋಚದೆ ಸಮೀಪದ ತಾಟಿಕಲ್ ಗ್ರಾಮಕ್ಕೆ ಪ್ರವೇಶಿಸಿತ್ತು. ಗ್ರಾಮದೊಳಗೆ ಓಡಾಡುತ್ತಿದ್ದ ಆನೆ ಮರಿಯನ್ನು ರಕ್ಷಿಸಿದ್ದ ಗ್ರಾಮಸ್ಥರು ಹಾಲು ಆಹಾರ ನೀಡಿ ಆರೈಕೆ ಮಾಡಿದ್ದರು.
ಬೀದಿನಾಯಿಗಳ ಗುಂಪಿನಿಂದ ದಾಳಿ
ಈ ವಿಷಯ ತಿಳಿದ ಡೆಂಕಣಿಕೊಟ್ಟೈ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಮರಿಯನ್ನು ರಕ್ಷಣೆ ಮಾಡಿ ಕಾಡಾನೆಗಳು ಹಿಂಡು ಹಿಂಡಾಗಿ ಓಡಾಡುವ ಪ್ರದೇಶದಲ್ಲಿ ಗುಂಪಿಗೆ ಸೇರಿಸಲು ಯತ್ನಿಸಿದ್ದರು. ಆದರೆ, ಮರಿ ಆನೆಯನ್ನು ಕಾಡಾನೆಗಳು ತಮ್ಮ ಹಿಂಡಿಗೆ ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಆನೆ ಮರಿ ಸಮೀಪದ ತಿಪ್ಪಸಂದ್ರಂ ಗ್ರಾಮಕ್ಕೆ ತೆರಳಿದ್ದು, ಬೀದಿನಾಯಿಗಳ ಗುಂಪು ಆನೆ ಮರಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು.
ಇನ್ನೊಂದು ಆನೆಮರಿಗೂ ಅನಾರೋಗ್ಯ
ನಾಯಿಗಳಿಂದ ಆನೆ ಮರಿಯನ್ನು ರಕ್ಷಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದರು. ಅರಣ್ಯ ಇಲಾಖೆ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು. ಮರಿ ಆನೆಯ ಆರೋಗ್ಯ ಕೆಟ್ಟಿತ್ತು. ಇದೆ ಸಂದರ್ಭದಲ್ಲಿ ಮುದುಮಲೈನ ಪೊಮ್ಮನ್ ಎಂಬ ಮರಿ ಆನೆಗೆ ಆರೋಗ್ಯ ಹದಗೆಟ್ಟಿತ್ತು. ಪೊಮ್ಮನ್ ಜೊತೆ ಮರಿ ಆನೆಗೂ ಒಂದು ವಾರಕ್ಕೂ ಹೆಚ್ಚು ಕಾಲ ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವೆಂಬಂತೆ ಆನೆ ಮರಿ ಆರೋಗ್ಯದಲ್ಲಿ ಚೇತರಿಸಿಕೊಂಡಿತ್ತು. ಜೊತೆಗೆ ಮತ್ತೊಂದು ಮರಿ ಆನೆ ಪೊಮ್ಮನ್ ಜೊತೆ ಚೆನ್ನಾಗಿಯೇ ಹೊಂದಿಕೊಂಡಿತ್ತು.
ಇದನ್ನೂ ಓದಿ: Bengaluru: ಮಲ್ಲಿಗೆ ಹೂವಿನ ಕರಗ ಹೊತ್ತ ಮಂಗಳಮುಖಿಯರು!
ಬೊಮ್ಮನ್ ಮತ್ತು ಬೆಲ್ಲೆ ದಂಪತಿ ಮಡಿಲು ಸೇರಿದ ಮರಿ
ಹೀಗಾಗಿ ಮುದುಮಲೈ ತೆಪ್ಪಕಾಡು ಆನೆ ಶಿಬಿರಕ್ಕೆ ಪೊಮ್ಮನ್ ಜೊತೆ ಮರಿ ಆನೆಯನ್ನು ಹೆಚ್ಚಿನ ಆರೈಕೆ ಮಾಡಲು ಸರ್ಕಾರದ ಅನುಮತಿ ಪಡೆದು ಮಾವುತ ಬೊಮ್ಮನ್ ಜೊತೆ ಮರಿ ಆನೆಗಳ ರವಾನೆ ಮಾಡಲಾಗಿತ್ತು. ಆನೆ ಮರಿಗಳ ಪೋಷಣೆ ಮಾಡುತ್ತಿದ್ದ ಬೊಮ್ಮನ್ ಮತ್ತು ಅವರ ಪತ್ನಿ ಬೆಲ್ಲೆ ಸೇರಿ ಮರಿ ಆನೆಗೆ ರಘು ಎಂದು ನಾಮಕರಣ ಮಾಡಿದ್ದರು.
ಇದನ್ನೂ ಓದಿ: Vehicle Population: ಬೆಂಗಳೂರಲ್ಲಿ ಎಷ್ಟು ಕಾರ್, ಬೈಕ್ಗಳಿವೆ? ಲೆಕ್ಕ ತಿಳಿದ್ರೆ ಶಾಕ್ ಆಗ್ತೀರಿ!
ಬೊಮ್ಮನ್ ಅವರ ಪತ್ನಿ ಬೆಲ್ಲೆ ಹಾಗೂ ಎರಡು ಮರಿ ಆನೆಗಳನ್ನು ಸಾಕಿದ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗಳಿಸಿದೆ. ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿರುವ ಮರಿ ಆನೆ ಹಳೆಯ ದೃಶ್ಯಗಳು ವೈರಲ್ ಆಗಿವೆ. ಹೊಸೂರು ಭಾಗದ ಜನರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ
ವರದಿ: ಆದೂರು ಚಂದ್ರು, ನ್ಯೂಸ್ 18 ಆನೇಕಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ