Belagavi Police Museum: ಬೆಳಗಾವಿ ಪೊಲೀಸ್ ಮ್ಯೂಸಿಯಂ ನೋಡಿದ್ದೀರಾ? ವಿಡಿಯೋ ನೋಡಿ!

X
ಬೆಳಗಾವಿ ಪೊಲೀಸ್ ಮ್ಯೂಸಿಯಂ

"ಬೆಳಗಾವಿ ಪೊಲೀಸ್ ಮ್ಯೂಸಿಯಂ"

ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆ ಬಳಸುತ್ತಿದ್ದ ಉಪಕರಣಗಳು, ರಕ್ಷಣಾ ಪರಿಕರಗಳು, ಗ್ರೆನೇಡ್‌ಗಳು. ಹಳೆಯ ಕೈ ಕೋಳ. ಪೊಲೀಸ್ ಹ್ಯಾಟ್, ಹಳೆಯ ಲಾಠಿ, ಜಾಕೆಟ್, ಪೊಲೀಸ್ ಬ್ಯಾಂಡ್‌ನಲ್ಲಿ ಈ ಹಿಂದೆ ಬಳಸುತ್ತಿದ್ದ ಬೃಹದಾಕಾರದ ವಾದ್ಯ ವೃಂದಗಳು, ಮೆಟಲ್ ಡಿಟೆಕ್ಟರ್..ಹೀಗೆ ಏನೆನೆಲ್ಲಾ ಇವೆ ಎಂದರೆ..

ಮುಂದೆ ಓದಿ ...
  • Share this:

ಬೆಳಗಾವಿ: ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆಗೆ ತನ್ನದೇ ಆದ ಇತಿಹಾಸವಿದೆ. ಹಲವು ಚಾಲೆಂಜಿಂಗ್ ಪ್ರಕರಣಗಳನ್ನು ಬೇಧಿಸಿರುವ ಕರ್ನಾಟಕ ಪೊಲೀಸರು ಕಾಲಕಾಲಕ್ಕೆ ತನಿಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಐವತ್ತು ವರ್ಷಗಳ ಹಿಂದೆ ಇದ್ದ ಪೊಲೀಸ್ ಇಲಾಖೆಗೂ ಈಗಿನ‌ ಪೊಲೀಸ್ ಇಲಾಖೆಗೂ (Police Department) ಅಜಗಜಾಂತರ ವ್ಯತ್ಯಾಸವಿದೆ. ಈ ಹಿಂದೆ ಪೊಲೀಸರು ಗಲಭೆ ನಿಯಂತ್ರಣಕ್ಕೆ, ಅಪರಾಧ ಬೇಧಿಸಲು ಬಳಸುತ್ತಿದ್ದ ಉಪಕರಣಗಳು, ಆಗಿನ ಪೊಲೀಸ್ ಸಮವಸ್ತ್ರ, ಪೊಲೀಸ್ ಬ್ಯಾಂಡ್ ಹೇಗಿತ್ತು ಎಂಬ ಕುತೂಹಲ ಎಲ್ಲರಿಗೂ ಇದೆ. ರಾಜ್ಯ ಪೊಲೀಸ್ ಇಲಾಖೆ‌ ನಡೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಬೆಳಗಾವಿಯ ಜಿಲ್ಲಾ ಪೊಲೀಸ್ ಇಲಾಖೆ ಮ್ಯೂಸಿಯಂ (Belagavi Police Museum) ನಿರ್ಮಾಣ ಮಾಡಿದ್ದಾರೆ.


ಅಪರಾಧ ಪತ್ತೆ, ಗಲಭೆ ನಿಯಂತ್ರಣಕ್ಕೆ ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆ ಬಳಸುತ್ತಿದ್ದ ಉಪಕರಣಗಳು, ರಕ್ಷಣಾ ಪರಿಕರಗಳು, ಗ್ರೆನೇಡ್‌ಗಳು. ಹಳೆಯ ಕೈ ಕೋಳ. ಪೊಲೀಸ್ ಹ್ಯಾಟ್, ಹಳೆಯ ಲಾಠಿ, ಜಾಕೆಟ್, ಪೊಲೀಸ್ ಬ್ಯಾಂಡ್‌ನಲ್ಲಿ ಈ ಹಿಂದೆ ಬಳಸುತ್ತಿದ್ದ ಬೃಹದಾಕಾರದ ವಾದ್ಯ ವೃಂದಗಳು, ಮೆಟಲ್ ಡಿಟೆಕ್ಟರ್,  ಎಫ್‌ಎಸ್‌ಎಲ್ ಹಾಗೂ ಇನ್ವೆಸ್ಟಿಗೇಷನ್ ಕಿಟ್​ಗಳನ್ನು ಇರಿಸಲಾಗಿದೆ.  1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ವೆಹಿಕಲ್ ಸಹ ಇಲ್ಲಿದೆ.


ಎಲ್ಲಿದೆ ಈ ಮ್ಯೂಸಿಯಂ?
ಅಂದಹಾಗೆ ಈ ಎಲ್ಲಾ ವಸ್ತುಗಳು ಇರೋದು ಬೆಳಗಾವಿಯ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ನಿರ್ಮಿಸಿರುವ ಪೊಲೀಸ್ ಮ್ಯೂಸಿಯಂನಲ್ಲಿ. ಇದು ಕುಂದಾನಗರಿ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಮ್ಯೂಸಿಯಂ ಸ್ಥಾಪಿಸಲಾಗಿದೆ.


ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂಬ ಪರಿಕಲ್ಪನೆಯೊಂದಿಗೆ ಬೆಳಗಾವಿಯ ನಿರ್ಗಮಿತ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಬೆಳಗಾವಿಯಲ್ಲಿರುವ ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಪಡೆದು‌ ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ.


ಇದನ್ನೂ ಓದಿ: Belagavi: ಈ ಸರ್ಕಾರಿ ಶಾಲೇಲಿ ಕಲಿಯಲು ಪುಣ್ಯ ಮಾಡಿರಬೇಕು! ಬೆಳಗಾವಿ ಶಾಲೆಯ ವಿಡಿಯೋ ನೋಡಿ

ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಪ್ರಯೋಜನವಾಗಲಿದೆ
ಇನ್ನು ಈ ಕುರಿತು ಮಾತನಾಡಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ, 'ಬೆಳಗಾವಿ ಹಳೆಯ ಜಿಲ್ಲೆ. ಬ್ರಿಟಿಷರ ಕಾಲದಲ್ಲಿಯೂ ಬೆಳಗಾವಿ ಜಿಲ್ಲಾ ಕೇಂದ್ರವಾಗಿತ್ತು‌. ಇಲ್ಲಿರುವ ಪೊಲೀಸ್ ಇಲಾಖೆಗೆ 120 ವರ್ಷಗಳ ಇತಿಹಾಸವಿದೆ. ಈ ಹಿಂದಿನ ಇತಿಹಾಸ ಹಾಗೂ ವಾಸ್ತವ, 120 ವರ್ಷಗಳ ಇತಿಹಾಸದಲ್ಲಿ ಆದ ಬದಲಾವಣೆ ಬಗ್ಗೆ ಜನರಿಗೆ ತಿಳಿಹೇಳುವ ಸಣ್ಣ ಪ್ರಯತ್ನವೇ‌ ಪೊಲೀಸ್ ವಸ್ತು ಸಂಗ್ರಹಾಲಯ. ಈ ಪೊಲೀಸ್ ಮ್ಯೂಸಿಯಂನಿಂದ ಮುಂಬರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೂ ಅನುಕೂಲವಾಗುತ್ತೆ ಎಂದರು.


Police Commissioner Office Belagavi
ಪೊಲೀಸ್ ಮ್ಯೂಸಿಯಂಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


ಇನ್ನು ಈ ವಸ್ತು ಸಂಗ್ರಹಾಲಯ ಎದುರು 1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ಬಸ್ ಸಹ ಇಡಲಾಗಿದೆ. ಯಾವುದಾದರೂ ಪೊಲೀಸ್ ವಾಹನ ರಿಪೇರಿ ಇದ್ರೆ ಆ ಸ್ಥಳಕ್ಕೆ ಹೋಗಿ ವಾಹನ ರಿಪೇರಿ ಮಾಡುವ ಕೆಲಸಕ್ಕೆ ಈ ವಾಹನ ಬಳಸಲಾಗುತ್ತಿತ್ತಂತೆ.


ಇದನ್ನೂ ಓದಿ: Vijayapura: ಬದುಕು ಬದಲಿಸಿದ ಕೊರೊನಾ! ಲಕ್ಷ ಲಕ್ಷ ಸಂಪಾದಿಸುತ್ತಿರುವ ವಿಜಯಪುರ ಯುವಕ


ಶಾಲೆಯ ವಿದ್ಯಾರ್ಥಿಗಳಿಗೂ ಸಿಗಲಿದೆ ಅವಕಾಶ
ಇನ್ನು ಪೊಲೀಸ್ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡ್ತೀವಿ ಎಂದು ಬೆಳಗಾವಿ ನಿರ್ಗಮಿತ ಎಸ್‌ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

top videos
    First published: