Belagavi: ಸ್ವಯಂ ಉದ್ಯೋಗಕ್ಕೆ ಸಾಲ, ಸಹಾಯಧನ ಪಡೆಯಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮಗೂ ಸಾಲ ಅಥವಾ ಸಹಾಯಧನ ಅಗತ್ಯವಿದೆಯೇ? ಹಾಗಾದರೆ ಈ ಯೋಜನೆಯ ವಿವರಗಳೇನು? ಹೇಗೆ ಅರ್ಜಿ ಸಲ್ಲಿಸುವುದು? ಇಲ್ಲಿದೆ ಎಲ್ಲ ವಿವರ.

  • Share this:

ಬೆಳಗಾವಿ: ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಬೆಳಗಾವಿ 2022-23ನೇ ಸಾಲಿನ ಕ್ರಿಯಾ ಯೋಜನೆಯನ್ವಯ ವಿವಿಧ ಸಾಲ ಸೌಲಭ್ಯಗಳನ್ನು  ಪಡೆಯಲು ಅರ್ಹ ಅಲೆಮಾರಿ, ಅರೆ ಅಲೆಮಾರಿ ಸಮಾಜಕ್ಕೆ ಸೇರಿದವರಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಸ್ವಯಂ ಉದ್ಯೋಗ ಸಾಲ (Self Employment Scheme) ಮತ್ತು ಸಹಾಯಧನ ಯೋಜನೆಯ ಅಡಿಯಲ್ಲಿ ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು  ಗರಿಷ್ಠ ರೂ.2 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು (Loan Facility) ಶೇ. 4 ಬಡ್ಡಿದರದಲ್ಲಿ  ಒದಗಿಸಲಾಗುವುದು.  ಹಾಗಾದರೆ ಈ ಯೋಜನೆಯ ವಿವರಗಳೇನು? ಹೇಗೆ ಅರ್ಜಿ ಸಲ್ಲಿಸುವುದು? ಇಲ್ಲಿದೆ ಎಲ್ಲ ವಿವರ.


ಘಟಕ ವೆಚ್ಛ ರೂ. 50 ಸಾವಿರ ರೂ.ಗಳವರೆಗಿನ ಘಟಕ ವೆಚ್ಛದ ಆರ್ಥಿಕ  ಚಟುವಟಿಕೆಗಳಿಗೆ ಶೇ. 3೦ ರಷ್ಟು ಗರಿಷ್ಟ, ರೂ 10 ಸಾವಿರ ರೂ.ಗಳ ಸಹಾಯ ಧನವನ್ನು ಹಾಗೂ ಉಳಿಕೆ ಶೇ. 70 ರಷ್ಟು ಗರಿಷ್ಟ ರೂ.4೦ ಸಾವಿರ ರೂ.ಗಳು ರೂ.50 ಸಾವಿರದಿಂದ  1 ಲಕ್ಷ ರೂ.ಗಳವರೆಗಿನ ಘಟಕ ವೆಚ್ಛದ ಆರ್ಥಿಕ ಚಟುವಟಿಕೆಗಳಿಗೆ ಶೇ.20ರಷ್ಟು ಸಹಾಯಧನ ಉಳಿಕೆ ಶೇ.8೦ರಷ್ಟು ಗರಿಷ್ಠ ರೂ.80 ಸಾವಿರ ರೂ.ಗಳ ಸಾಲ,‌ 1 ಲಕ್ಷ ದಿಂದ 2 ಲಕ್ಷದವರೆಗಿನ  ಘಟಕ ವೆಚ್ಛಗಳ ಆರ್ಥಿಕ  ಚಟುವಟಿಕೆಗಳಿಗೆ ಕನಿಷ್ಠ ರೂ.20 ಸಾವಿರ ರೂ.ಗಳಿಂದ ಗರಿಷ್ಠ 30 ಸಾವಿರ ರೂ. ಸಹಾಯಧನ, ಉಳಿಕೆ ಮೊತ್ತ ಶೇ. 85ರಷ್ಟು ಗರಿಷ್ಟ ರೂ.1.70 ಲಕ್ಷ ರೂ.ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವುದು.


ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವರಿಗೆ ಇರಬೇಕಾದ ಅರ್ಹತೆಗಳು
ಈ ಯೋಜನೆಯ ಸೌಲಭ್ಯ ಪಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1 'ಎ' ರಲ್ಲಿನ ಬರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿ ಮತ್ತು ಉಪಜಾತಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98 ಸಾವಿರ ರೂ.ಗಳು, ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ರೂ.ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 18ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.


ಯಾರನ್ನು ಸಂಪರ್ಕಿಸಬೇಕು?
ಹೆಚ್ಚಿನ ಮಾಹಿತಿಗಾಗಿ  ನಿಗಮದ ಸಹಾಯವಾಣಿ ಸಂಖ್ಯೆ: 96606066389 ಹಾಗೂ ಬೆಳಗಾವಿ ಜಿಲ್ಲೆಯ ದೂರವಾಣಿ ಸಂಖ್ಯೆ - 0831-2402163  ಸಂಪರ್ಕಿಸಬಹುದಾಗಿದೆ.  ಆನ್ ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 20  ರಿಂದ ಆಗಸ್ಟ್ 03, 2022ರೊಳಗೆ ಸುವಿಧಾ ತಂತ್ರಾಂಶದ ಮುಖಾಂತರ ಸಲ್ಲಿಸಬಹುದು.


ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
ಈ ಮೇಲ್ಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ, ಸೂಚಿಸಲಾದ ಸಮುದಾಯದವ ಅರ್ಹರು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಜಾಲತಾಣದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು . ನಿಗಮದ ವೆಬ್‌ಸೈಟ್​ನಲ್ಲಿ ಅರ್ಜಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: Belagavi: 3 ಬಣ್ಣಗಳಾಗಿ ಬದಲಾಗುತ್ತೆ ಪಾರ್ಶ್ವನಾಥ ತೀರ್ಥಂಕರರ‌ ಪ್ರತಿಮೆ! ಮೂರ್ತಿಯ ಮೇಲಿದೆ ಕನ್ನಡ ಶಾಸನ


ಈ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲು ಸುವಿಧಾ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅರ್ಜಿದಾರರು ಆಧಾರ ಜೋಡನೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್​ನಲ್ಲಿರುವಂತೆ ಅರ್ಜಿದಾರರ ಹೆಸರು/ವಿಳಾಸ/ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್​ ಪುಸ್ತಕದಲ್ಲಿ ತಾಳೆ ಆಗಬೇಕು.


ಇದನ್ನೂ ಓದಿ: Belagavi Jute Bags: ಬೆಳಗಾವಿ ಮಹಿಳೆಯರ ಸೆಣಬಿನ ಬ್ಯಾಗ್​ಗೆ ಅಮೆರಿಕಾ, ಯೂರೋಪ್ ಫಿದಾ!

top videos


    (ಶ್ರೀ/ಶ್ರೀಮತಿ/ಕುಮಾರಿ ಮುಂತಾದ ಮಾಹಿತಿಗಳು) ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯ ಅವಧಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ.

    First published: