ಬೆಂಗಳೂರು (ಮೇ 18): ಮಹಾಮಳೆಗೆ ರಾಜಧಾನಿ ಬೆಂಗಳೂರು (Bengaluru) ಅಕ್ಷರಶಃ ತತ್ತರಿಸಿದೆ. ನಿನ್ನೆ ಮಧ್ಯಾಹ್ನವೇ ಶುರುವಾದ ಮಳೆ ಬೆಂಗಳೂರಿಗರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೇವಲ 1 ಗಂಟೆಯಲ್ಲೇ ಬರೋಬ್ಬರಿ 100 ಮಿಮೀ.ಗಿಂತ ಹೆಚ್ಚಿನ ಮಳೆಯಾಗಿದ್ದು (Rain), ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಅನೇಕ ಏರಿಯಾಗಳಲ್ಲಿ ರಾತ್ರಿಯಿಡೀ ಜನರು ಪರದಾಡಿದ್ದಾರೆ. ರಾಜಧಾನಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಭಾಗ ಸೇರಿದಂತೆ ಎಲ್ಲಾ ಕಡೆ ವರುಣ ಅಬ್ಬರಿಸಿದ್ದಾನೆ. ರಾತ್ರಿ ಇಡೀ ಸುರಿದ ಮಳೆಗೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ. ಪರಿಣಾಮ ಮನೆ ಒಳಕ್ಕೆ ಮಳೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳು (Local Residents) ಪರದಾಡುವಂತಾಯ್ತು. ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ನೀರು ನುಗ್ಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು (Motorists) ಸಂಕಷ್ಟಪಡುವಂತಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ