• Home
  • »
  • News
  • »
  • bengaluru-rural
  • »
  • Anekalನಲ್ಲಿ ಉದ್ಯಮಿಯ ಬರ್ಬರ ಕೊಲೆ: ಹೆಣ್ಣಿನ ಸಹವಾಸವೇ ಹೆಣ ಬೀಳುವಂತೆ ಮಾಡಿತಾ?

Anekalನಲ್ಲಿ ಉದ್ಯಮಿಯ ಬರ್ಬರ ಕೊಲೆ: ಹೆಣ್ಣಿನ ಸಹವಾಸವೇ ಹೆಣ ಬೀಳುವಂತೆ ಮಾಡಿತಾ?

ಕೊಲೆಯಾದ ರಾಜಶೇಖರ್ ರೆಡ್ಡಿ

ಕೊಲೆಯಾದ ರಾಜಶೇಖರ್ ರೆಡ್ಡಿ

ವಿಚ್ಛೇದಿತ ಮಹಿಳೆ ಜತೆ ಕಳೆದೆರಡು ವರ್ಷಗಳಿಂದಲೂ ಲಿವಿಂಗ್ ಟುಗೆದರ್​ನಲ್ಲಿ ಇದ್ದು,  ಮಹಿಳೆ ವಿಚಾರವಾಗಿ ಕೊಲೆಯಾಗಿರುವ ಬಗ್ಗೆ ಗುಮಾನಿ ಇದೆ.

  • Share this:

ಆನೇಕಲ್ :  ಆತ ರಿಯಲ್ ಎಸ್ಟೇಟ್ (Real Estate) ವ್ಯವಹಾರದಲ್ಲಿ ಒಳ್ಳೆಯ ಹೆಸರು ಮಾಡಿದ್ದ. ವ್ಯವಹಾರದಲ್ಲಿ (Business) ಸೋಲಾಗಲಿ, ಗೆಲುವಾಗಲಿ ಹಣದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡವನಲ್ಲ‌. ವ್ಯವಹಾರದಲ್ಲಿ ಉತ್ತಮ  ತನ್ನ ನಡೆತೆಯಲ್ಲಿ ಸಜ್ಜನವೆನಿಸಿಕೊಂಡಿದ್ದ ಉದ್ಯಮಿ (businessman) ನಡು ರೋಡಲ್ಲಿ ಬರ್ಬರವಾಗಿ ಕೊಲೆ (Murder) ಆಗಿ ಹೋಗಿದ್ದಾನೆ.  ಆಗ ಸಮಯ ಸರಿಸುಮಾರು ರಾತ್ರಿ ಎಂಟು ಗಂಟೆ. ಆನೇಕಲ್ ಪಟ್ಟಣದ ಶಿವಾಜಿ ಸರ್ಕಲ್ ನಿಂದ ಬಿಳಿ ಬಣ್ಣದ ಸ್ವಿಫ್ಟ್ ಕಾರು ಚಂದಾಪುರ ರಸ್ತೆಯತ್ತ ಹೊರಟಿತ್ತು. ಮಾರು ದೂರ ಹೋಗುತ್ತಿದ್ದಂತೆ ಮುಂದೆ ಸಾಗುತ್ತಿದ್ದ ಲಾರಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ವೈಟ್ ಸ್ವಿಫ್ಟ್ ಕಾರು ಸಹ ಬ್ರೇಕ್ ಹಾಕಿದೆ.  ಮೂರು ಬೈಕ್​​ಗಳಲ್ಲಿ ಬಂದ ಆರು ಕಿರಾತಕರು ಏಕಾಏಕಿ ಕಾರಿನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.


ಉದ್ಯಮಿ ಮೇಲೆ ಡೆಡ್ಲಿ ಅಟ್ಯಾಕ್​​ 


ಕಾರಿನ ಡ್ರೈವಿಂಗ್ ಶೀಟ್ ನಲ್ಲಿ ಕುಳಿತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಅಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಪಾತಕರಿಗೆ ಅದೆಷ್ಟೋ ದ್ವೇಷವಿತ್ತೆಂದರೆ ಕೊಲೆಯಾದ ವ್ಯಕ್ತಿ ಕಾರಿನಿಂದ ಹೊರ ಬರದಂತೆ ತಲೆ, ಕುತ್ತಿಗೆ, ಬೆನ್ನಿನ ಭಾಗಕ್ಕೆ ಮನಸೋ ಇಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಕಾರಿನಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ನಿನ್ನೆ ನಡೆದ ಘಟನೆಯನ್ನು ಕಂಡ ಆನೇಕಲ್ ಜನ ಭಯಭೀತರಾಗಿದ್ದಾರೆ.


ಇದನ್ನೂ ಓದಿ: Bengaluru Crime News: ಅರ್ಚನಾ ರೆಡ್ಡಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕೊಲೆಗೆ ಕಾರಣವಾಯ್ತಾ ‘ಆ’ ಒಂದು ಮೆಸೇಜ್..!


ಕೋರ್ಟ್​​ನಿಂದ ಬರುತ್ತಿದ್ದಾಗ ಕೊಲೆ  
ಇನ್ನೂ ಬಿಳಿ ಸ್ವಿಫ್ಟ್ ಕಾರಿನಲ್ಲಿ ‌ಕೊಲೆಯಾಗಿರುವ ಈ ವ್ಯಕ್ತಿ ಹೆಸರು ರಾಜಶೇಖರ್ ರೆಡ್ಡಿ ಅಲಿಯಾಸ್ ಗಾಲಿ ರಾಜೇಶ್. 38 ವರ್ಷದ  ರಾಜೇಶ್ ಮೂಲತಃ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ನಗರಿ ಪಟ್ಟಣದ ವಾಸಿ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಿಟಿಎಮ್ ಲೇಔಟ್ ನಲ್ಲಿ ನೆಲಸಿದ್ದ. ಚೆಕ್ ಬೌನ್ಸ್ ಕೇಸ್ ಹಿನ್ನೆಲೆ ಆನೇಕಲ್ ಕೊರ್ಟ್ ಗೆ ಬಂದು ವಾಪಾಸ್ ಹೋಗುತ್ತಿದ್ದ. ಈ ವೇಳೆ ಕಾರನ್ನು ಅಡ್ಡಗಟ್ಟಿದ ಗುಂಪು ಲಾಂಗ್ -ಮಚ್ಚು, ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ.


ಮಹಿಳೆಯ ಜೊತೆಗಿನ ಸಾಮಿಪ್ಯದಿಂದ ಕೊಲೆ? 


ಈ ಕೊಲೆಗೆ ಕಾರಣ ಕಾರಿನ ಹಿಂದೆ ಬಿದ್ದಿರುವ ದಾಖಲೆಗಳು ಒಂದು ಕಥೆ ಹೇಳಿದ್ರೆ, ರಾಜೇಶ್ ನನ್ನು ನೋಡಲು ಬಂದ ಸಿಂಧು ಹಿನ್ನೆಲೆ ‌ಇನ್ನೊಂದು ಕಥೆ ಹೇಳುತ್ತಿದೆ. ಜಮೀನು ವಿಚಾರವೊಂದರಲ್ಲಿ ವಿವಾದದ ಕಾರಣ ಕೊಲೆಯಾಗಿರಬಹುದೆಂದು ಒಂದು ಕಡೆ ಹೇಳಲಾಗ್ತಿದ್ರೆ, ಮತ್ತೊಂದು ಕಡೆ ವಿಚ್ಛೇದಿತ ಮಹಿಳೆಯ ಜತೆಗಿನ ಸಾಮಿಪ್ಯದಿಂದ ಈ ಕೃತ್ಯ ನಡೆದಿರಬಹುದಾ ಎಂಬ ವಿಚಾರವೂ ಕೇಳಿ ಬರುತ್ತಿದೆ. ಆದರೆ ಊರಿನ ಮಧ್ಯೆ ನಡು ರಸ್ತೆಯಲ್ಲಿ ಪಾತಕಿಗಳು ಮಾಡಿರುವ ಕೃತ್ಯ ಪೊಲೀಸರನ್ನೇ ಪ್ರಶ್ನೆಸುವಂತಿದೆ.


ಇದನ್ನೂ ಓದಿ: Archana Reddy Murder: ಅಮ್ಮನೇ ನನ್ನ ಬಾಯ್​​ಫ್ರೆಂಡ್​​ನ ಮೋಹಿಸಿದ್ದಳು: ರಹಸ್ಯಗಳನ್ನು ಬಾಯ್ಬಿಟ್ಟ ಮಗಳು


ಅಂದಹಾಗೆ ಆನೇಕಲ್ ಸುತ್ತಾಮುತ್ತಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ರಾಜೇಶ್, ತನ್ನ ಒಳ್ಳೆಯತನಕ್ಕೆ ಹೆಸರಾಗಿದ್ದ. ವ್ಯವಹಾರದಲ್ಲಿ ಒಂದೆರಡು ಲಕ್ಷ ಕಡಿಮೆ ಲಾಭ ಆದ್ರೂ ತನ್ನ ಗ್ರಾಹಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ವ್ಯವಹಾರದಲ್ಲಿ ಶತೃಗಳು ಕಡಿಮೆ‌ ಅನ್ನೋ ಮಾತಿದೆ. ಆದರೆ ವಿಚ್ಛೇದಿತ ಮಹಿಳೆ ಜತೆ ಕಳೆದೆರಡು ವರ್ಷಗಳಿಂದಲೂ ಲಿವಿಂಗ್ ಟುಗೆದರ್​ನಲ್ಲಿ ಇದ್ದು,  ಮಹಿಳೆ ವಿಚಾರವಾಗಿ ಕೊಲೆಯಾಗಿರುವ ಬಗ್ಗೆ ಗುಮಾನಿ ಇದೆ. ಹಾಗಾಗಿ ನಡು ರೋಡಿನಲ್ಲಿ ಉದ್ಯಮಿಯನ್ನು ಕೊಚ್ಚಿ ಹಾಕಿದ್ದು ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಕೊಲೆಗಾರರಿಗೆ ಆನೇಕಲ್‌ ಪೊಲೀಸರು ಶೋಧ ಮುಂದುವರೆಸಿದ್ದು, ಆರೋಪಿಗಳು ಸೆರೆಯಾದ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ.

Published by:Kavya V
First published: