ರಾಮನಗರ: ಶಿವರಾತ್ರಿ ಹಬ್ಬದ ದಿನದಂದು ಶಿವಪೂಜೆ (Mahashivaratri 2023) ಮಾಡಿ ಜಾಗರಣೆ ಮಾಡುವುದು ವಿಶೇಷ. ಆದರೆ ಚನ್ನಪಟ್ಟಣದ (Channapatna) ಈ ಗ್ರಾಮದಲ್ಲಿ ಬಾಡೂಟದ ಪ್ರಸಾದ (Mahashivaratri Badoota) ನೀಡಲಾಗುತ್ತದೆ.
ಕುರಿ, ಕೋಳಿ ಸಾರು, ಗೊಜ್ಜು ನೈವೇದ್ಯ
ಇಲ್ಲಿ ಭಕ್ತರು ಬಾಡೂಟ ಸವಿದು ಶಿವಧ್ಯಾನ ಮಾಡ್ತಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಾಡಹಳ್ಳಿ ಗ್ರಾಮದಲ್ಲಿಯೇ ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು, ಗೊಜ್ಜು ಮಾಡಿ ನೈವೇದ್ಯ ಇಟ್ಟು ವಿಶೇಷ-ವಿಶಿಷ್ಟವಾಗಿ ಶಿವರಾತ್ರಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ.
ಇದನ್ನೂ ಓದಿ: Ramanagara: 'ಪಿಸ್ತೂಲ್' ಜೊತೆ 'ಸೈಕಲ್ ರಾಣಿ' 'ಶಾದಿ'ಯಂತೆ! 'ಕೋರ್ಟ್' ಮೆಟ್ಟಿಲೇರಿತು 'ಜಪಾನ್' 'ಸರ್ಕಾರ'!
ಈ ಆಚರಣೆಯಿಂದ ಶುಭವಾಗಿದೆಯಂತೆ!
ನೂರಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಈ ಆಚರಣೆಯಿಂದ ನಮಗೆ ಶುಭವಾಗಿದೆ ಎನ್ನುತ್ತಾರೆ ಭಕ್ತರು.
"ಈ ಆಚರಣೆಯನ್ನ ನಿಲ್ಲಿಸಿದರೆ ಸಮಸ್ಯೆ ಆಗಲಿದೆ. ಹಾಗಾಗಿ ಪ್ರತಿ ಶಿವರಾತ್ರಿಗೂ ಇದೇ ರೀತಿ ಆಚರಣೆ ಮಾಡ್ತೇವೆ. ಸಾವಿರಾರು ಜನ ಭಕ್ತರು ಬಾಡೂಟ ಸವಿಯುತ್ತಾರೆ. ಚನ್ನಪಟ್ಟಣದ ಜೊತೆಗೆ ಹೊರರಾಜ್ಯದಿಂದಲೂ ಜನ ಬರ್ತಾರೆ ಎನ್ನುತ್ತಾರೆ" ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮಂಗಾಡಹಳ್ಳಿ ಗ್ರಾಮದಲ್ಲಿ ಸಿದ್ದಪ್ಪಾಜಿ ದೇವರ ಅರ್ಚಕರು.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಒಟ್ಟಾರೆ ಶಿವರಾತ್ರಿ ಹಬ್ಬವನ್ನ ಈ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗ್ತಿದ್ದು ಭಕ್ತರು ಸಹ ಬಾಡೂಟ ಸವಿಯುತ್ತಾರೆ.
ವರದಿ: ಎ.ಟಿ.ವೆಂಕಟೇಶ್ ಪ್ರಭು, ನ್ಯೂಸ್ 18 ರಾಮನಗರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ