Belagavi: ತಂದೆ ತಾಯಿಯೇ ದೇವರು! ಅಪ್ಪ, ಅಮ್ಮನ ಪುತ್ಥಳಿ ಸ್ಥಾಪಿಸಿದ ಮಗ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅದೆಷ್ಟೋ ಮಕ್ಕಳು ತಂದೆ ತಾಯಿಗಳ ವೃದ್ಧಾಪ್ಯದಲ್ಲಿ ಅವರ ಜೊತೆ ಚಂದದ ಜೀವನ ಕಳೆಯದೇ ವೃದ್ಧಾಶ್ರಮಕ್ಕೆ ಕಳಿಸೋದು ಹೆಚ್ಚಾಗ್ತಿರೋ ಈ ಕಾಲದಲ್ಲಿ ಮಗನೊಬ್ಬ ಜನ್ಮ ನೀಡಿದವರಿಗೆ ದೇವಸ್ಥಾನವನ್ನೇ ಕಟ್ಟಿದ್ದಾರೆ.

  • News18 Kannada
  • 2-MIN READ
  • Last Updated :
  • Belgaum, India
  • Share this:

    ಬೆಳಗಾವಿ: ಪುಟ್ಟ ಮಂಟಪದಲ್ಲಿ ಚಂದದ ಪ್ರತಿಮೆಗಳು, ಬಣ್ಣ ಬಣ್ಣದ ಬಲೂನು ಕಟ್ಟಿ ಮಾಡಿದ ಚಂದದ ಅಲಂಕಾರ. ದೇವರ ಮೂರ್ತಿಯಂತೆ  (Father Mother Temple) ಹೀಗೆ ಪ್ರತಿಷ್ಠಾಪಿಸಿದ ಮೂರ್ತಿಗಳ ಹಿಂದಿದೆ ಅಪ್ಪ ಅಮ್ಮನ ಮೇಲಿನ (Parents Love) ಪ್ರೇಮದ ಕಥೆ!


    ಅದೆಷ್ಟೋ ಮಕ್ಕಳು ತಂದೆ ತಾಯಿಗಳ ವೃದ್ಧಾಪ್ಯದಲ್ಲಿ ಅವರ ಜೊತೆ ಚಂದದ ಜೀವನ ಕಳೆಯದೇ ವೃದ್ಧಾಶ್ರಮಕ್ಕೆ ಕಳಿಸೋದು ಹೆಚ್ಚಾಗ್ತಿರೋ ಈ ಕಾಲದಲ್ಲಿ ಮಗನೊಬ್ಬ ಜನ್ಮ ನೀಡಿದವರಿಗೆ ದೇವಸ್ಥಾನವನ್ನೇ ಕಟ್ಟಿದ್ದಾರೆ. ಅಪ್ಪ ಅಮ್ಮನನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಿ ಇತರರಿಗೆ ಆದರ್ಶವಾಗಿದ್ದಾರೆ.


    ಸಮಾಧಿ ಮೇಲೆ ಅಪ್ಪ ಅಮ್ಮನ ಪುತ್ಥಳಿ
    ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ ಸುರೇಶ ತಳವಾರ ಎಂಬುವರು ತಮ್ಮ ಜಮೀನಿನಲ್ಲಿ ಅಗಲಿದ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿದ್ದಾರೆ. ದೇವಸ್ಥಾನ ನಿರ್ಮಿಸಿ ಮಾತಾ ಪಿತರ ಪ್ರೇಮ ಮೆರೆದಿದ್ದಾರೆ. SC STದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿರುವ ಸುರೇಶ ತಳವಾರ ಮತ್ತು ಸಹೋದರರು ಮೊದಲಿನಿಂದಲೂ ತಾಯಿ ತಂದೆ ಮೇಲೆ ಅಪಾರ ಭಕ್ತಿ ಹೊಂದಿದ್ದರು. 20 ವರ್ಷಗಳ ಹಿಂದೆ ಅವರ ತಂದೆ ಸಾವನ್ನಪ್ಪಿದ್ದರು.


    ಸಾವಿರಾರು ಜನರಿಗೆ ಅನ್ನ ಸಂತರ್ಪಣೆ
    ಬಳಿಕ ಕಳೆದ ಎರಡು ವರ್ಷದ ಹಿಂದೆ ಅವರ ತಾಯಿ ತೀರಿ ಹೋಗಿದ್ದರು. ಪ್ರತಿ ವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಈ ವರ್ಷ ತಂದೆ ತಾಯಿಗಳು ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ.


    ಇದನ್ನೂ ಓದಿ: Karnataka Rajyotsava: ಹಾರಿತು 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ!


    ಮಗ ಹೇಳುವುದು ಹೀಗೆ
    "ತಂದೆ ತಾಯಿಗಳ ಆದರ್ಶ ಮತ್ತು ಮಾರ್ಗದರ್ಶನ ಅವರು ನಮ್ಮ ಜೊತೆಗೆ ಇದ್ದರೂ ಇಲ್ಲದ್ದಿದ್ದರೂ ಸಹ ಸದಾ ನಮ್ಮ ಮೇಲೆ ಇರಬೇಕು ಎಂಬ ದೃಷ್ಟಿಯಿಂದ ಅವರ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಎಷ್ಟು ಜನ್ಮ ಎತ್ತಿದರೂ ಹೆತ್ತವರ ಋಣ ತೀರಿಸೋಕಾಗಲ್ಲ. ಯಾವ ಮಕ್ಕಳೂ ತಂದೆ ತಾಯಿಯರನ್ನ ಕಡೆಗಣಿಸಬೇಡಿ" ಎಂದು ಸುರೇಶ್ ಮನವಿ ಮಾಡಿದ್ದಾರೆ.




    ಇದನ್ನೂ ಓದಿ: Toll Price Hike: ದುಪ್ಪಟ್ಟಾಯ್ತು ಟೋಲ್ ಶುಲ್ಕ, ಬರೋಬ್ಬರಿ ಶೇಕಡಾ 100ರಷ್ಟು ಹೆಚ್ಚಳ!


    ಒಟ್ಟಿನಲ್ಲಿ ಹೆತ್ತ ತಂದೆ ತಾಯಿಯನ್ನೆ ಕಡೆಗಣಿಸುವ ಇಂದಿನ ದಿನಗಳಲ್ಲಿ ಹೆತ್ತವರ ನೆನಪಿಗಾಗಿ ದೇವಸ್ಥಾನ ಕಟ್ಟಿಸಿ ಪೂಜಿಸುತ್ತಿರುವದು ನಿಜಕ್ಕೂ ಇತರರಿಗೂ ಮಾದರಿಯಾಗಿದೆ.


    ವರದಿ: ಲೋಹಿತ್, ನ್ಯೂಸ್ 18 ಚಿಕ್ಕೋಡಿ

    Published by:ಗುರುಗಣೇಶ ಡಬ್ಗುಳಿ
    First published: