ಹೊಸೂರು: ನೀರು ಕುಡಿಯುತ್ತಿರೋ ಮರಿಯಾನೆ, (Elephant) ಹಸಿರು ಸೊಪ್ಪು ತಿನ್ನುತ್ತಿರೋ ಆನೆಮರಿ, ಈ ಮುದ್ಮುದ್ದು ಮರಿಯನ್ನು (Oscar Award Elephant) ಕಂಡು ಯಾರಿಗೆ ಆದ್ರೂ ತೋಳ್ತುಂಬಾ ಅಪ್ಪಿಕೊಳ್ಬೇಕು ಅಂತನಿಸೋದು ಪಕ್ಕಾ! ಇಲ್ಲಿ ಹೀಗೆ ಆಟ ತುಂಟಾಟ ಆಡ್ತಿರೋ ಈ ಮರಿಯಾನೆ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಆಸ್ಕರ್ ಅವಾರ್ಡ್ (Oscar Awards 2023) ಎತ್ತಿ ಹಿಡಿದು ಭಾರತೀಯರಿಗೆ ಹೆಮ್ಮೆ ಮೂಡಿಸಿದೆ.
ಆನೆ ಮರಿಯ ಹಳೆ ವಿಡಿಯೋ ವೈರಲ್!
ಆನೆ ಮರಿ ಹಳೆಯ ವಿಡಿಯೋ ಇದೀಗ ವೈರಲ್ ಆಗ್ತಿದೆ. ರಘು ಆನೆ ಮರಿ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರ್ತಿದೆ. ಹೊಸೂರು ಸಮೀಪದ ಹಳ್ಳಿಯೊಂದರ ಬಳಿ ತಾಯಿಯನ್ನು ಕಳೆದುಕೊಂಡಿದ್ದ ಮರಿ ಆನೆ ಬಗ್ಗೆ ದಿ ಎಲಿಫೆಂಟ್ ವಿಸ್ಪರ್ಸ್ ಎಂಬ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಿರೋದು ಭಾರೀ ಖುಷಿಗೆ ಕಾರಣವಾಗಿದೆ.
ಇತಿಹಾಸ ನಿರ್ಮಿಸಿದ ಕಿರು ಸಾಕ್ಷ್ಯಚಿತ್ರ
ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಗೆದ್ದುಕೊಂಡಿದೆ. ಈ ಮೂಲಕ ಭಾರತವು ಆಸ್ಕರ್ 2023 ರಲ್ಲಿ ಇತಿಹಾಸ ನಿರ್ಮಿಸಿದೆ.
ಇದನ್ನೂ ಓದಿ: Oscars 2023: ನಾಟು ನಾಟು ಹಾಡಿಗೆ ಆಸ್ಕರ್ ಪಡೆದ RRR ಸಿನಿಮಾ-ಈ ಹಿಂದೆ ಪ್ರಶಸ್ತಿ ಪಡೆದ ಭಾರತೀಯರು ಯಾರ್ಯಾರು?
ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರದಲ್ಲಿ ಮಾನವ ಹಾಗೂ ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ ಎಂದು ತೋರಿಸಿ ಕೊಡಲಾಗಿದೆ. ಈ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಕಿರುಚಿತ್ರದಲ್ಲಿ ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮುಗಳ ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ.
ಇದನ್ನೂ ಓದಿ: Oscars 2023: ಭಾರತಕ್ಕೆ 2023ರ ಮೊದಲ ಆಸ್ಕರ್, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿ!
ಇದೊಂದು ಭಾವನಾತ್ಮಕ ಕಿರುಚಿತ್ರವಾಗಿದ್ದು, ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರವಾಗಿದೆ. ದಿ ಎಲಿಫೆಂಟ್ ವಿಸ್ಪರರ್ಸ್ನಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವನ್ನೂ ಸಾರಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ ಈ ಚಲನಚಿತ್ರವು ಭಾರತಕ್ಕೆ ಹೆಸರು ತಂದುಕೊಟ್ಟಿದೆ. ಈ ವರ್ಷದ ಮೊದಲ ಆಸ್ಕರ್ ಪ್ರಶಸ್ತಿ ಇದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ