Belagavi News: ಸಾಲ, ಸಹಾಯಧನ ಬೇಕೇ? ಈ ಯೋಜನೆಯಡಿ ಅರ್ಜಿ ಹಾಕಿ

“ಕಾಯಕ ಕಿರಣ” ಹಾಗೂ “ಸ್ವ ಸಹಾಯ ಸಂಘಗಳಿಗೆ ಉತ್ತೇಜನ” ಯೋಜನೆಯಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಇಚ್ಛಿಸುವ ವೀರಶೈವ ಲಿಂಗಾಯತ  ಸಮುದಾಯದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಬೆಳಗಾವಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ 2022-23 ನೇ ಸಾಲಿನ “ಕಾಯಕ ಕಿರಣ” ಹಾಗೂ “ಸ್ವ ಸಹಾಯ ಸಂಘಗಳಿಗೆ ಉತ್ತೇಜನ” ಯೋಜನೆಯಡಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಇಚ್ಛಿಸುವ ವೀರಶೈವ ಲಿಂಗಾಯತ  ಸಮುದಾಯದ (Veerashaiva Lingayat Community) ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ವೀರಶೈವ ಲಿಂಗಾಯತ ಸಮುದಾಯದ ಸ್ವ ಸಹಾಯ ಗುಂಪುಗಳ ಗರಿಷ್ಠ 15 ಸದಸ್ಯರಿಗೆ ತಲಾ 5 ಸಾವಿರ ರೂ. ಸಹಾಯಧನ ಹಾಗೂ 10 ಸಾವಿರ ರೂ. ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ಪ್ರತಿ ಗುಂಪಿಗೆ 25 ಸಾವಿರ ರೂ. ಸಹಾಯಧನ ಹಾಗೂ 1.5 ಲಕ್ಷ‌ ರೂ.ಗಳ ಸಾಲ ಒಟ್ಟು 2.25 ರೂ. ದೊರೆಯಲಿದೆ.

  ಅರ್ಜಿ ಸಲ್ಲಿಸಲು ಅರ್ಹತೆಗಳು ಹೀಗಿವೆ
  ಅರ್ಜಿದಾರರು ಪ್ರವರ್ಗ-3ಬಿ ವರ್ಗಕ್ಕೆ ಸೇರಿದವರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರ ರೂ. ಹಾಗೂ ಪಟ್ಟಣ ಪ್ರದೇಶದವರಿಗೆ 1.20 ಲಕ್ಷ ರೂ. ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

  ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಕಾಯಕ ಕಿರಣ ಯೋಜನೆ ಸೌಲಭ್ಯ ಪಡೆಯಲು ವೃತ್ತಿ ಕಸುಬುದಾರರು ಹಾಗೂ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಗರಿಷ್ಠ 1.00 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

  ಹೀಗೆ ವಿಂಗಡಿಸಲಾಗುತ್ತೆ
  ಇದರಲ್ಲಿ 50 ಸಾವಿರ ರೂ.ಗಳವರೆಗಿನ ಘಟಕ ವೆಚ್ಛದ ಆರ್ಥಿಕ ಚಟುವಟಿಕೆಗಳಿಗೆ ಶೇ. 20 ರಷ್ಟು ಗರಿಷ್ಟ 10 ಸಾವಿರ ರೂ.ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ. 80ರಷ್ಟು ಗರಿಷ್ಟ 40 ಸಾವಿರ ರೂ.ಗಳನ್ನು ಶೇ.2ರ ಬಡ್ಡಿದರದಲ್ಲಿ ಸಾಲ ಒಳಗೊಂಡಿರುತ್ತದೆ. 50 ಸಾವಿರ ರೂ. ರಿಂದ 1 ಲಕ್ಷ ರೂ.ಗಳವರೆಗಿನ ಘಟಕ ವೆಚ್ಛದ  ಆರ್ಥಿಕ ಚಟುವಟಿಕೆಗಳಿಗೆ ಶೇ.20ರಷ್ಟು ಸಹಾಯಧನ ಉಳಿಕೆ ಶೇ.80ರಷ್ಟು ಗರಿಷ್ಠ 80 ಸಾವಿರ ರೂ. ನಾಲ್ಕನೇ ಒಂದು ಭಾಗವನ್ನು ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.

  ಇವರು ಅರ್ಜಿ ಸಲ್ಲಿಸಬೇಡಿ
  ಕಳೆದ ಮೂರು ವರ್ಷದಿಂದ ಸರ್ಕಾರದ ಯಾವುದಾದರೂ ನಿಗಮದ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. 

  ಇದನ್ನೂ ಓದಿ: Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ‌ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ

  ಅರ್ಜಿ ಎಲ್ಲಿ ಸಿಗುತ್ತೆ?
  ಸಮುದಾಯದ ಫಲಾಪೇಕ್ಷಿಗಳ ಅರ್ಜಿಯನ್ನು ನಿಗಮದ ವೆಬ್‌ಸೈಟ್​ನಿಂದ ಅರ್ಜಿಗಳನ್ನು  ಡೌನ್​ಲೋಡ್ ಮಾಡಬಹುದು. ಅರ್ಜಿ ಡೌನ್​ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

  ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ತಲುಪಿಸಿ
  ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಕಛೇರಿ ಬೆಳಗಾವಿ ಇಲ್ಲಿಗೆ ಜುಲೈ 28 2022 ರೊಳಗಾಗಿ ಅರ್ಜಿ ಸಲ್ಲಿಸಬಹುದು.

  ಇದನ್ನೂ ಓದಿ: Belagavi: ಕ್ಯಾಮರಾ ಆಕಾರದ ಮನೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
  ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆ 0831-2402163 ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

  ವರದಿ: ಪ್ರಶಾಂತ ಮಲಗಾಂವಿ, ಬೆಳಗಾವಿ
  Published by:guruganesh bhat
  First published: