• Home
  • »
  • News
  • »
  • belagavi
  • »
  • Karnataka Rajyotsava: ಬೆಳಗಾವಿಯಲ್ಲಿ 1 ಲಕ್ಷ ಹೋಳಿಗೆ ತಯಾರಿ, ಎಲ್ಲಾ ಕನ್ನಡಕ್ಕಾಗಿ!

Karnataka Rajyotsava: ಬೆಳಗಾವಿಯಲ್ಲಿ 1 ಲಕ್ಷ ಹೋಳಿಗೆ ತಯಾರಿ, ಎಲ್ಲಾ ಕನ್ನಡಕ್ಕಾಗಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ರಾಜ್ಯೋತ್ಸವ ಮೆರವಣಿಗೆಯಲ್ಲಿ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ಎರಡು ಹೋಳಿಗೆಗಳನ್ನು ನೀಡಲು ನಿರ್ಧರಿಸಲಾಗಿದೆ.

  • Share this:

    ಬೆಳಗಾವಿ: ಬಿಸಿಬಿಸಿ ಪಾಯಸ, ರಾಶಿರಾಶಿ ಹೋಳಿಗೆ. ಭರದಿಂದ ಬೇಕಾದ ಐಟಂ ರೆಡಿ ಮಾಡ್ತಿರೋ ಸಾಲು ಸಾಲು ಬಾಣಸಿಗರು. ಇದೆಲ್ಲವೂ ಕರ್ನಾಟಕ ರಾಜ್ಯೋತ್ಸವಕ್ಕೆ (Karnataka Rajyotsava) ಗಡಿನಾಡು ಬೆಳಗಾವಿಯಲ್ಲಿ ಕಂಡು ಬರ್ತಿರೋ ಸಿದ್ಧತೆಗಳು. ಕನ್ನಡ ರಾಜ್ಯೋತ್ಸವಕ್ಕೆ ನಾಡಿನಾದ್ಯಂತ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನಾಡ ಉತ್ಸವಕ್ಕೆ ಸುಮಾರು 200 ಬಾಣಸಿಗರಿಂದ ಹೋಳಿಗೆ ತಯಾರಾಗ್ತಿದೆ. ಭರ್ಜರಿ ಒಂದು ಲಕ್ಷ ಹೋಳಿಗೆ ತಯಾರಿಯಲ್ಲಿ ಬಾಣಸಿಗರು ತೊಡಗಿಕೊಂಡಿದ್ದಾರೆ. ಬೆಳಗಾವಿಯ (Belagavi) ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋಳಿಗೆ ದಾಸೋಹ ನಡೆಯಲಿದೆ.


    ರಾಜ್ಯೋತ್ಸವ ಮೆರವಣಿಗೆಯಲ್ಲಿ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ಎರಡು ಹೋಳಿಗೆಗಳನ್ನು ನೀಡಲು ನಿರ್ಧರಿಸಲಾಗಿದೆ.


    ಇದನ್ನೂ ಓದಿ: Kannada Tindi Kendra: ಮಾಸ್ತಿ ಪುಳಿಯೊಗರೆ, ಡಿವಿಜಿ ತಟ್ಟೆ ಇಡ್ಲಿ - ಇದು ಕನ್ನಡದ ಕಂಪು ಸೂಸುವ ಬೆಂಗಳೂರಿನ ತಿಂಡಿ ಕೇಂದ್ರ!


    ಹೋಳಿಗೆ ದಾಸೋಹಕ್ಕಾಗಿ ಅನ್ನ ಸಾಂಬಾರು, ಬದನೆಕಾಯಿ ಪಲ್ಯವೂ ತಯಾರಾಗ್ತಿವೆ. ಖುದ್ದು ಶಿವಾಚಾರ್ಯ ಸ್ವಾಮೀಜಿಗಳೇ ಎಲ್ಲವನ್ನೂ ಮುನ್ನಡೆಸುತ್ತಿದ್ದಾರೆ.


    ಇಡೀ ಬೆಳಗಾವಿಗೆ ಬೆಳಗಾವಿಯೇ ಹಬ್ಬದ ವಾತಾವರಣ ಸಂಭ್ರಮದಲ್ಲಿದೆ. ಬಾಣಸಿಗರಂತೂ ಅಡುಗೆ ತಯಾರಿ ಜೊತೆಗೆ ಕನ್ನಡ ತಾಯಿಯ ಸೇವೆಯೂ ಮಾಡ್ತಿರೋದ್ರಿಂದ ತುಂಬಾನೇ ಖುಷಿಯಾಗಿದ್ದಾರೆ.


    ಇದನ್ನೂ ಓದಿ: Success Story: 70 ವರ್ಷದ ಈ ಡಿಪ್ಲೋಮಾ ಸ್ಟೂಡೆಂಟ್ ರಾಜ್ಯಕ್ಕೇ ಫಸ್ಟ್!


    ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ನಾಡಿನಾದ್ಯಂತೆ ಭರದ ಸಿದ್ಧತೆಗಳು ನಡೆಯುತ್ತಿದೆ. ಗಡಿಭಾಗ ಬೆಳಗಾವಿಯಲ್ಲಂತೂ ತುಸು ಈ ಸಂಭ್ರಮ ಹೆಚ್ಚೇ ಇದ್ದು, ಕೆಂಪು, ಹಳದಿಯೇ ಎಲ್ಲೆಂದೆರಲ್ಲಿ ರಾರಾಜಿಸಲಿದೆ.

    Published by:ಗುರುಗಣೇಶ ಡಬ್ಗುಳಿ
    First published: