ಬೆಳಗಾವಿ: ಮಳೆರಾಯನ (Karnataka Rains) ಕೃಪೆಗಾಗಿ ಕತ್ತೆಗಳ (Donkey Marriage) ಮದುವೆ ಮಾಡಿಸಿದ ವಿಭಿನ್ನ ಘಟನೆಯೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ (Belagavi News) ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮಳೆಗಾಗಿ ಕತ್ತೆಗೆ ಮದುವೆ ಮಾಡಲಾಗಿದೆ.
ಕತ್ತೆಗಳು ಅಥವಾ ಕಪ್ಪೆಯ ಮದುವೆ ಮಾಡಿಸಿದರೆ ಮಳೆ ಆಗುತ್ತದೆ ಎಂಬ ಸಾಂಪ್ರದಾಯಿಕ ನಂಬಿಕೆ ಈ ಭಾಗದ ಜನರಲ್ಲಿದೆ. ಸದ್ಯ ಬೆಳಗಾವಿ ಭಾಗದಲ್ಲಿ ಮಳೆಯಾಗದೇ ಬರಗಾಲದ ಆತಂಕ ಸೃಷ್ಟಿಯಾಗಿದೆ. ಮಳೆಯಿಲ್ಲದೇ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.
ಹೀಗಾಗಿ ಸಂಬರಗಿ ಗ್ರಾಮಸ್ಥರು ಕತ್ತೆ ಮದುವೆ ಮಾಡಿ ಮಳೆಗಾಗಿ ಬೇಡಿಕೊಂಡಿದ್ದಾರೆ. ಶಾಸ್ತ್ರ, ಸಂಪ್ರದಾಯದಂತೆ ವಾದ್ಯ, ಮೇಳಗಳೊಂದಿಗೆ ಕತ್ತೆಗಳ ಮದುವೆ ಮಾಡಿದ ಸಂಬರಗಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಂಬಳಿ ಬೀಸಿ ಮಳೆರಾಯನ ಕರೆದ ದಾವಣಗೆರೆ ರೈತರು!
ರೈತರು ಕಂಬಳಿ ಬೀಸಿ ಮಳೆರಾಯನ ಕರೆದಿದ್ದಾರೆ! ಹೌದು, ಇಂತಹ ವಿಶಿಷ್ಟ ಘಟನೆಯೊಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆ ಕುಂಬಳೂರು ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: Belagavi: ಕೇವಲ 5 ತಿಂಗಳಲ್ಲಿ ಕೃಷಿಯಿಂದ 8 ಲಕ್ಷ ಗಳಿಸಿದ ಯುವತಿ
ಮಲೆ ಕುಂಬಳೂರು ಗುಡ್ಡದ ಮೇಲಿರೋ ಕೊಲ್ಲಾಪುರ ಲಕ್ಷ್ಮಿಗೆ ಕಂಬಳಿ ಹಾಸಿ ವಿಶೇಷ ಪೂಜೆ ಮಾಡಲಾಗಿದೆ. ನಂತರ ಪೂರ್ವಕ್ಕೆ ಮುಖ ಮಾಡಿ ಕಂಬಳಿ ಬೀಸಿ ಮಳೆರಾಯನನ್ನು ರೈತರು ಕರೆದಿದ್ದಾರೆ.
ಆಂಜನೇಯ ಸ್ವಾಮಿ ಹೇಳಿಕೆ ಆಧರಿಸಿ ಪೂಜೆ
ಗ್ರಾಮದ ಆಂಜನೇಯ ಸ್ವಾಮಿ ಹೇಳಿಕೆ ಆಧರಿಸಿ ವಿಶೇಷ ಪೂಜೆ ಸಲ್ಲಿಸಿ ಕಂಬಳಿಯಿಂದ ರೈತರು ಮಳೆಯನ್ನು ಕರೆದಿದ್ದಾರೆ.
ವಿಶಿಷ್ಟ ಸಂಪ್ರದಾಯದ ಮೊರೆ
ಮುಂಗಾರು ಮಳೆ ಇಲ್ಲದೇ ಬಿತ್ತನೆಗೆ ಹಿನ್ನೆಡೆಯಾಗಿ ತೋಟಗಳು ಒಣಗುತ್ತಿವೆ. ಕೊಳವೆ ಬಾವಿಗಳು ಬತ್ತಿ ನೀರಾವರಿಗೂ ಅನಾನುಕೂಲವಾಗಿದೆ. ಈ ಕಾರಣ ಧಾರ್ಮಿಕ ನಂಬಿಕೆ ಮೂಲಕ ಮೋಡದತ್ತ ಮುಖ ಮಾಡಿರುವ ರೈತರು ವಿಶಿಷ್ಟ ಸಂಪ್ರದಾಯದ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: Rain: ಬೆಳಗಾವಿಯ ಜನರಿಗೆ ಆಸರೆಯಾದ ಸಜ್ಜಾದ್ ಶೇಖ್, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ
ಮಳೆ ದೇವರನ್ನು ಮೆಚ್ಚಿಸಲು ಗೊಂಬೆಗಳ ಮದುವೆ!
ಬಯಲು ಸೀಮೆಯಲ್ಲಿ ಮಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೇ ಕೃಷಿ ಚಟುವಟಿಕೆಗಳ ಸಹ ನಿಂತು ಹೋಗಿವೆ. ರೈತರ ಮೇಲೆ ವರುಣ ದೇವ ಮುನಿಸಿಕೊಂಡಿದ್ದಾನೆ. ಇದರಿಂದ ಬೇಸತ್ತ ಕೃಷಿಕರು ಮಳೆ ದೇವರ ಕೃಪೆಗಾಗಿ ಗೊಂಬೆಗಳ ಮದುವೆ ಮಾಡಲು ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ