Bengaluru Rose Business: ವಿದೇಶಿ ವಿಮಾನ ಏರಿದ ಕರ್ನಾಟಕದ ಗುಲಾಬಿ! ದೇಶಕ್ಕೆ ನೂರಾರು ಕೋಟಿ ಲಾಭ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಬಾರಿ ಹೂಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಬಂದಿದ್ದು, ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಹೂ ರಪ್ತು ಮಾಡ್ತಿರೋದೆ ಒಂದು ವಿಶೇಷ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ದೊಡ್ಡಬಳ್ಳಾಪುರ: ಪ್ರೇಮಿಗಳ ನಿವೇದನೆಗೆ ರೆಡಿಯಾಗಿರುವ ಕೆಂಪು ಗುಲಾಬಿ, (Red Rose)  ಪ್ರೇಮಿಗಳ ಆಕರ್ಷಣೆಗೆ (Valentine's Day 2023)  ಸಿದ್ದವಾಗಿರೋ ವಿವಿಧ ಬಗೆಯ ರೆಡ್ ರೋಸ್, ಇದೇ ಗುಲಾಬಿಯನ್ನ ಬೇರೆಡೆಗೆ ಕಳಿಸಲು ಸಿದ್ದಮಾಡ್ತಿರೋ ರೈತರು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ  (Bengaluru Rural News) ದೊಡ್ಡಬಳ್ಳಾಪುರ ತಾಲೂಕಿನ ಕಾಚಹಳ್ಳಿಯ ರೈತ ಶ್ರೀಕಾಂತ್ ಎಂಬುವವರು ತೋಟದಲ್ಲಿ.


    ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಕೆಂಪು ಗುಲಾಬಿಗೆ ಬಾರಿ ಬೇಡಿಕೆ ಬಂದಿದೆ. ಅದರಲ್ಲೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ದೇಶಗಳಿಗೆ ಇದೇ ಗುಲಾಬಿ ಲಕ್ಷಾಂತರ ಕೆಜಿ ರಫ್ತಾಗಿದೆ.


    ವಿದೇಶದ ಈ ನಗರಗಳಿಗೆ ರಫ್ತಾಗುತ್ತೆ ನಮ್ಮ ಗುಲಾಬಿ!
    ಅಂದಹಾಗೆ ವಿಮಾನ ನಿಲ್ದಾಣದಿಂದ ಲಂಡನ್, ಸಿಂಗಾಪುರ, ದುಬೈ, ಕುವೈತ್, ಮಸ್ಕತ್​ಗೆ ಗುಲಾಬಿ ರಪ್ತು ಮಾಡಲಾಗಿದೆ. ಜೊತೆಗೆ ದೇಶದ ದೆಹಲಿ, ಮುಂಬೈ, ಕೊಲ್ಕತ್ತಾ, ಚಂಡಿಗಢದಲ್ಲೂ ರಾಜ್ಯದ ಗುಲಾಬಿಗೆ ಬೇಡಿಕೆ ಸೃಷ್ಟಿಯಾಗಿದೆ.


    ಈ ಜಿಲ್ಲೆಗಳ ರೈತರಿಗೆ ಬಂಪರ್!
    ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಅತಿ ಹೆಚ್ಚು ಬೆಳೆಯುವ ಗುಲಾಬಿ ರೈತರಿದ್ದು, ತಾಜ್ ಮಹಲ್, ಬೋನಿಯರ್, ವಿವಿಧ ಬಗೆಯ ಬಣ್ಣದ ಗುಲಾಬಿಗಳು ಕಟ್ ಮಾಡಿ ವಿದೇಶಗಳಿಗೆ ಕಳಿಸ್ತಿದ್ದಾರೆ. ಇದ್ರಿಂದಾಗಿ ಕಳೆದ ಹಲವು ವರ್ಷಗಳಿಂದ ಕೊರೊನಾ ನಡುವೆ ಇಲ್ಲದ ಬೇಡಿಕೆ ಈ ಭಾರಿ ಗುಲಾಬಿಗೆ ಸೃಷ್ಟಿಯಾಗಿದ್ದು ರೈತರಿಗೆ ಸಂತಸ ತಂದಿದೆ.


    ಕಳೆದ ವರ್ಷವೇ  771 ಕೋಟಿ ಬೆಲೆಯ ಗುಲಾಬಿ ರಫ್ತು!
    ಅಂದಹಾಗೆ ದೇಶದ ಹೂ ರಫ್ತಿನಲ್ಲಿ ದೊಡ್ಡ ಪ್ರಮಾಣದ ಲಾಭ ಸೃಷ್ಟಿಯಾಗಿದೆ. ಕಳೆದ ವರ್ಷ 771 ಕೋಟಿ ರಫ್ತಿನ ವಹಿವಾಟು ವರಮಾನ ದೇಶಕ್ಕೆ ಹರಿದುಬಂದಿದೆ. ಇದರ ನಡುವೆ ಈ ಬಾರಿ ಹೂಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಬಂದಿದ್ದು, ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಹೂ ರಪ್ತು ಮಾಡ್ತಿರೋದೆ ಒಂದು ವಿಶೇಷ.


    ಇದನ್ನೂ ಓದಿ: Bengaluru: ತನ್ನ ಕಳುವಾದ ನಾಯಿಯನ್ನು ಹುಡುಕಲು ಡಿಟೆಕ್ಟಿವ್ ಆದ ಬೆಂಗಳೂರಿನ ಯುವತಿ!




    ಇದರ ನಡುವೆ ದೇಶದ ಅತಿ ಹೆಚ್ಚು ಹೂ ರಪ್ತು ಮಾಡುವ ವಿಮಾನ ನಿಲ್ದಾಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲ ಸ್ಥಾನ ಪಡೆದಿದೆ. ಹೀಗಾಗಿ ವಿದೇಶಿ ಕಂಪನಿಗಳಿಗೆ ತಾವು ಬೆಳೆದ ಗುಲಾಬಿಗಳನ್ನ ಈ ಭಾರಿ ಅಧಿಕವಾಗಿ ಪೂರೈಕೆ ಮಾಡ್ತಿರುವ ರೈತರು ಖುಷಿಯಾಗಿದ್ದಾರೆ.


    ಇದನ್ನೂ ಓದಿ: Fish Meals In Bengaluru: ಬೆಂಗಳೂರಲ್ಲಿ ಕಡಿಮೆ ಬೆಲೆಯಲ್ಲಿ ಭರ್ಜರಿ ಮೀನೂಟ! 100 ಕ್ಯಾಂಟೀನ್​ ಆರಂಭ


    ಒಟ್ಟಾರೆ ಕಳೆದ ಮೂರು ವರ್ಷಗಳಿಂದ ಗುಲಾಬಿ ಹೂಗಳಿಗೆ ಬೇಡಿಕೆ ಕಡಿಮೆಯಿದ್ದು, ಈ ಭಾರಿ ಗುಲಾಬಿ ಬೇಡಿಕೆ ಹೂವಿನಂತೆಯೇ ಅರಳಿದೆ.


    ವರದಿ: ಮನು ಹಾದ್ರೀಪುರ, ನ್ಯೂಸ್ 18 ಚಿಕ್ಕಬಳ್ಳಾಪುರ

    Published by:ಗುರುಗಣೇಶ ಡಬ್ಗುಳಿ
    First published: