• Home
  • »
  • News
  • »
  • belagavi
  • »
  • Solar Eclipse 2022: ಗ್ರಹಣ ಟೈಮಲ್ಲಿ ಒನಕೆ ಪವಾಡ! ಬೆಳಗಾವಿಯಲ್ಲಿ ನಡೆದ ಅಚ್ಚರಿ!

Solar Eclipse 2022: ಗ್ರಹಣ ಟೈಮಲ್ಲಿ ಒನಕೆ ಪವಾಡ! ಬೆಳಗಾವಿಯಲ್ಲಿ ನಡೆದ ಅಚ್ಚರಿ!

ನೆಟ್ಟಗೆ ನಿಂತ ಒನಕೆ!

ನೆಟ್ಟಗೆ ನಿಂತ ಒನಕೆ!

Solar Eclipse 2022 Live: ನೀರಲ್ಲಿ ಒನಕೆ ಇಟ್ಟು ಗ್ರಹಣ ಹಿಡಿದಿದೆಯೋ ಇಲ್ಲವೋ ಎಂದು ಪರೀಕ್ಷೆ ನಡೆಸಲಾಗಿದೆ. ನೀರಲ್ಲಿ ಒನಕೆ ಇಟ್ಟು ಪ್ರಯೋಗ ನಡೆಸಲಾಗಿದೆ.

  • News18 Kannada
  • Last Updated :
  • Belgaum, India
  • Share this:

    ಬೆಳಗಾವಿ:  ಸೂರ್ಯಗ್ರಹಣ ಹಿನ್ನೆಲೆಯಲ್ಲಿ (Solar Eclipse 2022 )ವಿವಿಧ ದೇವಸ್ಥಾನಗಳ ದರ್ಶನಗಳನ್ನೇನೋ ನಿರ್ಬಂಧಿಸಲಾಗಿದೆ. ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ (Belegavi Kapileshwara Temple) ನೀರಲ್ಲಿ ಒನಕೆ ಇಟ್ಟು ಗ್ರಹಣ ಹಿಡಿದಿದೆಯೋ ಇಲ್ಲವೋ ಎಂದು ಪರೀಕ್ಷೆ ನಡೆಸಲಾಗಿದೆ. ನೀರಲ್ಲಿ ಒನಕೆ ಇಟ್ಟು ಪ್ರಯೋಗ ನಡೆಸಲಾಗಿದೆ. ಈ ಪ್ರಯೋಗದಲ್ಲಿ ಒನಕೆ ನೀರಲ್ಲಿ ಯಾವುದೇ ಸಪೋರ್ಟ್ ಇಲ್ಲದೇ ನಿಂತಿದೆ. ಗ್ರಹಣ ಬಿಟ್ಟ ಬಳಿಕ ಒನಕೆ (Solar Eclipse 2022 Onake) ಬೀಳುತ್ತದೆ ಎಂದು ಹಲವರು ನಂಬುತ್ತಾರೆ. ಸದ್ಯ ಬೆಳಗಾವಿಯ (Belagavi News) ಕಪಿಲೇಶ್ವರ ಮಂದಿರದಲ್ಲಿ ಈ ಪ್ರಯೋಗ ನಡೆಸಲಾಗಿದೆ.




    ಏನಿದು ಗ್ರಹಣ ಕಾಲದಲ್ಲಿ ಒನಕೆ ಪ್ರಯೋಗ?
    ಗ್ರಹಣ ಸಮಯದಲ್ಲಿ ಒನಕೆ ಇಟ್ಟು ನೋಡುವ ಸಂಪ್ರದಾಯ ಕರ್ನಾಟಕದ ಹಲವು ಭಾಗಗಳಲ್ಲಿ ಕಂಡುಬರುತ್ತದೆ. ಮನೆಯ ಮುಂದಿನ ತುಳಸಿಕಟ್ಟೆ ಬಳಿ ನೀರಿನಿಂದ ತೊಳೆದು ರಂಗೋಲಿ ಹಾಕಲಾಗುತ್ತದೆ. ತಟ್ಟೆಯೊಂದರಲ್ಲಿ ನೀರು ಹಾಕಿ ಅದನ್ನು ಪೂಜಿಸಿ ಅದರರಲ್ಲಿ ಒನಕೆಯನ್ನು ಇರಿಸಲಾಗುತ್ತದೆ. ಗ್ರಹಣ ಕಾಲದಲ್ಲಿ ಈ ಒನಕೆ ಬೀಳದೇ ಹಾಗೇ ನಿಂತಿರುತ್ತದೆ. ಗ್ರಹಣ ಮುಗಿದ ನಂತರ ತನ್ನಿಂದತಾನೇ ಈ ಒನಕೆ ಉರುಳಿ ಬೀಳುತ್ತದೆ ಎಂದು ಗ್ರಾಮಸ್ಥರು ನಂಬಲಾಗುತ್ತದೆ. ಈ ನಂಬಿಕೆ ಬಹು ಹಿಂದಿನಿಂದಲೂ ನಡೆದುಬಂದಿದೆ.


    ಇದನ್ನೂ ಓದಿ: Solar Eclipse Time Checking: ನಿಮ್ಮೂರಲ್ಲಿ ಸೂರ್ಯ ಗ್ರಹಣ ಕಾಣುವ ಸಮಯವನ್ನು ನೀವೇ ಚೆಕ್ ಮಾಡಿ


    ಗ್ರಹಣ ಕಾಲದಲ್ಲಿ ಹೀಗೆ ಒನಕೆಯನ್ನು ನೀರಿನ ತಟ್ಟೆಯಲ್ಲಿಟ್ಟು ಪ್ರಯೋಗ ಮಾಡುವ ಆಚರಣೆ ಮಲೆನಾಡಿನ ಭಾಗಗಳಲ್ಲೂ ಸೇರಿ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತದೆ.


    ಯಾದಗಿರಿ ಜಿಲ್ಲೆಯಲ್ಲಿಯೂ ವಿಶಿಷ್ಟ ಪ್ರಯೋಗ!
    ಯಾದಗಿರಿ ಜಿಲ್ಲೆಯಲ್ಲೂ ಸಹ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನೀರಲ್ಲಿ ಒನಕೆ ಇಟ್ಟು ಹಲವೆಡೆ ಪ್ರಯೋಗ ನಡೆಸಲಾಗಿದೆ. ನೀರಲ್ಲಿ ಒನಕೆ ಇಟ್ಟು ಗ್ರಹಣ ಹಿಡಿದಿರುವ ಬಗ್ಗೆ ಪರೀಕ್ಷೆ ನಡೆಸಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಎಲ್ಹೆರಿ ಗ್ರಾಮದಲ್ಲಿ ಒನಕೆ ನೀರಲ್ಲಿ ಇಟ್ಟು ಪರೀಕ್ಷೆ ನಡೆಸಲಾಗಿದೆ. ಯಾದಗಿರಿ  ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಎಲ್ಹೆರಿ ಗ್ರಾಮದ ರವಿಕುಮಾರ್ ಹಡಪದ್ ಅವರ ಮನೆಯಲ್ಲಿ ಒಣಕೆ ಇಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ಬೆಂಬಲವಿಲ್ಲದೇ ನೀರಲ್ಲಿ ನಿಂತ ಒನೆಕೆ ನೆರೆದವರಲ್ಲಿ ಅಚ್ಚರಿ ಸೃಷ್ಟಿಸಿದೆ. 


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಒಟ್ಟಾರೆ ಕರ್ನಾಟದ ವಿವಿಧ ಪ್ರದೇಶಗಳಲ್ಲಿ ಸೂರ್ಯ ಗ್ರಹಣದ ಆಚರಣೆಗಳನ್ನು ಆಚರಿಸಲಾಗುತ್ತಿದೆ. ವಿವಿಧ ದೇಗುಲಗಳಲ್ಲಿ ದರ್ಶನ ನಿರ್ಬಂಧಿಸಲಾಗಿದೆ.

    Published by:ಗುರುಗಣೇಶ ಡಬ್ಗುಳಿ
    First published: