ಬೆಂಗಳೂರು: ಧುರ್ಯೋಧನ, ಭೀಮ, ಯುಧಿಷ್ಠಿರ, ಸಾಕ್ಷಾತ್ ಶ್ರೀ ಕೃಷ್ಣ! ಈ ಕುರುಕ್ಷೇತ್ರ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ, ಅಷ್ಟು ಚಂದದ ನಟನೆ, ಅರೇ! ಇದೇನು ನಾಟಕದ ದೃಶ್ಯ (Kurukshetra Drama) ತೋರಿಸಿ ವಿಶೇಷ ಅಂತಿದ್ದಾರೆ ಅಂದ್ಕೊಂಡ್ರಾ? ಅಲ್ಲೇ ಇದೆ ವಿಶೇಷ! ಇವರೆಲ್ಲ ಮುಸ್ಲಿಂ (Muslim Artists) ಕಲಾವಿದರು!
ಬೆಂಗಳೂರಿನ ನೆಲಮಂಗಲ ತಾಲೂಕಿನ ಹಾಲೇನಹಳ್ಳಿಯಲ್ಲಿ ನಡೆದ ಮಹಾಭಾರತದ ‘ಕುರುಕ್ಷೇತ್ರ’ ನಾಟಕ ಪ್ರದರ್ಶಿಸಿದ ತಂಡದಲ್ಲಿ 18 ಮುಸ್ಲಿಂ ಕಲಾವಿದರೇ ಇದ್ದರು! ಒಟ್ಟು 33 ಸದಸ್ಯರ ಸರ್ವಧರ್ಮೀಯ ನಾಟಕ ತಂಡದಲ್ಲಿ 20 ಮುಸ್ಲಿಂ ಪುರುಷರು ಭಾಗವಹಿಸಿದ್ದರು. ಈ ನಾಟಕ ನೋಡೋಕೆ ಎಂದೇ ವಿವಿಧ ಭಾಗಗಳಿಂದ 15,000 ಕ್ಕೂ ಹೆಚ್ಚು ಪ್ರೇಕ್ಷಕರು ನೆರೆದಿದ್ದರು.
6 ಹಿಂದೂ ಮಹಿಳಾ ಕಲಾವಿದರು
ಭಾಷಾ ಶೈಲಿಯಲ್ಲಿ ತೊಡಕುಂಟಾದ ಕಾರಣ ಮುಸ್ಲಿಂ ಮಹಿಳಾ ಕಲಾವಿದರ ಬದಲು 6 ಹಿಂದೂ ಮಹಿಳಾ ಕಲಾವಿದರು ಅಭಿನಯಿಸಿದರು. ಜೊತೆಗೆ ನಾಲ್ವರ ಮೇಕಪ್ ತಂಡದಲ್ಲೂ ಇಬ್ಬರು ಮುಸ್ಲಿಮರು ಮತ್ತು ಇಬ್ಬರು ಹಿಂದೂಗಳಿದ್ದರು. ಮಾಸ್ಟರ್ ಹಾಲೇನಹಳ್ಳಿಯ ಮುನಿರಾಜು ಈ ನಾಟಕದ ಸಾರಥ್ಯ ವಹಿಸಿದ್ರು.
ಇದನ್ನೂ ಓದಿ: Bengaluru: ಬಾಡಿಗೆ ಮನೆಗಳಲ್ಲಿ ವಾಸಿಸುವರಿಗೆ ಮಾರ್ಗಸೂಚಿ!
ಕಲಾವಿದರ ಧರ್ಮ ಗೊತ್ತಾಗ್ಲೇ ಇಲ್ಲ!
ಈ ಕುರುಕ್ಷೇತ್ರದಲ್ಲಿ ಧರ್ಮರಾಯನಾಗಿ ಅಬ್ದುಲ್ ರಜಾಕ್ ಅಭಿನಯಿಸಿದ್ರೆ, ಧುರ್ಯೋಧನನನಾಗಿ ನಯಾಜ್ ಖಾನ್ ಎಂಬುವವರು ಕಾಣಿಸಿಕೊಂಡರು. ಮುಸ್ಲಿಂ ಕಲಾವಿದರು ಎಂಬುದನ್ನೂ ಮೀರಿ ಇಡೀ ನಾಟಕ ರೋಚಕವಾಗಿ ಮೂಡಿಬಂತು.
ಇದನ್ನೂ ಓದಿ: Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!
ಧಾರ್ಮಿಕ ಸೌಹಾರ್ದತೆಗೆ ನಾಂದಿ
ಅಂದಹಾಗೆ ಈ ಊರಿನಲ್ಲಿ ಸುಮಾರು 100 ಮನೆಗಳಿದ್ದು ಅವರಲ್ಲಿ 20 ಕುಟುಂಬಗಳು ಮುಸ್ಲಿಂ ಧರ್ಮೀಯರು. ಎರಡು ವರ್ಷಗಳ ಹಿಂದೆ ಹುಟ್ಟಿದ ಚಿಕ್ಕ ಐಡಿಯಾವೊಂದು ಹೀಗೆ ಧಾರ್ಮಿಕ ಸೌಹಾರ್ದತೆಗೆ ನಾಂದಿಯಾಯ್ತು ಅಂತಾರೆ ಈ ಕಲಾವಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ