Belagavi: ಕ್ಯಾಮರಾ ಆಕಾರದ ಮನೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

X
ಕ್ಲಿಕ್!

"ಕ್ಲಿಕ್!"

ಅಂದಾಜು 70 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿತವಾಗಿರುವ ಮೂರಂತಸ್ತಿನ ಮನೆ ಕ್ಯಾಮರಾದಲ್ಲಿರುವ ಎಲ್ಲ ವಿಭಾಗಗಳನ್ನೂ ಹೊಂದಿದೆ. ಮನೆಗೆ ’ಕ್ಲಿಕ್ ’ ಎಂದು ನಾಮಕರಣ ಮಾಡಿದ್ದಾರೆ . ಕಿಟಕಿಗಳೇ ಲೆನ್ಸ್ ಆಗಿವೆ! ಇನ್ನೂ ರವಿ ಅವರಿಗೆ ವೃತ್ತಿ ಪ್ರೇಮ ಬೆಂಬಿಡದೆ ಕಾಡುತ್ತಿದೆಯಂತೆ.

  • Share this:

    ಬೆಳಗಾವಿ: ಸ್ವಂತದ್ದೊಂದು ಮನೆ ನಿರ್ಮಿಸಬೇಕು, ಆ ಮನೆ ತಾವು ಅಂದುಕೊಂಡ ವಿನ್ಯಾಸದಲ್ಲೇ ಇರಬೇಕು, ತಮ್ಮ ಕಲ್ಪನೆಯಂತೆಯೇ ಮೂಡಿಬರಬೇಕು ಎಂದು ಮನೆ ಕಟ್ಟಿಸುವ ಎಲ್ಲರೂ ಬಯಸುತ್ತಾರೆ. ಆದರೆ ಕೆಲವರು ಮಾತ್ರ ಅಸಾಧಾರಣ, ಅಪರೂಪ ಹಾಗೂ ವಿಭಿನ್ನವಾದ ಕಲ್ಪನೆಯನ್ನು ಮೂರ್ತಿರೂಪಕ್ಕಿಳಿಸಿ ಮನೆ ನಿರ್ಮಿಸುತ್ತಾರೆ. ಆರ್ಕಿಟಿಕ್ಟ್ ಇಂಜಿನಿಯರ್‌ಗಳು ದಿನದಿಂದ ದಿನಕ್ಕೆ ಹೊಸ ಹೊಸ ವಿನ್ಯಾಸ ಪರಿಚಯಿಸುತ್ತಾರೆ . ಆದರೆ , ಬೆಳಗಾವಿ ನಗರದ (Belagavi) 49 ವಯಸ್ಸಿನ ರವಿ ಹೊಂಗಲ ಅವರು ಕ್ಯಾಮರಾವನ್ನೇ (Camera Home) ನಿರ್ಮಿಸಿಕೊಂಡಿದ್ದಾರೆ!  ಒಂದು ಅಸಾಧ್ಯ ಕಾರ್ಯವನ್ನು ರವಿ ಹೊಂಗಲ ಎನ್ನುವ ಛಾಯಾಗ್ರಾಹಕ ಸಾಧಿಸಿ ಇತರಿಗೆ ಮಾದರಿಯಾಗಿದ್ದಾರೆ.


    ನಾವು ಮಾಡುವ ವೃತ್ತಿಯನ್ನು ಪ್ರೀತಿಸಿ, ಗೌರವಿಸಿದ್ದರೆ ಯಶಸ್ಸು ಶತಸಿದ್ದವಾಗಿರುತ್ತಾರೆ. ಆದರೆ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ವೃತ್ತಿಯನ್ನು ಅಳವಡಿಸಿಕೊಳ್ಳುವುದು ಕಷ್ಟಸಾಧ್ಯ.  ಅದರಲ್ಲಿಯೂ ಮನೆ ನಿರ್ಮಾಣದಲ್ಲಿ ವೃತ್ತಿ ಪ್ರೇಮವನ್ನು ಮೆರೆಯುವುದು ಸುಲಭದ ಕೆಲಸವಲ್ಲ. ಅಂಥದ್ದೊಂದು ಮನೆಯನ್ನು ಬೆಳಗಾವಿ ನಗರದಲ್ಲಿ ನಿರ್ಮಾಣಗೊಂಡು ಬೆಳಗಾವಿ ಹಾಗೂ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿದೆ.


    ಸತತ 10 ವರ್ಷಗಳ ಕನಸು ನನಸು!
    ಕ್ಯಾಮರಾ ಆಕಾರದ ಮನೆ ನಿರ್ಮಾಣವು ರವಿ ಹೊಂಗಲ ಅವರ ಕನಸಾಗಿತ್ತು. ಇವರ ಕನಸಿಗೆ ನೀರೆರೆಯುವ ಕೆಲಸವನ್ನು ಅವರ ಮಡದಿ ಮಾಡಿದ್ದರಿಂದ ಸತತ ಹತ್ತು ವರ್ಷಗಳ ಪರಿಶ್ರಮದಿಂದ ಕ್ಯಾಮೆರಾ ಮನೆಯು ನಿರ್ಮಾಣವಾಗಿದೆ. ಕ್ಯಾಮರಾ ಆಕಾರದ ಮನೆ ಬದಲಾಗುತ್ತಿರುವ ಮನುಷ್ಯನ ಅಭಿರುಚಿಗೆ ತಕ್ಕಂತೆ ಮನೆಗಳ ವಿನ್ಯಾಸಗಳು ಕೂಡ ದಿನೇ ದಿನ ಬದಲಾಗುತ್ತಿವೆ .


    ಪತ್ನಿಯೂ ಫೋಟೊಗ್ರಾಪರ್!
    ಒಂದು ಅಸಾಧ್ಯ ಕಾರ್ಯವನ್ನು ರವಿ ಹೊಂಗಲ ಎನ್ನುವ ಛಾಯಾಗ್ರಾಹಕ ಸಾಧಿಸಿ ಇತರಿಗೆ ಮಾದರಿಯಾಗಿದ್ದಾರೆ. ಛಾಯಾಗ್ರಾಹಕ ವೃತ್ತಿಯ ರವಿ ಅವರ ಪತ್ನಿ ಕೂಡ ಫೊಟೋಗ್ರಾಪರ್ ಆಗಿದ್ದಾರೆ.  ಹೀಗಾಗಿ ವೃತ್ತಿಯೆಡೆಗಿನ ತುಡಿತವನ್ನು ತಮ್ಮ ಮನೆಯ ರೂಪದಲ್ಲೂ ಬಿಂಬಿಸಿದ್ದಾರೆ . ಒಂದು ಬೃಹತ್ ಕ್ಯಾಮರಾದ ಮಾದರಿ ಇಟ್ಟಂತೆ ತೋರುವ ಅವರ ಮನೆಯೀಗ ವಿಶ್ವದ ಗಮನ ಸೆಳೆಯುತ್ತಿದೆ. ಪೋಟೋಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ್ದ ರವಿ ಹೊಂಗಲ ಅವರು ಬೆಳಗಾವಿ ಗ್ರಾಮೀಣ ಭಾಗದಲ್ಲಿ ಫೋಟೋ ಕ್ಲಿಕ್ಕಿಸಿ ಸಂಗ್ರಹಿಸುತ್ತಿದ್ದರು. ಬಳಿಕ ನಗರದ ಕಪಿಲೇಶ್ವರ ಮಂದಿರದ ಬಳಿ ಸ್ವಂತ ಸ್ಟುಡಿಯೋ ಆರಂಭಿಸಿದರು. ಅವರಿಗಿರುವ ಛಾಯಾಗ್ರಹಣ ಪ್ರೀತಿ ಕನಸಿನ ಮನೆ ನಿರ್ಮಾಣದವರೆಗೆ ಕರೆತಂದಿದೆ.


    ಎಷ್ಟು ವೆಚ್ಚವಾಗಿದೆ ಗೊತ್ತೇ?
    ಅಂದಾಜು 70 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿತವಾಗಿರುವ ಮೂರಂತಸ್ತಿನ ಮನೆ ಕ್ಯಾಮರಾದಲ್ಲಿರುವ ಎಲ್ಲ ವಿಭಾಗಗಳನ್ನೂ ಹೊಂದಿದೆ. ಮನೆಗೆ ’ಕ್ಲಿಕ್ ’ ಎಂದು ನಾಮಕರಣ ಮಾಡಿದ್ದಾರೆ . ಕಿಟಕಿಗಳೇ ಲೆನ್ಸ್ ಆಗಿವೆ! ಇನ್ನೂ ರವಿ ಅವರಿಗೆ ವೃತ್ತಿ ಪ್ರೇಮ ಬೆಂಬಿಡದೆ ಕಾಡುತ್ತಿದೆಯಂತೆ.


    ಅನ್ನ, ಬದುಕು, ನೆಮ್ಮದಿ ಕೊಟ್ಟ ಕ್ಯಾಮರಾ ಪ್ರತಿ ಕ್ಷಣವೂ ತಮ್ಮ ಜತೆಯೇ ನೆನಪಾಗಿ ಇರಬೇಕು ಎನ್ನುವುದು ತುಡಿತ ಹೀಗಾಗಿ ಮನೆಯ ಮೂಲಕ ಅವರು ಕ್ಯಾಮರಾಕ್ಕೆ ಗೌರವ ಸಲ್ಲಿಸಿದ್ದಾರೆ. ಅಲ್ಲದೇ ತಾವು ಬಳಸಿದ ಪ್ರತಿಯೊಂದು ಕ್ಯಾಮೆರಾವನ್ನು ಮನೆಯಲ್ಲಿ ಶಿಸ್ತುಬದ್ದವಾಗಿ ಸಂಗ್ರಹಿಸಿ, ಮನೆಯನ್ನು ಕ್ಯಾಮೆರಾ ಮ್ಯೂಸಿಯಂನಂತೆ ಪರಿವರ್ತಿಸಿದ್ದಾರೆ.


    ರವಿ ಹೊಂಗಲ ಕುಟುಂಬ ಏನನ್ನುತ್ತೆ?
    ಕ್ಯಾಮರಾ ಹೋಲುವ ಮನೆ ನಿರ್ಮಿಸಿ ಬಿಟ್ಟರೇ ಒಂದು ವೃತ್ತಿ ಪ್ರೇಮ ಎನ್ನಬಹುದಿತ್ತು. ಆದರೆ ರವಿ ಹೊಂಗಲ ದಂಪತಿಯು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮೂವರು ಮಕ್ಕಳಿಗೂ ಕ್ಯಾಮರಾಗಳ ಹೆಸರಿಟ್ಟಿದ್ದಾರೆ. ಮೂವರು ಗಂಡು ಮಕ್ಕಳಿಗೆ ಕೆನಾನ್, ನಿಕಾನ್ ಮತ್ತು ಎಫ್ಸಾನ್ ಎಂದು ಕ್ಯಾಮರಾ ಹೆಸರುಗಳನ್ನಿಟ್ಟಿದ್ದಾರೆ.


    ಇದನ್ನೂ ಓದಿ: Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ‌ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ


    ರವಿ ಹೊಂಗಲ ದಂಪತಿಗಳು ಏನು ಹೇಳುತ್ತಾರೆ?
    ಸ್ಟುಡಿಯೋಗಳಲ್ಲಿ ಬಳಸುವ ಪ್ರತಿಯೊಂದು ವಸ್ತುಗಳನ್ನೂ ರವಿ ಹೊಂಗಲ ಮನೆಯಲ್ಲಿ ಅಲಂಕಾರಿಕ ವಸ್ತುಗಳಾಗಿವೆ. ಛಾಯಾಗ್ರಾಹಕ ವೃತ್ತಿಯಲ್ಲಿ ಪೆನ್‌ಡ್ರೈವ್ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮನೆಯ ಬಾಗಿಲಿನಲ್ಲಿ ಸೋನಿ ಎಂಬ ಪೆನ್ ಡ್ರೈವ್, ಮನೆಯ ಮುಂಭಾಗದಲ್ಲಿ ಮೆಮೊರಿ ಕಾರ್ಡ್​ ಕ್ಯಾಮರಾದ ಪ್ರತಿಯೊಂದು ಚಿಹ್ನೆಗಳನ್ನು ಬಳಸುವ ಮೂಲಕ ಮನೆಯನ್ನು ಮತ್ತಷ್ಟು ಆಕರ್ಷಿಕವಾಗಿಸಿದ್ದಾರೆ.


    ರವಿ ಹೊಂಗಲ ಅವರ ಸಂಪರ್ಕ ಸಂಖ್ಯೆ:  94803 30300


    Camera Shaped House Belagavi
    ಕ್ಯಾಮರಾ ಆಕಾರದ ಮನೆ ನೋಡಲು ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಇದನ್ನೂ ಓದಿ: Belagavi: ಕನಸಲ್ಲ, ನಿಜ! ಇದು ಸರ್ಕಾರಿ ಕಚೇರಿ ಅಂದ್ರೆ ನಂಬಿಕೆಯೇ ಬರಲ್ಲ! ಬೆಳಗಾವಿಯಲ್ಲೊಂದು ಮಾದರಿ ಆಫೀಸ್


    ಕೇವಲ ಮನೆಯೊಂದೇ ಕ್ಯಾಮರಾ ಆಕಾರದಲ್ಲಿರದೇ ಮನೆಯ ಟೆರಸ್‌ನ್ನು ಬೃಂದಾವನವಾಗಿ ಮಾರ್ಪಡಿಸಿ ರಾತ್ರಿ ಹೊತ್ತು ಕುಟುಂಬದವರು ಎಲ್ಲರೂ ಕೂತು ಕಾಲ ಕಳೆಯುತ್ತಾರೆ. ಅಲ್ಲದೇ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ, ಟೆರಸ್ ಇವರ ಸಭಾಂಗಣವಾಗಿ ಅಷ್ಟು ಸುಂದರವಾಗಿ ಟೆರಸ್‌ನ್ನು ಬೃಂದಾವನವಾಗಿ ಪರಿವರ್ತಿಸಿದ್ದಾರೆ.


    ವರದಿ: ಪ್ರಶಾಂತ್ ಮಲಗಾಂವಿ, ಬೆಳಗಾವಿ

    Published by:guruganesh bhat
    First published: