ರಾಮನಗರ: ಶಾಂತವಾಗಿ ಹರಿಯುತ್ತಿರೋ ನದಿಯ ನೀರು, ಪಕ್ಕದಲ್ಲಿರೋ ಗಿಡಗಂಟಿಗಳ ನಡುವೆ ಅತ್ತಿತ್ತ ಓಡಾಡ್ತಿರೋ ಮುಂಗುಸಿಯಂತಹ ಪ್ರಾಣಿ, ಆದ್ರೆ ಇದು ಮುಂಗುಸಿಯಲ್ಲ! ರಾಮನಗರದಲ್ಲಿ (Ramanagara News) ನೀರಿನಿಂದ ತಲೆ ಮೇಲಕ್ಕೆತ್ತಿ ಇತ್ತ ನೋಡ್ತಿರೋ ಪ್ರಾಣಿ ಒಂದೆಡೆಯಾದ್ರೆ ಇತ್ತ ಛಂಗ್ ಅಂತ ಅತ್ತಿತ್ತ ಜಿಗಿಯುತ್ತಾ ಕುತೂಹಲ ಹೆಚ್ಚಿಸ್ತಿರೋ ಪ್ರಾಣಿ ಮತ್ತೊಂದೆಡೆ! ಅರೇ! ಇದ್ಯಾವ ಪ್ರಾಣಿಯಪ್ಪಾ ಅಂತ (Water Otters) ನಿಮಗೂ ಕುತೂಹಲ ಆಗಿದ್ರೆ ನಾವ್ ಹೇಳ್ತೀವಿ ಕೇಳಿ.
ಸುಗ್ಗನಹಳ್ಳಿಯ ಅರ್ಕಾವತಿ ಸೇತುವೆ ಬಳಿ ನೀರುನಾಯಿಗಳ ಹಿಂಡು
ಹೌದು, ಇದು ಮುಂಗುಸಿಯಲ್ಲ, ಅತ್ಯಂತ ಅಪರೂಪದ ನೀರುನಾಯಿ! ರಾಮನಗರದಲ್ಲಿ ಹರಿಯುವ ಅರ್ಕಾವತಿ ನದಿಯಲ್ಲಿ ಅಪರೂಪದ ನೀರುನಾಯಿಗಳ ಹಿಂಡು ಪ್ರತ್ಯಕ್ಷವಾಗಿ ಗಮನ ಸೆಳೆದಿವೆ. ರಾಮನಗರದ ಸುಗ್ಗನಹಳ್ಳಿಯ ಅರ್ಕಾವತಿ ಸೇತುವೆ ಬಳಿ ನೀರುನಾಯಿಗಳ ಹಿಂಡು ಕಾಣಿಸಿಕೊಂಡಿವೆ.
ಇದನ್ನೂ ಓದಿ: Ramanagara: ಬಾಡೂಟದ ಶಿವರಾತ್ರಿ! ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು ನೈವೇದ್ಯ ಮಾಡಿ ಸವಿದ ಭಕ್ತರು!
ಖುಷಿಪಟ್ಟ ಪ್ರಾಣಿಪ್ರಿಯರು
ಅರ್ಕಾವತಿ ನದಿಯಲ್ಲಿ ಅಪರೂಪದ ಪ್ರಾಣಿಗಳನ್ನ ಕಂಡು ರಾಮನಗರದ ಜನರು ಫುಲ್ ಖುಷ್ ಆಗಿದ್ದಾರೆ. ಕುತೂಹಲದಿಂದ ಮೂಗಿನ ಮೇಲೆ ಬೆರಳಿಟ್ಟು ನೀರುನಾಯಿಗಳ ಆಟ ನೋಡೋಕೆ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: Ramanagara: 'ಪಿಸ್ತೂಲ್' ಜೊತೆ 'ಸೈಕಲ್ ರಾಣಿ' 'ಶಾದಿ'ಯಂತೆ! 'ಕೋರ್ಟ್' ಮೆಟ್ಟಿಲೇರಿತು 'ಜಪಾನ್' 'ಸರ್ಕಾರ'!
ಒಟ್ಟಾರೆ ರಾಮನಗರದ ಅರ್ಕಾವತಿ ನದಿಯಲ್ಲಿ ನೀರುನಾಯಿಗಳು ಕಾಣಿಸಿಕೊಂಡಿರೋ ಈ ವಿಡಿಯೋವಂತೂ ಫುಲ್ ವೈರಲ್ ಆಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ