Ramadevara Betta: ದಕ್ಷಿಣ ಭಾರತದ ಅಯೋಧ್ಯೆ! ರಾಮದೇವರ ಬೆಟ್ಟ ಹೀಗಿದೆ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತನ್ಮಯವಾಗಿ ತನ್ನತ್ತಲೇ ಸೆಳೆಯುವ ಈ ಪವಿತ್ರ ಕ್ಷೇತ್ರವೇ ಈಗ ಇಡೀ ರಾಜ್ಯದ ಕೇಂದ್ರಬಿಂದು! ಹಾಗಾದರೆ ಹೇಗಿದೆ ರಾಮದೇವರು ನೆಲೆಸಿರುವ ತಾಣ? ವಿವರ ಇಲ್ಲಿದೆ.

 • News18 Kannada
 • 4-MIN READ
 • Last Updated :
 • Ramanagara, India
 • Share this:

  ರಾಮನಗರ: ಸುತ್ತ ಹಸಿರು ಕಾಡು, ಎತ್ತರದ ಬೆಟ್ಟದಲ್ಲಿ ಪವಡಿಸಿದ್ದಾನೆ ಶ್ರೀ ರಾಮಚಂದ್ರ! ಇದು ದಕ್ಷಿಣ ಭಾರತದ ಅಯೋಧ್ಯೆಯೆಂದೇ (Ayodhya Of South India) ಫೇಮಸ್! ತನ್ಮಯವಾಗಿ ತನ್ನತ್ತಲೇ ಸೆಳೆಯುವ ಈ ಪವಿತ್ರ ಕ್ಷೇತ್ರವೇ ಈಗ ಇಡೀ ರಾಜ್ಯದ (Ramanagara Ramadevarabetta) ಕೇಂದ್ರಬಿಂದು! ಹಾಗಾದರೆ ಹೇಗಿದೆ ರಾಮದೇವರು ನೆಲೆಸಿರುವ ತಾಣ? ವಿವರ ಇಲ್ಲಿದೆ.


  ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ! ಈ ಹೆಸರು ಈಗ ರಾಜ್ಯದೆಲ್ಲೆಡೆ ಚಿರಪರಿಚಿತ. ರಾಮದೇವರ ಬೆಟ್ಟದಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಿ ದಕ್ಷಿಣ ಅಯೋಧ್ಯೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ಈ ವಿಚಾರವಾಗಿ ರಾಮನಗರ ಜಿಲ್ಲಾಡಳಿತ ದೇವಸ್ಥಾನದ ಸರ್ವೆ ವರದಿಯನ್ನು ಸಹ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಇರುವ ದೇವಸ್ಥಾನವನ್ನೇ ನವೀಕರಣ ಮಾಡಲಾಗುವುದು, ಹೊಸದಾಗಿ ಕಟ್ಟುವುದಿಲ್ಲಎನ್ನುತ್ತಾರೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್.


  ಅಗತ್ಯವಿದೆ ಹಲವು ಅನುಮತಿ
  ಇನ್ನು ದೇಗುಲದ ಸುತ್ತಲಿನ ಒಟ್ಟು 19 ಎಕರೆ ಪ್ರದೇಶ ಮುಜರಾಯಿ ಇಲಾಖೆಗೆ ಸೇರಲಿದೆ. ಈ ಜಾಗವನ್ನ ಇಕೋ ಸೆನ್ಸಿಟಿವ್ ಝೋನ್ ಎಂದು ಗುರುತಿಸಲಾಗಿದೆ. ಮುಂದೆ ಅಭಿವೃದ್ಧಿ ಪಡಿಸಲು ಮುಂದಾದರೆ ಸಂಬಂಧಿಸಿದ ಸೆಂಟ್ರಲ್ ಹಾಗೂ ಸ್ಟೇಟ್ ಬೋರ್ಡ್​ನಿಂದ ಅನುಮತಿ ಪಡೆಯಬೇಕಿದೆ ಎನ್ನುತ್ತದೆ ಅರಣ್ಯ ಇಲಾಖೆ.


  ಇದನ್ನೂ ಓದಿ:  Ramanagara: ಬಾಡೂಟದ ಶಿವರಾತ್ರಿ! ಸಿದ್ದಪ್ಪಾಜಿಗೆ ಕುರಿ, ಕೋಳಿ ಸಾರು ನೈವೇದ್ಯ ಮಾಡಿ ಸವಿದ ಭಕ್ತರು!


  Ramanagara Ramadevarabetta Vulture Sanctuary ರಾಮದೇವರ ಬೆಟ್ಟಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಬೆಂಗಳೂರಿನಿಂದ ಎಷ್ಟು ದೂರ?
  ರಾಮನಗರದ ರಾಮದೇವರ ಬೆಟ್ಟ ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ರಾಮನಗರದಿಂದ ಕೇವಲ 3 ಕಿ.ಮೀ ಮುಂದೆ ಹೋದರೆ ನಿಮಗೆ ಈ ಸುಂದರ ಪವಿತ್ರ ತಾಣ ಸಿಗುತ್ತೆ.
  ಇದನ್ನೂ ಓದಿ: Water Otters Video: ಅರ್ಕಾವತಿ ನದಿಯಲ್ಲಿ ಅಪರೂಪದ ಪ್ರಾಣಿಗಳು! ಛಂಗ್ ಅಂತ ಅತ್ತಿತ್ತ ಜಿಗಿದ ನೀರುನಾಯಿಗಳು


  ಬೇಗ ಅಭಿವೃದ್ಧಿಯಾಗಲಿ ಅಂತಾರೆ ಅರ್ಚಕರು
  ಈ ಬಗ್ಗೆ ರಾಮದೇವರ ಬೆಟ್ಟದ ಪ್ರಧಾನ ಅರ್ಚಕರಾದ ನಾಗರಾಜ ಭಟ್ ನ್ಯೂಸ್ 18 ಜೊತೆಗೆ ಮಾತನಾಡಿದ್ದಾರೆ. "ಆದಷ್ಟು ಬೇಗ ಸರ್ಕಾರ ದೇವಸ್ಥಾನವನ್ನ ಅಭಿವೃದ್ಧಿ ಮಾಡಲಿ, ಅಯೋಧ್ಯೆಗೆ ಹೋಗಲು ಸಾಧ್ಯವಾಗದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಬಹುದು. ಈಗಾಗಲೇ ಅಧಿಕಾರಿಗಳು ಬಂದು ಸ್ಥಳ ನೋಡಿಕೊಂಡು ಹೋಗಿದ್ದಾರೆ. ಆದಷ್ಟು ಬೇಗ ಕೆಲಸ ಶುರು ಮಾಡಲಿ"  ಎಂದು ಅವರು ಮನವಿ ಮಾಡಿದ್ದಾರೆ.


  ವರದಿ: ಎ.ಟಿ.ವೆಂಕಟೇಶ್ ಪ್ರಭು, ನ್ಯೂಸ್ 18, ರಾಮನಗರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು