ಬೆಂಗಳೂರು: ನಾಳೆ (ಜ.9)ರಿಂದ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ (Mekedatu Padayatra) ಸಂಬಂಧ ಇಂದು ಕನಕಪುರದಲ್ಲಿ ಕಾಂಗ್ರೆಸ್ ನಾಯಕರ ಸಭೆ (Congress Meeting in Kanakapura ) ನಡೆಸಿದರು. ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar), 120 ಜನ ನಾಯಕರುಗಳು ಅನೇಕ ಸಾಧಕ-ಭಾದಕಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸರ್ಕಾರ ತೆಗೆದುಕೊಂಡ ರಾಜಕೀಯ ನಿರ್ಧಾರದ ಬಗ್ಗೆ ಚರ್ಚೆ ಆಗಿದೆ. ಈ ಹೋರಾಟವನ್ನು ನಿಲ್ಲಿಸಲು ಇಡೀ ಸರ್ಕಾರದ ವ್ಯವಸ್ಥೆ ಜನರಿಗೆ ತೊಂದರೆ ಕೊಟ್ಟಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಲಾಕ್ ಡೌನ್ ಮತ್ತು ಕರ್ಫ್ಯೂ ಹೇರಿರುವುದರಿಂದ ಜನರಿಗೆ ಆಗುವ ತೊಂದರೆ ಬಗ್ಗೆ ಚರ್ಚೆ ಮಾಡಿ, ಅವರ ನಡೆ ಖಂಡಿಸಿದ್ದೇವೆ. ನಾಳೆ ಪಾದಯಾತ್ರೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದೇವೆ. ಈ ಪಾದಯಾತ್ರೆ ಗೆ ಇಡೀ ರಾಜ್ಯದ ಜನರು ಬೆಂಬಲ ಕೊಡ್ತಿದ್ದಾರೆ ಎಂದರು.
100 ವೈದ್ಯರು, 1 ಲಕ್ಷ ಮಾಸ್ಕ್
ನಮ್ಮ ಜಿಲ್ಲೆಯಲ್ಲಿ ಒಂದು ಸಾವು ಕೂಡ ಇಲ್ಲ, ಐಸಿಯು ರೋಗಿಗಳು ಕೂಡ ಇಲ್ಲ. ಒತ್ತಾಯದ ಮೇರೆಗೆ ಕೊರೋನಾ ಹೆಚ್ಚಳ ನಂಬರ್ ತೋರಿಸಿದ್ದಾರೆ. ನಮ್ಮ ಬಳಿ ಎಲ್ಲಾ ಸರ್ಕಾರದ ದಾಖಲೆ ಕೂಡ ಇದೆ. ಕೋವಿಡ್ ನಿಯಮ ಪಾಲನೆ ಮಾಡಿ ಪಾದಯಾತ್ರೆ ಮಾಡ್ತೀವಿ. ಕಾನೂನಿಗೆ ವಿರುದ್ದವಾದ ಆದೇಶಗಳನ್ನು ಸರ್ಕಾರ ಹೊರಡಿಸಿದ್ದಾರೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 1 ಲಕ್ಷಕ್ಕೂ ಹೆಚ್ಚು ಮಾಸ್ಕ್ ಗಳನ್ನು ರೆಡಿ ಮಾಡಿಸಿದ್ದೇವೆ. 100 ವೈದ್ಯರು ಸೇವೆಗೆ ರೆಡಿಯಾಗಿದ್ದಾರೆ. 1500 ಕಾರ್ಯಕರ್ತರು ಊಟ-ವಸತಿ ವ್ಯವಸ್ಥೆ ಮಾಡಲು ಕೆಲಸ ಮಾಡ್ತಿದ್ದಾರೆ. ನಮ್ಮ ಅಚಲವಾದ ಮಾತನ್ನು ಘೋಷಣೆ ಮಾಡಿದ್ದೇವೆ. ಅದೇ ಮಾತಿನಂತೆ ನಾಳೆ ಬೆಳಗ್ಗೆ 8:30ರಿಂದ ಪಾದಯಾತ್ರೆ ಶುರು ಮಾಡಿತ್ತೇವೆ ಎಂದು ಘೋಷಿಸಿದರು.
ಇದನ್ನೂ ಓದಿ: ಅಯ್ಯೋ ಯಾಕ್ ಹೋಗಿ ಸಾಯ್ತಿರಾ, ಚಂಡಿ ಹಠ ಬಿಡಿ.. ಸಿದ್ದರಾಮಯ್ಯ-ಡಿಕೆಶಿಗೆ BJP Leaders ವ್ಯಂಗ್ಯ
ರಾಜ್ಯದ ಹಿತಕ್ಕಾಗಿ, ಈ ಹೋರಾಟವನ್ನು ಮಾಡ್ತೀವಿ.ಕೋವಿಡ್ ನಿಯಮ ಪಾಲನೆ ಮಾಡಿ, ಪಾದಯಾತ್ರೆಗೆ ಬಂದು ಶಾಂತಿಯುತ ಕಾಪಾಡುವಂತೆ ಕೈ ಕಾರ್ಯಕರ್ತರಿಗೆ ಮನವಿ ಮಾಡಿದರು. ಬೆಳಗ್ಗೆ 7 ಗಂಟೆಗೆ ನೀವು ಬರಬೇಕು. ಕಾನೂನು, ಕೊವೀಡ್ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿ ಎಂದು ಡಿಕೆಶಿ ಮನವಿ ಮಾಡಿದರು.
ಸುಳ್ಳು ಮಾಹಿತಿಯ ಪ್ರಚಾರ ಕೊಟ್ಟಿದ್ದಾರೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾತನಾಡಿ, ಬಿಜೆಪಿ ಸರ್ಕಾರ ಸುಳ್ಳು ಮಾಹಿತಿ ಕೊಡಲು ಪ್ರಯತ್ನ ಮಾಡ್ತಿದೆ. ಇವತ್ತು ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಯ ಪ್ರಚಾರ ಕೊಟ್ಟಿದ್ದಾರೆ. ಇದರ ಅರ್ಥ ಏನು ಅಂದರೆ ಮೇಕೆದಾಟು ಹೋರಾಟ ತಡೆಯುವುದೇ ಆಗಿದೆ. ಈ ಹೋರಾಟ ಮಾಡ್ತೀರೋದು ರಾಜಕೀಯಕ್ಕಾಗಿ ಅಲ್ಲ. ಮೂರನೇ ಅಲೆ ಬರೋಕು ಮುನ್ನವೇ ಈ ಮೇಕೆದಾಟು ಯೋಜನೆ ಅನುಷ್ಠಾನ ಪಾದಯಾತ್ರೆ ಮಾಡ್ತೀವಿ ಅಂತ ಘೋಷಣೆ ಮಾಡಿದ್ವಿ. ಎಲ್ಲ ನಾಯಕರ ಜೊತೆ ಚರ್ಚಿಸಿ ನಾವು ಈ ತೀರ್ಮಾನ ಮಾಡಿದ್ವಿ. ಈ ರಾಜ್ಯದ ಜನರಿಗೆ ಅನ್ಯಾಯ , ದ್ರೋಹ ಮಾಡ್ತಿರೋದು ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರ ಕೊಡುಗೆ ಏನು?
ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಆಯ್ತು. ಎರಡುವರೆ ವರ್ಷಗಳಲ್ಲಿ ಈ ಸರ್ಕಾರ, ಯೋಜನೆ ಪ್ರಾರಂಭ ಮಾಡಲು ಯಾವುದೇ ಪ್ರಯತ್ನ ಮಾಡಿಲ್ಲ. ಕಾರಜೋಳ ಏನು ಪ್ರಾಮಾಣಿಕ ಪ್ರಯತ್ನ ಮಾಡಿದ್ಯಪ್ಪ...? ಕೇಂದ್ರದಿಂದ ಯೋಜನೆಗೆ ಅನುಮತಿ ಕೊಡಿಸುವ ಕೆಲಸ ಆಗಿಲ್ಲ. ಈ ಯೋಜನೆ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ಸರ್ಕಾರ. 2013ರಲ್ಲಿ ಎಂಬಿ ಪಾಟೀಲ್ ನೀರಾವರಿ ಸಚಿವರು ಆಗಿದ್ರು, ಅದಕ್ಕೂ ಮುನ್ನ ಹಿರಿಯ ವಕೀಲರ ಸಲಹೆ ಪಡೆದು, 2013ರಲ್ಲಿ ಪ್ರಾರಂಭ ಮಾಡಿದ್ವಿ, ಇದರಲ್ಲಿ ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ