ಬೆಳಗಾವಿ: ಕರ್ನಾಟಕದಲ್ಲಿ ಚುನಾವಣೆ (Karnataka Elections 2023) ನಡೆಯಲು ಇನ್ನೇನು ಕೆಲವೇ ಕೆಲವು ದಿನಗಳಿವೆ. ವಿವಿಧ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಹಲವು ಭರವಸೆಗಳನ್ನು ಮತದಾರರಿಗೆ ನೀಡುತ್ತಿವೆ. ಇದೇ ವೇಳೆ ಎರಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು (Karnataka elections 2023 Candidates) ಮದುವೆ ಭಾಗ್ಯ (Marriage) ಘೋಷಿಸಿ ಗಮನ ಸೆಳೆಯುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅರಭಾವಿ ಮತ್ತು ಗೋಕಾಕ ವಿಧಾನಸಭಾ ಕ್ಷೇತ್ರಗಳ ಪಕ್ಷೇತರ ಅಭ್ಯರ್ಥಿಗಳು ಮದುವೆ ಭಾಗ್ಯ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Belagavi To Panaji: ಬೆಳಗಾವಿಯಿಂದ ಪಣಜಿ ಪ್ರಯಾಣ ಇನ್ನಷ್ಟು ಸಲೀಸು!
ಮದುವೆಯಾದವರಿಗೆ ಮದುವೆ ಭಾಗ್ಯ
ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಮತ್ತು ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ.
ಇಬ್ರೂ ಅಣ್ಣ ತಮ್ಮಂದಿರು!
ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಅರಭಾವಿ ಹಾಗೂ ಗೋಕಾಕ್ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆಗೆ ಈ ಅಣ್ಣ ತಮ್ಮಂದಿರು ಇಳಿದಿದ್ದಾರೆ.
ಇದನ್ನೂ ಓದಿ: Belagavi Viral Video: ಇದಪ್ಪಾ ಮಾನವೀಯತೆ! ಜೀವ ಪಣಕ್ಕಿಟ್ಟು ನಾಯಿ ರಕ್ಷಣೆ
ಹೀಗಾಗಿ ಅರಭಾವಿ ಮತ್ತು ಗೋಕಾಕ ಎರಡೂ ಮತಕ್ಷೇತ್ರದ ಮದುವೆಯಾದ ಯುವಕರಿಗೆ ಮದುವೆ ಮಾಡಿಸುವುದಾಗಿ ಈ ಅಭ್ಯರ್ಥಿಗಳು ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ