• Home
  • »
  • News
  • »
  • belagavi
  • »
  • Karnataka Rajyotsava: ಹಾರಿತು 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ!

Karnataka Rajyotsava: ಹಾರಿತು 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇನ್ನೊಂದೆಡೆ ನಾಡು ನುಡಿ ಭಾಷೆಯ ಉಳಿವಿಗಾಗಿ ಓಟ ಕೈಗೊಂಡಿರೋದು ಗಮನಸೆಳೆದಿದೆ. 19 ವರ್ಷದ ಆನಂದ ಹುಕ್ಕೇರಿ ಅವರು ಕನ್ನಡ ಜಾಗೃತಿಗಾಗಿ ಬರೋಬ್ಬರಿ 1,420 ಕಿಲೋಮೀಟರ್ ಓಡುವ ಮೂಲಕ ಗಮನ ಸೆಳೆದಿದ್ದಾರೆ.

  • Share this:

    ಬೆಳಗಾವಿ: ಆಹಾ! ಕಣ್ಣುಗಳೆರಡು ಸಾಲದು ಕನ್ನಡದ ಧ್ವಜ ನೋಡಲು. ಎಷ್ಟು ದೂರ ಕಣ್ಣು ಹಾಯಿಸಿದರೂ ಅರಿಶಿನ, ಕೆಂಬಣ್ಣದ್ದೇ ಕಲರವ. ಕನ್ನಡ ಧ್ವಜದಡಿ ಎಲ್ಲರೂ ಒಂದೇ ಅನ್ನೋ ಭಾವೈಕ್ಯ. ಎಲ್ಲಿ ಕಂಡರಲ್ಲಿ ಕನ್ನಡದ್ದೇ ಘೋಷವಾಕ್ಯ. ಹೌದು, ಈ ಎಲ್ಲ ದೃಶ್ಯ ಕಂಡುಬಂದಿದ್ದು ಗಡಿನಾಡು ಬೆಳಗಾವಿಯಲ್ಲಿ. 10 ಸಾವಿರ ಅಡಿಯ ಕನ್ನಡದ ಬಾವುಟ (Kannada Flag) ಇಡೀ ಬೆಳಗಾವಿಯ ಚೆನ್ನಮ್ಮ ವೃತ್ತವನ್ನೇ (Belagavi Chennamma Circle) ಆವರಿಸಿತ್ತು. ಅಲ್ಲಿಂದ ಆರಂಭವಾದ ಮೆರವಣಿಗೆಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು (Karnataka Rajyotsava)  ಜೊತೆಯಾದರು. 3200 ಮೀಟರ್ ಉದ್ದ ಧ್ವಜವಿಡಿದು ಸಂಭ್ರಮಿಸಿದರು. ಕನ್ನಡದ ಪರ ಘೋಷವಾಕ್ಯಗಳು ಮಾರ್ದನಿಸಿದವು.


    ಇದನ್ನೂ ಓದಿ: Karnataka Rajyotsava: ಬೆಳಗಾವಿಯಲ್ಲಿ 1 ಲಕ್ಷ ಹೋಳಿಗೆ ತಯಾರಿ, ಎಲ್ಲಾ ಕನ್ನಡಕ್ಕಾಗಿ!


    ಹೀಗೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಲರವ ಕಂಡುಬಂತು. ಕನ್ನಡಿಗರೆಲ್ಲ ಬೃಹತ್ ಬಾವುಟದಡಿ ಐಕ್ಯತೆ ಸಾರಿದರು. ನಾಡಗೀತೆ, ಕನ್ನಡ ಪರ ಘೋಷಣೆಗಳು ಮತ್ತೆ ಮತ್ತೆ ಮೊಳಗಿದವು.


    ಕನ್ನಡಕ್ಕಾಗಿ 1,420 ಕಿಲೋಮೀಟರ್ ಓಡಿದ 19ರ ಯುವಕ
    ಇನ್ನೊಂದೆಡೆ ನಾಡು ನುಡಿ ಭಾಷೆಯ ಉಳಿವಿಗಾಗಿ ಓಟ ಕೈಗೊಂಡಿರೋದು ಗಮನಸೆಳೆದಿದೆ. 19 ವರ್ಷದ ಆನಂದ ಹುಕ್ಕೇರಿ ಅವರು ಕನ್ನಡ ಜಾಗೃತಿಗಾಗಿ ಬರೋಬ್ಬರಿ 1,420 ಕಿಲೋಮೀಟರ್ ಓಡುವ ಮೂಲಕ ಗಮನ ಸೆಳೆದಿದ್ದಾರೆ.


    ಧಾರವಾಡದಿಂದ ಓಟ ಆರಂಭಿಸಿ ಬೆಂಗಳೂರು ತಲುಪಿ ಅಲ್ಲಿಂದ ರಾಮನಗರ, ಮಂಡ್ಯ, ಹಾಸನ, ಶಿವಮೊಗ್ಗ ಮಾರ್ಗವಾಗಿ ಬೆಳಗಾವಿ ತಲುಪಿದ್ದಾರೆ. ದಾರಿಯುದ್ದಕ್ಕೂ ಸಿಕ್ಕ ಕನ್ನಡ ಪರ ಸಂಘಟನೆಗಳ ಬೆಂಬಲ ಇವರ ಬಲವನ್ನು ಹೆಚ್ಚಿಸಿತ್ತು.


    ಇದನ್ನೂ ಓದಿ: Rajyotsava Award: ಸಾಲುಮರದ ನಿಂಗಣ್ಣ, ಭೂಮಾಲಿಕ ಮೋಸ ಮಾಡಿದರೂ ಕೈ ಬಿಡಲಿಲ್ಲ ಪ್ರಕೃತಿ ಮಾತೆ!


    ಮೂಲತಃ ಗೋಕಾಕ್ ತಾಲೂಕಿನವನಾದ ಆನಂದ್ ಕೊನೆಗೂ ತಮ್ಮ ತವರು ಜಿಲ್ಲೆ ಬೆಳಗಾವಿ ಬಂದು ತಲುಪಿದ್ದಾರೆ. ರಾಜ್ಯೋತ್ಸವ ಹಿನ್ನೆಲೆ ಇವರನ್ನು ಕನ್ನಡಾಭಿಮಾನಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ..

    Published by:ಗುರುಗಣೇಶ ಡಬ್ಗುಳಿ
    First published: