ಬೆಳಗಾವಿ : 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಸೇವಾಸಿಂಧು ಆನ್‌ಲೈನ್ ಪೋರ್ಟಲ್ (Seva Sindhu Online Portal) ಮುಖಾಂತರ ಅರ್ಜಿ ಸಲ್ಲಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ (KSRTC) ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಹಾವೇರಿ ವಿಭಾಗಗಳ ಘಟಕಗಳ ವ್ಯಾಪ್ತಿಯ ಬಸ್ ನಿಲ್ದಾಣಗಳ ಪಾಸ್ ಕೌಂಟರ್‌ಗಳಲ್ಲಿ ಮೇ 27 ರಿಂದ ಬಸ್ ಪಾಸ್ (Student Bus Pass) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಅಗತ್ಯ ದಾಖಲೆಗಳು ಮತ್ತು ಹೇಗೆ ಬಸ್ ಪಾಸ್ ಪಡೆಯುವುದು ಎಂಬ ಮಾಹಿತಿ ಇಲ್ಲಿದೆ.
ಬಸ್ ಪಾಸ್ ಪ್ರಕ್ರಿಯೆ
ವಿದ್ಯಾರ್ಥಿಗಳು ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿಬೇಕು. ಸಂಸ್ಥೆಯು ನಿಗದಿ ಪಡಿಸಿದ ಬಸ್ ಪಾಸ್ ಕೌಂಟರ್‌ಗಳಲ್ಲಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಉಚಿತ ಹಾಗೂ ರಿಯಾಯಿತಿ ಪಾಸ್‌ಗಳನ್ನು ಪಡೆಯಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ಗೆ ತೆರಳಲು ಇಲ್ಲಿ ಕ್ಲಿಕ್ ಮಾಡಿ
ಅಗತ್ಯ ದಾಖಲೆಗಳೇನು?
ಹಾಗಾದರೆ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಏನೇನು ದಾಖಲಾತಿಗಳ ಅಗತ್ಯವಿದೆ? ಬಸ್ ಪಾಸ್ ಪಡೆಯಲು ಅಗತ್ಯವಿರುವ ದಾಖಲೆಗಳ ವಿವರ ಇಲ್ಲಿದೆ ನೋಡಿ.
ಖಾಯಂ ವಿಳಾಸ ದಾಖಲೆ ಅಥವಾ ಆಧಾರ್ ಕಾರ್ಡ್
ಶಾಲಾ/ಕಾಲೇಜಿನ 2022-23ನೇ ಸಾಲಿನಲ್ಲಿ ಪ್ರವೇಶ ಪಡೆದುದರ ರಸೀದಿ
ವಿದ್ಯಾರ್ಥಿಗಳು ಈ ಹಿಂದಿನ ವಿಳಾಸ ಬದಲಾವಣೆ ಆಗಿದ್ದಲ್ಲಿ ಅದರ ಕುರಿತು ದಾಖಲೆ ಪತ್ರ.
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯವಾಗಿದೆ.
ವಿದ್ಯಾರ್ಥಿಗಳು ತಮ್ಮ ಪಾಸ್‌ಪೋರ್ಟ್ ಅಳತೆಯ ಫೋಟೋ ಒದಗಿಸಬೇಕು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ
ಹಿಂದಿನ ಸಾಲಿನ ಬಸ್ ಪಾಸ್ ಬಳಕೆಗೆ ಅವಕಾಶ ನೀಡಿದ್ದ ಇಲಾಖೆ ಕೋವಿಡ್ನಿಂದಾಗಿ ಈ ಸಾಲಿನ ಶಾಲಾ ಕಾಲೇಜುಗಳ ಶೈಕ್ಷಣಿಕ ವರ್ಷವು ಬೇಗನೇ ಪ್ರಾರಂಭವಾಗಿತ್ತು. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆ ಉಂಟಾಗಿತು. ಇದನ್ನು ಅರಿತ ಇಲಾಖೆಯು ಪ್ರಕಟಣೆಯ ಮೂಲಕ ಸದರಿ ಹಳೆ ಬಸ್ ಪಾಸ್ ಗಳನ್ನೇ ಇಲ್ಲವೇ ಶಾಲಾ ಗುರುತಿನ ಪತ್ರ ತೋರಿಸಿ ಪ್ರಯಾಣಿಸಲು ಅವಕಾಶ ನೀಡಿತ್ತು.
ಹೆಚ್ಚಿನ ಮಾಹಿತಿಗೆ ಬೇಕಾದರೆ ಹೀಗೆ ಮಾಡಿ
ಪ್ರಸ್ತುತ ಹೊಸ ಬಸ್ ಪಾಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸೇವಾ ಸಿಂಧು ಆನ್‌ಲೈನ್ ಪೋರ್ಟಲ್ನಲ್ಲಿ ಅರ್ಜಿ ಹಾಕಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಸದರಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಮೀಪದ ಸಾರಿಗೆ ಡಿಪೋ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Lok Adalat In Belagavi: ಬೆಳಗಾವಿ ಜನರೇ, ನಿಮ್ಮ ಕಾನೂನು ಪ್ರಕರಣ ಪರಿಹರಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ!
ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ವಿದ್ಯಾರ್ಥಿಗಳು ಆನ್‌ಲೈನ್‌ಲ್ಲಿ ಬಸ್ ಪಾಸ್ ಪಡೆಯಬಹುದು. ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಬಸ್ ಪಾಸ್ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಮೊದಲು ಕೆಎಸ್‌ಆರ್‌ಟಿಸಿ ವೆಬ್ಸೈಟ್ಗೆ ಭೇಟಿ ನೀಡಿ. ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ನಲ್ಲಿ ಕಾಣುವ ವಿದ್ಯಾರ್ಥಿ ಬಸ್‌ಪಾಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನವೀಕರಣ ವಿದ್ಯಾರ್ಥಿ ಪಾಸ್‌ಗಾಗಿ ಅರ್ಜಿ ಎಂಬ ಆಯ್ಕೆಯನ್ನು ಕ್ಲಿಕ್ಕಿಸಿ.
ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಶಾಲೆ, ಕಾಲೇಜುಗಳ ಅಗತ್ಯ ಮಾಹಿತಿ, ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಗಳನ್ನು ಲಗ್ಗತ್ತಿಸಿ.
ನೀವು ಶಾಲೆ ಕಾಲೇಜಿಗೆ ಪ್ರವೇಶ ಪಡೆಯುವಾಗ ಶುಲ್ಕ ಪಾವತಿ ಮಾಡಿದ್ದೀರಿ ಅಲ್ಲವೇ? ಆ ಶುಲ್ಕದ ರಸೀದಿಯನ್ನು ಇಲ್ಲಿ ಅಪ್ಲೋಡ್ ಮಾಡಬೇಕು.
ನೆನಪಿಡಿ, ನಿಮ್ಮ ಪಾಸ್ ಫೋರ್ಟ್ ಫೋಟೊ jpeg/jpg/png/ಫೈಲ್ನಲ್ಲಿಯೇ ಇರಬೇಕು. ಅಲ್ಲದೇ 1 ಎಂಬಿಗಿಂತ ಕಡಿಮೆ ಸೈಜ್ ಹೊಂದಿರಬೇಕು.
ನೀವು ಯಾವ ನಂಬರ್ ಹಾಕಿರುತ್ತೀರೋ ಆ ನಂಬರ್ಗೆ ಒಟಿಪಿ ಬರುತ್ತದೆ. ನಂತರ ಮೆಸೆಜ್ ಸಹ ಬರುತ್ತದೆ.
ಈ ಮೆಸೆಜ್ ಬಂದ ನಂತರ ಕೆಎಸ್‌ಆರ್‌ಟಿಸಿ ಪಾಸ್ ವಿತರಣಾ ಕೇಂದ್ರದಿಂದ ನೀವು ನಿಮ್ಮ ವಿದ್ಯಾರ್ಥಿ ಬಸ್ ಪಾಸ್ ಪಡೆದುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ