Belagavi News: ವಿಶೇಷ ಚೇತನ ಅಭ್ಯರ್ಥಿಗಳೇ, ಸ್ವಯಂ ಉದ್ಯೋಗ ಆರಂಭಿಸಿ, ಈ ಯೋಜನೆಗೆ ಅರ್ಜಿ ಹಾಕಿ
ವಿಶೇಷ ಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳನ್ನು ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅಗತ್ಯ ದಾಖಲಾತಿಗಳು ಏನು? ಹೇಗೆ ಅರ್ಜಿ ಸಲ್ಲಿಸುವುದು? ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ, ವಿಳಾಸ ಯಾವುದು? ಇಲ್ಲಿದೆ ಎಲ್ಲ ವಿವರ...
ಬೆಳಗಾವಿ : ಪ್ರಸಕ್ತ 2022-23 ನೇ ಸಾಲಿಗೆ ಇಲಾಖೆಯ ಹೊಲಿಗೆ ಯಂತ್ರ ಯೋಜನೆಯಡಿ ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಶ್ರವಣ ದೋಷವುಳ್ಳ ವಿಶೇಷ ಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ (Self Employment) ಹೊಲಿಗೆ ಯಂತ್ರಗಳನ್ನು (Sewing Machine) ಒದಗಿಸುವ ನಿಟ್ಟಿನಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಥವಾ ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ದ್ವಿ ಪ್ರತಿಯಲ್ಲಿ ಮ್ಯಾನುವಲ್ ಅರ್ಜಿಯನ್ನು ಜುಲೈ 30, 2022 ರೊಳಗಾಗಿ ಬೆಳಗಾವಿ ಜಿಲ್ಲೆಯ (Belagavi News) ಆಯಾ ತಾಲೂಕುಗಳ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಬಹುದಾಗಿದೆ.
ತಡವಾಗಿ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹಾಗಾದರೆ ಅಗತ್ಯ ದಾಖಲಾತಿಗಳು ಏನು? ಹೇಗೆ ಅರ್ಜಿ ಸಲ್ಲಿಸುವುದು? ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ, ವಿಳಾಸ ಯಾವುದು? ಇಲ್ಲಿದೆ ಎಲ್ಲ ವಿವರ.
ಲಗತ್ತಿಸಬೇಕಾದ ದಾಖಲಾತಿಗಳು ವಿಕಲಚೇತನರ ಯು.ಡಿ.ಐ.ಡಿ. ಕಾರ್ಡ್ (ಕನಿಷ್ಠ ಶೇ.40 ರಷ್ಟು ಅಂಗವಿಕಲತೆ), ತಹಸೀಲ್ದಾರರ್ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಬಗ್ಗೆ ಪ್ರಮಾಣ ಪತ್ರ (ಅಂಕ ಪಟ್ಟಿ) ಆದಾಯ ಮತ್ತು ಜಾತಿ ಪ್ರಮಾಣ ಪತ್ರ. ವೃತ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ. ಯಾವುದೇ ಮೂಲದಿಂದ ಈ ಸೌಲಭ್ಯ ಪಡೆದಿರುವುದಿಲ್ಲವೆಂಬ ಬಗ್ಗೆ ನೋಟರಿಯಿಂದ ದೃಢೀಕರಿಸಿದ ರೂ. 100/-ಗಳ ಬಾಂಡ್.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು (ಎಂ.ಆರ್.ಡಬ್ಲ್ಯೂ) ಅಥವಾ ಕಛೇರಿ ದೂರವಾಣಿ ಸಂಖ್ಯೆ: 0831-2476096 ಅಥವಾ 0831-2476097 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.