Belagavi Power Cut: ಬೆಳಗಾವಿಯಲ್ಲಿ ಇರಲ್ಲ ಕರೆಂಟ್! ಯಾವ ದಿನ ಕೈಕೊಡಲಿದೆ ಚೆಕ್ ಮಾಡಿ

ವಿದ್ಯುತ್ ವ್ಯತ್ಯಯ ಆಗಲಿರುವ ಪ್ರದೇಶಗಳು ಯಾವುವು? ಇಲ್ಲಿದೆ ವಿದ್ಯುತ್ ಕಡಿತ ಉಂಟಾಗಲಿರುವ ಪ್ರದೇಶಗಳ ಪಟ್ಟಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಳಗಾವಿ : ಮಳೆಗಾಲಕ್ಕೆ ದಿನಗಣನೆ ಆರಂಭವಾಗಿದೆ. ಮಳೆಗಾಲದ ತಯಾರಿಯಲ್ಲಿ ಎಲ್ಲರೂ ನಿರತರಾಗಿದ್ದಾರೆ. ಅದೇ ರೀತಿ ವಿದ್ಯುತ್ ಇಲಾಖೆಯು ಈಗಿನಿಂದಲೇ ಮಳೆಗಾಲಕ್ಕಾಗಿ ವಿವಿಧ ತಯಾರಿಗಳನ್ನು ಆರಂಭಿಸಿದೆ. ಹೀಗಾಗಿ ರಾಜ್ಯದ ವಿವಿಧ  ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಇದೇ ರೀತಿ ಬೆಳಗಾವಿ ನಗರದಲ್ಲೂ ಕಾಮಗಾರಿ ಒಂದನ್ನು ಪೂರ್ಣಗೊಳಿಸುವ ಉದ್ದೇಶದಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಬೆಳಗಾವಿ ನಗರದ ನಿವಾಸಿಗಳು ತಿಳಿದಿರಲೇಬೇಕಾದ ಮಾಹಿತಿ (Belagavi News) ಇದು.  ಬೆಳಗಾವಿ ನಗರದ ಯಾವ ಭಾಗದಲ್ಲಿ ವಿದ್ಯುತ್ ಕಡಿತ (Belagavi Power Cut) ಉಂಟಾಗಲಿದೆ? ಯಾವಾಗ ವಿದ್ಯುತ್ ಇಲ್ಲವಾಗುತ್ತೆ? ಎಲ್ಲ ಮಾಹಿತಿ ಇಲ್ಲಿದೆ ನೋಡಿ. 

  ಬೆಳಗಾವಿ ನಗರದ ಕೆಲ ಪ್ರದೇಶಗಳಲ್ಲಿ ಜೂನ್ 25 ರಂದು ಮುಂಜಾನೆ 6 ಗಂಟೆಯಿಂದ ಜೂನ್ 26 ಮುಂಜಾನೆ 8 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

  ಬೆಳಗಾವಿಯ ಯಾವ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ?
  ಬೆಳಗಾವಿಯಲ್ಲಿ ಜೂನ್ 25 ರಂದು ಮುಂಜಾನೆ 6 ಗಂಟೆಯಿಂದ ಜೂನ್ 26 ಮುಂಜಾನೆ 8 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿರುವ ಪ್ರದೇಶಗಳು ಯಾವುವು? ಇಲ್ಲಿದೆ ವಿದ್ಯುತ್ ಕಡಿತ ಉಂಟಾಗಲಿರುವ ಪ್ರದೇಶಗಳ ಪಟ್ಟಿ.

  ಖಾನಾಪೂರ ರಸ್ತೆ, ಉದ್ಯಮಬಾಗ, ಇಂಡಸ್ಟ್ರಿಯಲ್ ಏರಿಯಾ, ಗುರುಪ್ರಸಾದ ಕಾಲೋನಿ, ರಾಣಿ ಚೆನ್ನಮ್ಮಾ ನಗರ, 3ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‌ಚಂದ್ರ ಕಾಲೋನಿ, ಉತ್ಸವ ಹೊಟೇಲ್, ಇಂಡಸ್ಟ್ರೀಯಲ್ ಏರಿಯಾ, ಜೆ.ಆಯ್.ಟಿ. ದೇವೇಂದ್ರ ನಗರ, ಮಹಾವೀರ ನಗರ, ಖಾನಾಪುರ ರಸ್ತೆ, ಉದ್ಯಮಬಾಗ, ಸಮೇದ ನಗರ ಜ್ಞಾನ ಪ್ರಮೋದ ಶಾಲೆ ಹತ್ತಿರ, ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯಾನಂದ ಕಾಲೋನಿ, ಡಿಪ್ಹೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾಗಳಲ್ಲಿ ಜೂನ್ 25 ರಂದು ಮುಂಜಾನೆ 6 ಗಂಟೆಯಿಂದ ಜೂನ್ 26 ಮುಂಜಾನೆ 8 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

  ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

  ಏನು ಕಾರಣ? ಏಕೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ?
  ಬಹು ಸರ್ಕ್ಯೂಟ್ ಟವರ್‌ನ್ನು ನಿರ್ಮಿಸುವ ಮೂಲಕ 220, 110 ಕೆವಿ ಸ್ವೀಕರಣಾ ಕೇಂದ್ರ ಇಂಡಾಲ, ಬೆಳಗಾವಿಯಿಂದ ಮಚ್ಚೆಯಲ್ಲಿ 110, 33, 11 ಕೆವಿ ಉಪ ಕೇಂದ್ರವರೆಗೆ 100 ಕೆವಿ ಎರಡನೇ ಸರ್ಕ್ಯೂಟ್ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

  ಇದನ್ನೂ ಓದಿ: Belagavi: ಕ್ಯಾಮರಾ ಆಕಾರದ ಮನೆ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

  ಈ ಕಾಮಗಾರಿ ನಡೆಯಬೇಕಿರುವ ಕಾರಣ ಸದರಿ 110 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
  Published by:guruganesh bhat
  First published: