Lok Adalat In Belagavi: ಬೆಳಗಾವಿ ಜನರೇ, ನಿಮ್ಮ ಕಾನೂನು ಪ್ರಕರಣ ಪರಿಹರಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ!

ವೈವಾಹಿಕ, ಕೌಟುಂಬಿಕ ಮತ್ತು ಆಸ್ತಿ ಪಾಲು ವಿಭಾಗ, ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳು, ಚೆಕ್ ಬೌನ್ಸ್ ಹಾಗೂ ದಂಡ ಸಂಹಿತೆಯಡಿ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಕಂದಾಯ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಇಲ್ಲಿದೆ ಅವಕಾಶ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗಾವಿ: ಬಹಳ ದಿನಗಳಿಂದ ಪರಿಹಾರ ಕಾಣದೇ ನಿಮ್ಮ ಕಾನೂನು ಪ್ರಕರಣಗಳು ಬಾಕಿಯಿವೆಯೇ?  ಚಿಂತಿಸದಿರಿ! ಬೆಳಗಾವಿಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಬೆಳಗಾವಿ ನಗರದಲ್ಲಿ ಬೃಹತ್ ಲೋಕ ಅದಾಲತ್ ಇದೇ ಜೂ.25 ರಂದು (Lok Adalat In Belagavi) ನಡೆಯಲಿದೆ. ವೈವಾಹಿಕ, ಕೌಟುಂಬಿಕ ಮತ್ತು ಆಸ್ತಿ ಪಾಲು ವಿಭಾಗ, ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಕಂದಾಯ ಪ್ರಕರಣಗಳು ಸೇರಿದಂತೆ ಇತರೆ ಎಲ್ಲ ರೀತಿಯ ರಾಜಿಯಾಗಬಲ್ಲ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ತೆಗೆದುಕೊಂಡು ರಾಜಿ ಸಂಧಾನದ ಮುಖಾಂತರ ಇತ್ಯರ್ಥಪಡಿಸಲು ಲೋಕ ಅದಾಲತ್​ನಲ್ಲಿ (Lok Adalat) ಅವಕಾಶ ಒದಗಿಸಲಾಗಿದೆ.

  ಬೆಳಗಾವಿ ನಗರದ ಚನ್ನಮ್ಮ ವೃತ್ತದ ಬಳಿಯಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕೇಂದ್ರದ ಕಚೇರಿಯ ಆವರಣದಲ್ಲಿ ಲೋಕ ಅದಾಲತ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು‌ ಸಮಿತಿಗಳನ್ನು ಸಂಪರ್ಕಿಸಬಹುದಾಗಿದೆ.

  ಪ್ರಕರಣ ಪರಿಹರಿಸಿಕೊಳ್ಳಲು ಏನು ಮಾಡಬೇಕು?
  ನ್ಯಾಯಾಲಯದಲ್ಲಿ ಚಾಲ್ತಿಯಿರುವ, ಬಾಕಿಯಿರುವ ಪ್ರಕರಣಗಳನ್ನು ಲೋಕ ಅದಾಲತನಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ನ್ಯಾಯಾಲಯದಲ್ಲಿ ವಕೀಲರರ ಮೂಲಕ ದಾವೆದಾರರು ತಿಳಿಸಬೇಕು. ಬಳಿಕ ಎರಡು ಕಡೆಯವರಿಂದ ದಾಖಲೆ ಸಮೇತ ಕಕ್ಷಿದಾರರು ಲೋಕ ಅದಾಲತಕ್ಕೆ ಹಾಜರಾಗಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.

  ಏನಿದು ಲೋಕ ಅದಾಲತ್?
  ಲೋಕ್ ಅದಾಲತ್ ಜನರ ನ್ಯಾಯಾಲಯ ಎಂದೇ ಹೆಸರು ಗಳಿಸಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆ, 1987 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಇದು ಸ್ಥಾಪನೆಗೊಂಡಿದ್ದು ಭಾರತದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ರಚಿಸಲಾಗಿದೆ. ಇದು ಬಾಕಿ ಇರುವ ಪ್ರಕರಣಗಳು ಅಥವಾ ನ್ಯಾಯಾಲಯವು ಇತ್ಯರ್ಥಗೊಳ್ಳುವ ಪೂರ್ವಭಾವಿ ಹಂತದಲ್ಲಿ ಇರುವ ವೇದಿಕೆಯಾಗಿದೆ.

  ಸಿವಿಲ್ ಪ್ರಕರಣಗಳಲ್ಲಿ ಎರಡೂ ಕಡೆಯ ವಾದಿಗಳ ನಡುವೆ ಸಂಧಾನ (Mutual Settlement) ಏರ್ಪಡಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯು ಲೊಕ ಅದಾಲತ್​ಗಳನ್ನು ರಚಿಸಿರುತ್ತದೆ.

  ಇದನ್ನೂ ಓದಿ: Belagavi Mango Mela: ಜೀವನದಲ್ಲೇ ಈ ತಳಿಯ ಮಾವಿನ ಹಣ್ಣನ್ನು ತಿಂದಿರಲಿಲ್ಲ! ಬೆಳಗಾವಿ ಮಾವು ಮೇಳಕ್ಕೆ ಬಂದವರು ಹೀಗಂದಿದ್ದೇಕೆ?

  ಯಾವುದೇ ಕಕ್ಷಿದಾರರು ಲೋಕ ಅದಾಲತ್‌ನ ನಿರ್ಧಾರದಿಂದ ತೃಪ್ತರಾಗದಿದ್ದರೆ ಸೂಕ್ತವಾದ ನ್ಯಾಯವ್ಯಾಪ್ತಿಯ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ದಾವೆ ಹೂಡಲು ಮುಕ್ತರಾಗಿದ್ದಾರೆ.

  ಯಾವ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ?
  ವೈವಾಹಿಕ, ಕೌಟುಂಬಿಕ ಮತ್ತು ಆಸ್ತಿ ಪಾಲು ವಿಭಾಗ, ಬ್ಯಾಂಕ್​ಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಚೆಕ್ ಬೌನ್ಸ್, ಭಾರತ ದಂಡ ಸಂಹಿತೆಯ ರಾಜಿಯಾಗಬಲ್ಲ ಪ್ರಕರಣಗಳು, ಹಣಕಾಸಿನ ದಾವೆಗಳು, ಸಿವಿಲ್ ವ್ಯಾಜ್ಯಗಳು, ಕಂದಾಯ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಪರಿಹಾರ ಮಾಡಿಕೊಳ್ಳಬಹುದಾಗಿದೆ.

  ಇದನ್ನೂ ಓದಿ: World's Cheapest Water Filter: ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸಂಶೋಧಕ

  ಅಷ್ಟೇ ಅಲ್ಲದೇ ಇತರೆ ಎಲ್ಲ ರೀತಿಯ ರಾಜಿಯಾಗಬಲ್ಲ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಲೋಕ ಅದಾಲತ್​ ಅಥವಾ ಜನತಾ ನ್ಯಾಯಾಲಯದ ಮೂಲಕ ಸಾರ್ವಜನಿಕರು ಪರಿಹಾರ ಕಂಡುಕೊಳ್ಳಬಹುದಾಗಿದೆ. 
  Published by:guruganesh bhat
  First published: