ರಾಮನಗರ: ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ನಮ್ಮನ್ನ ಅಗಲಿ ಒಂದು ವರ್ಷ ಕಳೆದರೂ ಸಹ ಅವರ ಮೇಲಿನ ಪ್ರೀತಿ, ಅಭಿಮಾನ ಎಂದಿಗೂ ಕಡಿಮೆಯಾಗಲ್ಲ ಅನ್ನೋದಕ್ಕೆ ಚನ್ನಪಟ್ಟಣದ (Channapatna) ಈ ಗ್ರಾಮದವರೇ ಸಾಕ್ಷಿ. ರಾಘವೇಂದ್ರ ರಾಜಕುಮಾರ್ ಅವರಿಂದ ಅಪ್ಪು ಕಂಚಿನ (Appu Statue) ಪ್ರತಿಮೆಯನ್ನ ಉದ್ಘಾಟನೆ ಮಾಡಿಸೋಕೆ ಇಲ್ಲಿನ ಗ್ರಾಮಸ್ಥರು ತಯಾರಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಗ್ರಾಮದ ಯೂತ್ ಐಕಾನ್ ಪವರ್ ಸ್ಟಾರ್ ಅಭಿಮಾನಿ ಬಳಗದವರು ಕಂಚಿನ ಪ್ರತಿಮೆ ನಿರ್ಮಾಣ ಮಾಡಿಸಿದ್ದಾರೆ. ಎರಡು ಅಡಿಯ ಕಂಚಿನ ಪ್ರತಿಮೆಯನ್ನು 5 ಅಡಿ ಎತ್ತರದ ಪೀಠ ನಿರ್ಮಿಸಿ ಅದರ ಮೇಲೆ ಕೂರಿಸಲಾಗಿದೆ. ಇದೇ ಭಾನುವಾರ ಮಧ್ಯಾಹ್ನ 3.30 ಕ್ಕೆ ಅಪ್ಪುರವರ ಪ್ರೀತಿಯ ಅಣ್ಣ ರಾಘವೇಂದ್ರ ರಾಜಕುಮಾರ್ರಿಂದ ಉದ್ಘಾಟನೆ ಮಾಡಿಸಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.
ಅಭಿಮಾನಿಗಳನ್ನು ಮೆಚ್ಚಿದ ರಾಘಣ್ಣ
ಚನ್ನಪಟ್ಟಣದ ಅಭಿಮಾನಿಗಳು ಈಗಾಗಲೇ ರಾಘವೇಂದ್ರ ರಾಜಕುಮಾರ್ ಅವರನ್ನ ಭೇಟಿ ಮಾಡಿ ಆಹ್ವಾನವನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಘಣ್ಣ, "ನಾನು ಕಾರ್ಯಕ್ರಮಕ್ಕೆ ಬರುತ್ತೇನೆ. ನಿಮ್ಮ ಜೊತೆ ಹಾಡುತ್ತೇನೆಂದು ತಿಳಿಸಿದ್ದಾರೆ. ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡ್ತಿದ್ದಾರೆ. ಇದು ಬಹಳ ಒಳ್ಳೆಯ ಕೆಲಸ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ramanagara: ಬಾಡೂಟದ ಶಿವರಾತ್ರಿ! ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು ನೈವೇದ್ಯ ಮಾಡಿ ಸವಿದ ಭಕ್ತರು!
ಅಪ್ಪು ನೆನಪಲ್ಲಿ ಪ್ರತಿಮೆ
ಈ ಬಗ್ಗೆ ನ್ಯೂಸ್ 18 ಜೊತೆಗೆ ಮಾತನಾಡಿದ ಅಂಬಾಡಹಳ್ಳಿಯ ಅಪ್ಪು ಅಭಿಮಾನಿಗಳು, "ಅಪ್ಪು ಮಾಡಿರುವ ಒಳ್ಳೆಯ ಕೆಲಸಗಳು ಮಾದರಿಯಾಗಿವೆ. ಅವರ ನೆನಪು ಸದಾ ಉಳಿಯಬೇಕೆಂದು ಪ್ರತಿಮೆ ನಿರ್ಮಾಣ ಮಾಡಿದ್ದೇವೆಂದು" ತಿಳಿಸಿದ್ದಾರೆ.
ಇದನ್ನೂ ಓದಿ: Ramanagara: ರಾತ್ರೋ ರಾತ್ರಿ ಸಾವಿರಾರು ರೂಪಾಯಿ ಲಾಸ್! ರಾಮನಗರ ರೈತರ ಕಣ್ಣೀರು ಕೇಳುವವರಾರು?
ಅಪ್ಪು ಪ್ರತಿಮೆ ಲೋಕಾರ್ಪಣೆಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ತುಮಕೂರಿನ ಜಗದ್ಗುರು ಜ್ಞಾನಾನಂದಪುರಿ ಮಹಾಸ್ವಾಮೀಜಿಗಳು ಸೇರಿ ಹಲವರು ಆಗಮಿಸಲಿದ್ದಾರೆ. ಇನ್ನು ತಾಲೂಕಿನ ಸಾವಿರಾರು ಜನರು ಭಾಗಿಯಾಗಲಿದ್ದು, ಸಿಹಿ ವಿತರಣೆ ಮಾಡಲಾಗುತ್ತದೆ ಎಂದು ಅಪ್ಪು ಫ್ಯಾನ್ಸ್ ತಿಳಿಸಿದ್ದಾರೆ.
ವರದಿ: ಎ.ಟಿ.ವೆಂಕಟೇಶ್ ಪ್ರಭು, ನ್ಯೂಸ್ 18, ರಾಮನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ