Kittur Rani Chennamma: ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳ ಪಾಳುಬಿದ್ದಿದೆ! ಇಲ್ಲಿದೆ ನೋಡಿ ವಿಡಿಯೋ

ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆಯನ್ನು ಕೇವಲ ಕಿತ್ತೂರಿಗಷ್ಟೇ ಸೀಮಿತಗೊಳಿಸಲಾಗಿದೆ. ಸರಕಾರವೂ ಕಿತ್ತೂರನ್ನಷ್ಟೇ ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಿದೆ. ಆದರೆ, ರಾಣಿ ಚೆನ್ನಮ್ಮಳ ಹುಟ್ಟೂರಿನ ಕಥೆ ಅದೆಷ್ಟೋ ಮಂದಿಗೆ ಗೊತ್ತೇ ಇಲ್ಲ ಅನ್ನೋದು ಅಷ್ಟೇ ಸತ್ಯ.

ಕಾಕತಿ ಈಗ ಹೇಗಿದೆ?

"ಕಾಕತಿ ಈಗ ಹೇಗಿದೆ?"

  • Share this:
    ಬೆಳಗಾವಿ: ‘ಕಪ್ಪ ಕೊಡಬೇಕೆ ಕಪ್ಪ.. ನಿಮಗ್ಯಾಕೆ ಕೊಡಬೇಕು ಕಪ್ಪ.. ‘ ಹೀಗಂತ ಬ್ರಿಟಿಷರ ವಿರುದ್ಧ ಘರ್ಜಿಸಿದ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಡಿನ ಹೆಮ್ಮೆಯ ಹೋರಾಟಗಾರ್ತಿ. ಬ್ರಿಟಿಷರ ಅಧಿಕಾರ ದಾಹದ ಮುಂದೆ ಮಂಡಿಯೂರದೇ ಇಡೀ ನಾಡಿನ ಕೀರ್ತಿ ಪತಾಕೆ ಹಾರಿಸಿದ ನಾಡಿನ ಹೆಮ್ಮೆಯ ಹೆಣ್ಮಗಳು. ಇಂತಹ ರಾಣಿಯ ಜೀವನ ಚರಿತ್ರೆಯಲ್ಲಿ ಬಾಲ್ಯದ ಪುಟಗಳೇ ಕಣ್ಮರೆಯಾಗುತ್ತಿರುವುದು ಖೇದಕರ.. ಚೆನ್ಮಮ್ಮ ಜನ್ಮಸ್ಥಳ ಕಾಕತಿ (Kakati) ಈಗಲೂ ಪಾಳುಬಿದ್ದ ಸ್ಥಿತಿಯಲ್ಲಿದೆ ಅಂದ್ರೆ ನೀವು ನಂಬಲೇಬೇಕು. ಅಷ್ಟಕ್ಕೂ ರಾಣಿ ಚೆನ್ನಮ್ಮ (Kittur Rani Chennamma) ಜನಿಸಿದ್ದು ಕಿತ್ತೂರಲ್ಲಲ್ಲ! ಈ ಇತಿಹಾಸವೇ ಅದೆಷ್ಟೋ ಮಂದಿಗೆ ತಿಳಿದೇ ಇಲ್ಲ.. ಹೀಗಾಗಿ ಕಿತ್ತೂರು ರಾಣಿ ಚೆನ್ಮಮ್ಮರ (Kittur Rani Chennamma Birth Place) ಹುಟ್ಟೂರು ಹೇಗಿದೆ? ಇಲ್ಲಿದೆ ಸವಿವರ

    ಕಾಕತಿ ಹೆಸರು ಕೇಳಿದ್ದೀರ?
    ಕಾಕತಿ.. ಬಹುಶಃ ಈ ಹೆಸರೇ ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ. ಈ ಹೆಸರಿಗೂ ನಾಡಿನ ಹೆಮ್ಮೆಯ ಹೋರಾಟಗಾರ್ತಿಗೂ ಕರುಳ ಬಳ್ಳಿಯ ಸಂಬಂಧವಿದೆ. ಯೆಸ್.. ಇದೇ ಕಾಕತಿಯಲ್ಲಾಗಿತ್ತು ಕರುನಾಡಿನ ವೀರ ಹೋರಾಟಗಾರ್ತಿ ಚೆನ್ನಮ್ಮ ಜನಿಸಿದ್ದು. ಪ್ರಸ್ತುತ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿಯೇ 1778ರ ನವೆಂಬರ್ 14ರಂದು ಚೆನ್ನಮ್ಮ, ದೇಸಾಯಿ ಧೂಳಪ್ಪ ಗೌಡರ ದಂಪತಿಯ ಪುತ್ರಿಯಾಗಿ ಜನಿಸಿದರು.

    ಚಿಕ್ಕ ವಯಸ್ಸಲ್ಲೇ ಸಾಧನೆ
    ಚಿಕ್ಕ ವಯಸ್ಸಿನಿಂದಲೇ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದಳು. ಬಳಿಕ 15 ನೇ ವರ್ಷಕ್ಕೆ ಕಿತ್ತೂರಿನ ರಾಜಾ ಮಲ್ಲಸರ್ಜ ಅವರನ್ನು ಮದುವೆಯಾಗಿ ಕಿತ್ತೂರಿನ ಚೆನ್ನಮ್ಮಳಾಗಿ ಬದಲಾದರು.

    ಕಾಕತಿಯಲ್ಲಿ ಕುರುಹುಗಳಷ್ಟೇ ಗುರುತು!
    ಸದ್ಯ ಕಾಕತಿ ಗ್ರಾಮದಲ್ಲಿ ಚೆನ್ನಮ್ಮ ಅವರ ಕುರಿತು ಪ್ರಸ್ತುತವಾಗಿ ಉಳಿದಿರುವ ಕುರುಹು ಎಂದರೇ ಅದು ಕೇವಲ ಪಾಳು ಬಿದ್ದ ದೇಸಾಯಿ ಮನೆತನಕ್ಕೆ ಸೇರಿದ ಬೃಹತ್ ಮನೆ. ಕಾಕತಿಯ ಈ ಮನೆಯಲ್ಲಿಯೇ ಚೆನ್ನಮ್ಮ ಆಟವಾಡಿ ಬೆಳೆದವರು. ಅಲ್ಲಿ ಈಗ ಕೇವಲ ಬಾವಿಯೊಂದು ಮಾತ್ರ ಕಾಣ ಸಿಗುತ್ತಿದ್ದು, ಮನೆಯ ಪಾಳು ಬಿದ್ದ ಗೋಡೆಗಳು ಚೆನ್ನಮ್ಮ ಅವರ ಅಸ್ತಿತ್ವವನ್ನು ಸಾರಿ ಹೇಳುವಂತಿವೆ.

    ಇದನ್ನೂ ಓದಿ: Kittur Rani Chennamma Zoo: ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಹುಲಿ ಸಫಾರಿ! ವಿಡಿಯೋ ನೋಡಿ

    ಕಾಕತಿಗೆ ಕಿತ್ತೂರಿನಷ್ಟು ಪ್ರಾಮುಖ್ಯತೆ ಏಕೆ ನೀಡುತ್ತಿಲ್ಲ?
    ಪ್ರತಿ ವರ್ಷವೂ ಅಕ್ಟೋಬರ್ 23 ರಂದು ಸರಕಾರವೇ ಚೆನ್ನಮ್ಮ ಉತ್ಸವವನ್ನು ಕಾಕತಿಯಲ್ಲಿ ನಡೆಸುತ್ತಿದೆ. ಆದರೆ ಕಿತ್ತೂರಿಗೆ ನೀಡಿದ ಪ್ರಾಮುಖ್ಯತೆಯನ್ನು ಕಾಕತಿಗೆ ನೀಡಿಲ್ಲ ಅನ್ನೋದು ಗ್ರಾಮಸ್ಥರ ಬೇಸರವಾಗಿದೆ.

    ಅವನತಿ ಅಂಚಿನಲ್ಲಿರುವ ವಾಡೆ
    ಕಾಕತಿಯ ಗುಡ್ಡದ ಮೇಲಿರುವ ಬೃಹತ್ ವಾಡೆಯು ಚೆನ್ನಮ್ಮ ವಂಶಜರು ಆಳಿದ ಇತಿಹಾಸವನ್ನು ತಿಳಿಸುತ್ತದೆ. ಮಳೆಗೆ ಸಿಲುಕಿ ಬಹುತೇಕ ವಾಡೆಯು ಅವನತಿ ಅಂಚಿನಲ್ಲಿದೆ. ಅಲ್ಲದೇ ಇಲ್ಲಿಗೆ ಅದೆಷ್ಟೋ ಪ್ರವಾಸಿಗರು ಭೇಟಿ ನೀಡಿ, ವಾಡೆಯ ಕುರಿತು ತಿಳಿದುಕೊಳ್ಳುತ್ತಾರೆ.

    Chennamma Kakati Belagavi ಚೆನ್ನಮ್ಮ ಹುಟ್ಟಿದ ಊರಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)[/caption]

    ಇದನ್ನೂ ಓದಿ: Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ ನೋಡಿ

    ಆದರೆ, ಸರಕಾರ ಕಿತ್ತೂರು ಅಭಿವೃದ್ಧಿಗೆ ನೂರಾರು ಕೋಟಿ ಖರ್ಚಿ ಮಾಡಿದ್ರೆ, ಕಾಕತಿಯಲ್ಲಿ ಕೇವಲ ರಾಣಿ ಚೆನ್ನಮ್ಮರ ಪ್ರತಿಮೆಯೊಂದಷ್ಟೇ ಕಾಣುವಂತಾಗಿದೆ. ಹೀಗಾಗಿ ವೀರ ವನಿತೆ, ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ರಾಣಿಯ ಬಾಲ್ಯದ ಇತಿಹಾಸ ಇನ್ನಷ್ಟೂ ಜನರಿಗೆ ತಿಳಿಸುವ ನಿಟ್ಟಿನಲ್ಲಿ ವಾಡೆ ಹಾಗೂ ಇತರೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕೆಂದು ಇಡೀ ಗ್ರಾಮಸ್ಥರ ಆಗ್ರಹವಾಗಿದೆ.

    ವರದಿ: ಪ್ರಶಾಂತ ಮಲಗಾವಿ, ಬೆಳಗಾವಿ
    Published by:guruganesh bhat
    First published: