Sharad Pawar ಮುಂದೆ MES ನಾಡದ್ರೋಹ ಘೋಷಣೆ; ಮತ್ತೆ ಗಡಿ ಕಿರಿಕ್

ಬೆಳಗಾವಿಯಲ್ಲಿ ಬಂದ ಮಹಾರಾಷ್ಟ್ರ ನಾಯಕರ ಮುಂದೆ ಮತ್ತೆ ಗಡಿ ವಿಚಾರ ಕೆದಕಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು  ಮುಂದಾಗಿದ್ದ ಎಂಇಎಸ್ ಕಿಡಿಗೇಡಿಗಳಿಗೆ ಇವತ್ತು ಶರದ್ ಪವಾರ್ ನಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ (ಮೇ. 11):  ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಎಂಇಎಸ್ ಪುಂಡರು ಮತ್ತೆ ನಾಡದ್ರೋಹ ಕೆಲಸಕ್ಕೆ ಮುಂದಾಗಿದ್ದಾರೆ. ಮಹಾರಾಷ್ಟ್ರ ನಾಯಕರು ಎನ್ ಸಿ ಪಿ ಅಧ್ಯಕ್ಷ  ಶರದ್ ಪವಾರ್ ಮುಂದೆಯೇ  ನಾಡದ್ರೋಹ ಘೋಷಣೆ ಕೂಗಿ ಉದ್ದಟತನ ಮೆರೆದಿದ್ದಾರೆ. ಆದರೆ, ಈ ಬಗ್ಗೆ ಮಾತ್ರ ಶರದ್ ಪವಾರ್ (Sharad Pawar) ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಹಿಸಿದ್ದು, ತಮ್ಮ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಆಸಕ್ತಿ ತೋರಲಿಲ್ಲ.

ನಿನ್ನೆ ಇಂದು ಬೆಳಗಾವಿಯಲ್ಲಿ ಶರದ್​ ಪವಾರ್​

2023 ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ,  ಮರಾಠ ಮತಗಳ  ಮೇಲೆ ಕಣ್ಣಿಟ್ಟಿರುವ  ಎನ್ ಸಿ ಪಿ ಅಧ್ಯಕ್ಷ ಶರದ್ ಪವಾರ್ ದಿನಗಳ ಕಾಲ  ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ವಿವಿಧ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿನ್ನೆ ಚಿಕ್ಕೋಡಿಯಲ್ಲಿ ವೀರ ರಾಣಿ  ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಭಾಗಿಯಾಗಿದ್ದು ಇಂದು ಬೆಳಗಾವಿಯಲ್ಲೂ ಸತತ ಕಾರ್ಯಕ್ರಮದಲ್ಲಿ  ಬಿಜಿಯಾಗಿದ್ದರು.  ಚೆನ್ನಮ್ಮನ ವೃತ್ತದಲ್ಲಿ  ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್​​ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ   ಹೂಮಳೆ ಸುರಿಸಿ ಸ್ವಾಗತ  ಮಾಡಿಕೊಂಡರು.

ವಿವಿಧ ಕಾರ್ಯಕ್ರಮದಲ್ಲಿ ಬ್ಯುಸಿಯಾದ ಎನ್​ಸಿಪಿ ನಾಯಕ

ಇದಕ್ಕೂ ಮುನ್ನ  ಮರಾಠ  ಕೋ ಆಪರೇಟಿವ್ ಬ್ಯಾಂಕ್ ನ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬ್ಯಾಂಕ್ ನ ನೂತನ ಕಟ್ಟಡ ಉದ್ಘಾಟಿಸಿ ಶಿವಾಜಿ ಮಹಾರಾಜರ  ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು ಇನ್ನು ಕಾರ್ಯಕ್ರದಲ್ಲಿ ಶರದ್ ಪವಾರ್ ಗೆ  ಎಂಇಎಸ್ ಮುಖಂಡರು ಸನ್ಮಾನ ಮಾಡಿ ಸ್ಮರಣೆ ಸಂಚಿಕೆ ನೀಡಿ ಗೌರವಿಸಿದ್ರು. ಇದೇ ವೇಳೆ ಮಾತನಾಡಿದ ಎಂಇಎಸ್ ಮುಖಂಡ ದೀಪಕ್ ದಳವಿ ಶರದ್ ಪವಾರ್ ಅವರನ್ನು ಹಾಡಿ ಹೊಗಳಿದರು.

:ಇದನ್ನು ಓದಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ದೇಣಿಗೆ ಸಂಗ್ರಹ

ಶರದ್​ ಪವಾರ್​ ಎದುರು ನಾಡದ್ರೋಹ ಘೋಷಣೆ

ಬೆಳಗಾವಿಯಲ್ಲಿ ಎಂಇಎಸ್ ಮುಖಂಡರು ಮತ್ತೆ ನಾಡದ್ರೋಹಿ ಘೋಷಣೆ ಕೂಗಿ ಕಿರಿಕ್ ‌ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಮುಖಂಡ  ಶುಭಂ ಶೆಳಕೆ  ನಾಡ ದ್ರೋಹ ಘೋಷಣೆ  ಕಿರಿಕ್ ಮಾಡಿದರು.  ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದು ಘೋಷಣೆ ಕೂಗಿ ನಾಡದ್ರೋಹ ಕ್ಕೆ ಮುಂದಾದರು. ಇನ್ನುಘೋಷಣೆ ಕೂಗುವ ವೇಳೆ ಸುಮ್ಮನೆ  ನಿಂತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ , ಘೋಷಣೆ ಕೂಗುವವರೆಗೂ ಸುಮ್ಮನೆ ನಿಂತು ಭಾಷಣ ಪ್ರಾರಂಭ ಮಾಡಬಹುದಾ? ಎಂದು ಎಂಇಎಸ್ ಕಾರ್ಯಕರ್ತರನ್ನು ಕೇಳಿದರು.

ಇದನ್ನು ಓದಿ: DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

ಎಂಇಎಸ್​ ಕುರಿತು ತುಟಿಕ್​ ಪಿಟಿಕ್​ ಎನ್ನದ ನಾಯಕ

ನಾಡದ್ರೋಹ ಘೋಷಣೆ ಕುಮ್ಮಕ್ಕು ನೀಡಿದೇ ಇದರ ಬಗ್ಗೆ ಯಾವುದೇ ತುಟಿ ಪಿಟಕ್ ಎನ್ನದೇ ಸುಮ್ಮನೆ ಇದ್ದದ್ದು ಅಚ್ಚರಿಗೆ ಕಾರಣವಾಗಿದೆ.  ಈ ಹಿಂದೆ ಎಂಇಎಸ್ ಮುಖಂಡರಿಗೆ ಶರದ್ ಪವಾರ್ ಬೆಂಬಲ ಇತ್ತು ಆದರೆ ಈಗ ಎಂಇಎಸ್ ಕುರಿತು ರಾಜಕೀಯ ಮಾತನಾಡದೇ ಕೇವಲ ಕೋ ಆಪರೇಟಿವ್ ಬ್ಯಾಂಕ್ , ಸೊಸೈಟಿ, ಖಾಸಗಿ ಕಾರ್ಯಕ್ರಮ ಕುರಿತು ಮಾತನಾಡುತ್ತಾ  ಭಾಷಣ ಮುಗಿಸಿದರು.

ಬೆಳಗಾವಿಯಲ್ಲಿ ಬಂದ ಮಹಾರಾಷ್ಟ್ರ ನಾಯಕರ ಮುಂದೆ ಮತ್ತೆ ಗಡಿ ವಿಚಾರ ಕೆದಕಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು  ಮುಂದಾಗಿದ್ದ ಎಂಇಎಸ್ ಕಿಡಿಗೇಡಿಗಳಿಗೆ ಇವತ್ತು ಶರದ್ ಪವಾರ್ ನಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂಬುದು ಅಚ್ಚರಿ ಸಂಗತಿಯಾಗಿದೆ. ಕರ್ನಾಟಕ ದಲ್ಲಿ ಇದ್ದು ಕೊಂಡು ಮಹಾರಾಷ್ಟ್ರಕ್ಕೆ ಜೈ ಎಂದು ಘೋಷಣೆ ಕೂಗುವ  ನಾಡದ್ರೋಹಿಗಳಿಗೆ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಬೆಳಗಾವಿ ಕನ್ನಡಿಗರ ಒತ್ತಾಯವಾಗಿದೆ.
Published by:Seema R
First published: